Advertisement
ಉಪೇಂದ್ರ ನಟನೆಯ “ಕಬ್ಜ’ ಚಿತ್ರದ ಕೊನೆ ಯಲ್ಲೂ “ಕಬ್ಬ-2′ ಎಂದು ಹಾಕಲಾಗಿತ್ತು. ಶಿವರಾಜ್‌ಕುಮಾರ್ ಅವರ “ಘೋಸ್ಟ್’ ಸಿನಿಮಾ ಕೂಡಾ “ಘೋಸ್ಟ್-2′ ಬರುವುದಾಗಿ ಹೇಳಿತ್ತು. “ಸಲಾರ್’ ಕೂಡಾ “ಸಲಾರ್-2′ ಘೋಷಣೆ ಮಾಡಿತ್ತು. ಇತ್ತೀಚೆಗೆ ತೆರೆಕಂಡ “ಭೀಮ’ ಕೂಡಾ ಮತ್ತೂಂದು ಸಿನಿಮಾಕ್ಕೆ ಲೀಡ್ ಕೊಟ್ಟಿತ್ತು. ಅಷ್ಟೇ ಅಲ್ಲ, ಇತ್ತೀಚೆಗೆ ತೆರೆಕಂಡ “ಪೆಪೆ’, “ಪೌಡರ್’ ಚಿತ್ರಗಳು ಕೂಡಾ ಮುಂದುವರೆದ ಭಾಗದ ಸೂಚನೆಯೊಂದಿಗೆ ಕೊನೆಗೊಂಡಿದ್ದವು. ಹಾಗಾದರೆ ನಿಜಕ್ಕೂ ಈ ಚಿತ್ರಗಳು ಮುಂದುವರೆಯುತ್ತಾ ಎಂದು ಕೇಳಿದರೆ, ಆ ಚಿತ್ರಗಳ ಮೊದಲ ಭಾಗದ ಗೆಲುವಿನ ಮೇಲೆ ಅವಲಂಬಿತವಾಗಿರುತ್ತವೆ. ಮೊದಲ ಭಾಗವೇನಾದರೂ ದೊಡ್ಡ ಮಟ್ಟದಲ್ಲಿ ಗೆದ್ದು, ಬಿಝಿನೆಸ್‌ನಲ್ಲೂ ಸದ್ದು ಮಾಡಿದರೆ ಚಿತ್ರತಂಡ ಪಾರ್ಟ್-2 ಮಾಡುವ ಯೋಚನೆ ಮಾಡುತ್ತದೆ. ಇಂತಹ ಸಂದರ್ಭದಲ್ಲಿ ಮತ್ತೆ ಕಥೆಗೆ ಹೊಸ ರೂಪ ಕೊಡಬೇಕಾಗುತ್ತದೆ. ಇದರ ಜೊತೆಗೆ ಮೊದಲ ಭಾಗ¨ನಾಯಕ ನಟನ ಕಮಿಟ್ ಮೆಂಟ್ ಹಾಗೂ ಆ ತಂಡದ ಜೊತೆಗಿನ ಸಂಬಂಧ ಕೂಡಾಮುಖ್ಯವಾಗುತ್ತದೆ. ಅದೆಷ್ಟೋ ನಾಯಕ ನಟರು ಸಿನಿಮಾ ಮುಗಿಯುವ ಹೊತ್ತಿಗೆ ತಂಡದದಿಂದ ದೊಡ್ಡ ಅಂತರ ಕಾಯ್ದು ಕೊಂಡಿರುತ್ತಾರೆ. ಹೀಗಿರುವಾಗ ಮತ್ತೆ ಅವರೊಂದಿಗೆ ಸಿನಿಮಾ ಮಾಡಬೇಕಾದರೆ ಹೊಸ “ಬೆಸುಗೆ’ಯೇ ಬೇಕಾಗುತ್ತದೆ.
Related Articles
Advertisement
ಇತ್ತೀಚಿನ ವರ್ಷಗಳಲ್ಲಿ ಕನ್ನಡದಲ್ಲಿ ಪ್ಯಾನ್ ಇಂಡಿಯಾ ಕ್ರೇಜ್ ಜೊತೆಗೆ ಪಾರ್ಟ್-2 ಕ್ರೇಜ್ ಹುಟ್ಟಿಸಿದ್ದು ಯಶ್ ನಟನೆಯ “ಕೆಜಿಎಫ್’. ಮೊದಲ ಭಾಗ ದೊಡ್ಡ ಹಿಟ್ ಆಗುವ ಮೂಲಕ ಚಿತ್ರತಂಡ ಎರಡನೇ ಭಾಗ ಮಾಡುವ ಮನಸು ಮಾಡಿತು. ಆ ಚಿತ್ರ ಕೂಡಾ ಭರ್ಜರಿ ಯಶಸ್ಸು ಕಂಡಿತು. ಇದರೊಂದಿಗೆ ಸ್ಯಾಂಡಲ್‌ವುಡ್‌ನಲ್ಲಿ ಪಾರ್ಟ್-2 ಕ್ರೇಜ್ ಜೋರಾಯಿತು ಎಂದರೆ ತಪ್ಪಲ್ಲ. ಆ ನಂತರ ಕೆಲವು ಸಿನಿಮಾಗಳು ಪಾರ್ಟ್-2 ಆಗಿ ಬಂದರೂ “ಕೆಜಿಎಫ್’ ಮಟ್ಟದ ಯಶಸ್ಸು ಸಿಗಲಿಲ್ಲ.
ಕಾಂತಾರದ ಗೆಲುವಲ್ಲಿ ಪ್ರೀಕ್ವೆಲ್
ಸದ್ಯ ಸಿನಿಮಾಗಳ ಮುಂದುವರೆದ ಭಾಗಗಳ ವಿಚಾರದಲ್ಲಿ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿರುವುದು ರಿಷಬ್ ನಿರ್ದೇಶನದ “ಕಾಂತಾರ-1′. ಚಿತ್ರತಂಡ ಹೇಳಿಕೊಂಡಂತೆ ಇದು ಸೀಕ್ವೆಲ್ ಅಲ್ಲ, ಪ್ರೀಕ್ವೆಲ್, ಕಾರಣ “ಕಾಂತಾರ’ದ ದೊಡ್ಡ ಯಶಸ್ಸು. ಕನ್ನಡದ ಈ ಚಿತ್ರ ಪ್ಯಾನ್ ಇಂಡಿಯಾ, ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸದ್ದು ಮಾಡಿ, ಚಿತ್ರತಂಡವೇ ದಂಗಾಗುವಂತಹ ಬಿಝಿನೆಸ್ ಮಾಡಿತು. ಅಲ್ಲಿಂದ ರಿಷಬ್ ಶೆಟ್ಟಿ ಎಂಬ ಕೆರಾಡಿಯ ಪ್ರತಿಭೆ ಪ್ಯಾನ್ ಮಟ್ಟದಲ್ಲಿ ಗುರುತಿಸಿಕೊಂಡರು. ಈ ಮೂಲಕ “ಕಾಂತಾರ’ ದ ಮತ್ತೂಂದು ಭಾಗ ಮಾಡುವ ಕನಸು ಹುಟ್ಟಿತು. ಅಲ್ಲಿಂದ ಕಥೆ ಆರಂಭವಾಗಿ ಈಗ ಭರ್ಜರಿ ಶೂಟಿಂಗ್ ಕೂಡಾ ನಡೆಯುತ್ತಿದೆ.
ರವಿಪ್ರಕಾಶ್ ರೈ