Advertisement

ಹೊಸ ಸರಕಾರ ರಚನೆ ಆಗುವವರೆಗೆ ಕಾಯಿರಿ

01:21 AM May 02, 2019 | Team Udayavani |

ಹೊಸದಿಲ್ಲಿ: ಇರಾನ್‌ನಿಂದ ತೈಲ ಆಮದು ಮಾಡಲು ಹೊಸ ಸರಕಾರ ಬರುವವರೆಗೂ ಅವಕಾಶ ನೀಡುವಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅಮೆರಿಕದ ವಿದೇಶಾಂಗ ಸಚಿವ ಮೈಕ್‌ ಪೋಂಪೊÂàಗೆ ಆಗ್ರಹಿಸಿದ್ದಾರೆ.

Advertisement

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸರಕಾರದ ನಿಷೇಧ ಮೇ 2ರಿಂದ ಜಾರಿಗೆ ಬರಲಿದ್ದು, ಇದನ್ನು ಹೊಸ ಸರಕಾರ ಅಸ್ತಿತ್ವಕ್ಕೆ ಬರುವವರೆಗೆ ತಡೆಯುವಂತೆ ಆಗ್ರಹಿಸಿದ್ದಾರೆ.

ಆದರೆ ಈಗಾಗಲೇ ಅಮೆರಿಕ ಸ್ಪಷ್ಟನೆ ನೀಡಿರುವಂತೆ, ಯಾವುದೇ ಹೆಚ್ಚುವರಿ ಸಮಯಾವಕಾಶವನ್ನು ಭಾರತ ಸೇರಿದಂತೆ ಇತರ ದೇಶಗಳಿಗೆ ನೀಡದಿರಲು ನಿರ್ಧರಿಸಿದೆ. ಅಲ್ಲದೆ, ತೈಲ ಪೂರೈಕೆಯಲ್ಲಿ ಯಾವುದೇ ಕೊರತೆಯಾಗದಂತೆ ನಿರ್ವಹಿಸಲಾಗುತ್ತದೆ ಎಂದೂ ಅಮೆರಿಕ ಭರವಸೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next