Advertisement

“ಕೆಜಿಎಫ್’ಅಧಿಕೃತ ಕಲೆಕ್ಷನ್‌ಗೆ ಒಂದು ತಿಂಗಳು ಕಾಯಿರಿ

05:51 AM Jan 16, 2019 | |

“ಕೆಜಿಎಫ್’ ಚಿತ್ರ ಬಿಡುಗಡೆಯಾಗಿ ಎಲ್ಲಾ ಭಾಷೆಗಳಲ್ಲೂ ಯಶಸ್ಸು ಕಂಡಿರೋದು ಗೊತ್ತೇ ಇದೆ. ಚಿತ್ರ ದೊಡ್ಡ ಯಶಸ್ಸಿನತ್ತ ದಾಪುಗಾಲು ಹಾಕುತ್ತಿದ್ದಂತೆ ಚಿತ್ರದ ಕಲೆಕ್ಷನ್‌ ಸುದ್ದಿಗಳ ಜೋರಾಗಿ ಕೇಳಿಬರಲಾರಂಭಿಸಿದವು. ಮುಖ್ಯವಾಗಿ ಚಿತ್ರ 100 ಕೋಟಿ ಕಲೆಕ್ಷನ್‌ ಮಾಡಿತು, 200 ಕೋಟಿ ಮಾಡಿತು … ಹೀಗೆ ಕಲೆಕ್ಷನ್‌ ಕುರಿತಾಗಿ ನಾನಾ ಸುದ್ದಿಗಳು ಹರಿದಾಡುತ್ತಿತ್ತು.

Advertisement

ಆದರೆ, ಚಿತ್ರದ ನಿಜವಾದ ಕಲೆಕ್ಷನ್‌ ಎಷ್ಟು, 25 ದಿನಗಳಲ್ಲಿ ಚಿತ್ರ ಎಷ್ಟು ಕಲೆಕ್ಷನ್‌ ಮಾಡಿದೆ. ಈ ಪ್ರಶ್ನೆಯನ್ನು ನಿರ್ಮಾಪಕ ವಿಜಯ್‌ ಕಿರಗಂದೂರು ಅವರ ಮುಂದಿಟ್ಟರೆ, “ಒಂದು ತಿಂಗಳು ಬಿಟ್ಟು ಪಕ್ಕಾ ಲೆಕ್ಕ ಕೊಡುವೆ’ ಎಂಬ ಉತ್ತರ ಬರುತ್ತದೆ. “ಚಿತ್ರ ಬಿಡುಗಡೆಯಾದ ಎಲ್ಲಾ ಕಡೆಗಳಲ್ಲೂ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಮುಖ್ಯವಾಗಿ ವಿದೇಶಗಳಲ್ಲೂ ಜನ ಚಿತ್ರವನ್ನು ಖುಷಿಯಿಂದ ಸ್ವೀಕರಿಸಿದ್ದಾರೆ.

ಪಾಕಿಸ್ತಾನದಲ್ಲೂ ಚಿತ್ರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹಿಂದಿಯಲ್ಲಿ ಇನ್ನೂ 600 ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಈಗಲೇ ಕಲೆಕ್ಷನ್‌ ಬಗ್ಗೆ ಹೇಳುವುದು ಕಷ್ಟ. ಒಂದು ತಿಂಗಳು ಬಿಟ್ಟು ನಾನೇ ಎಲ್ಲವನ್ನು ಹೇಳುತ್ತೇನೆ’ ಎನ್ನುವುದು ವಿಜಯ್‌ ಕಿರಗಂದೂರು ಮಾತು. 

ಹಾಗಾದರೆ, 100-200 ಕೋಟಿ ಕಲೆಕ್ಷನ್‌ ಸುದ್ದಿಗಳು ಅಧಿಕೃತವಲ್ಲವೇ ಎಂದರೆ, “ಅವ್ಯಾವುದು ಅಧಿಕೃತವಲ್ಲ. ನಾನಾಗಲೀ, ನಮ್ಮ ಚಿತ್ರತಂಡದ ಸದಸ್ಯರಾಗಲೀ ಎಲ್ಲೂ ಕಲೆಕ್ಷನ್‌ ಬಗ್ಗೆ ಮಾತನಾಡಿಲ್ಲ. ಹಾಗಾಗಿ, ಕಲೆಕ್ಷನ್‌ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ಯಾವುವು ಅಧಿಕೃತವಲ್ಲ. ಅದಕ್ಕೂ ನಮಗೂ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸುತ್ತಾರೆ ವಿಜಯ್‌ ಕಿರಗಂದೂರು.  

Advertisement

Udayavani is now on Telegram. Click here to join our channel and stay updated with the latest news.

Next