Advertisement

ವಾಡಿ ಪುರಸಭೆ: ನೀರಿನ ತೆರಿಗೆ ಹೆಚ್ಚಳ; ಬಿಜೆಪಿ ವಿರೋಧ

03:02 PM Feb 23, 2022 | Team Udayavani |

ವಾಡಿ: ಪಟ್ಟಣದ ಪುರಸಭೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರಿನ ತೆರಿಗೆ ಹೆಚ್ಚಳ ಮತ್ತು ಕಸ ವಿಲೇವಾರಿ ಶುಲ್ಕ ಸಂಗ್ರಹ ಕುರಿತು ಪರ ವಿರೋಧ ಚರ್ಚೆ ನಡೆದು ವಾಗ್ವಾದಕ್ಕೆ ಕಾರಣವಾಯಿತು.

Advertisement

ಕುಡಿಯುವ ನೀರಿಗೆ ವರ್ಷದ ಶುಲ್ಕ 300 ರೂ. ಹೆಚ್ಚಳ ಹಾಗೂ ಕಸ ವಿಲೆವಾರಿ ನಿರ್ವಹಣೆಗಾಗಿ ಸಾರ್ವಜನಿಕರಿಂದ ವಾರ್ಷಿಕ ರೂ. 250 ವಸೂಲಿಗೆ ಸಭೆ ಒಪ್ಪಿಗೆ ನೀಡಲಾಗಿದೆ. ನೀರಿನ ತೆರಿಗೆ ಹೆಚ್ಚಳಕ್ಕೆ ವಿರೋಧ ಪಕ್ಷ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿ,ಜನರಿಗೆ ಕುಡಿಯಲು ಶುದ್ಧ ನೀರು ಕೊಡದೆ ತೆರಿಗೆ ಹೆಚ್ಚಿಸಿದರೆ ಸುಮ್ಮನಿರಲ್ಲ ಎಂದು ವಿರೋಧ ಪಕ್ಷದ ನಾಯಕ ಭೀಮಶಾ ಜಿರೋಳಿ ಎಚ್ಚರಿಕೆ ನೀಡಿದರು.

ರಸ್ತೆ ಅಭಿವೃದ್ಧಿಯಲ್ಲಿ ಅವ್ಯವಹಾರ ಕಂಡು ಬಂದಿದ್ದು, ವಿದ್ಯುತ್ ದೀಪಗಳ ಖರೀದಿಯಲ್ಲೂ ನಕಲಿ ಬಿಲ್  ಹಾಕಿ ನೀರಿನ ಮೋಟಾರ್ ರಿಪೇರಿಗೆ ಡಬಲ್ ಬಿಲ್ ಹಾಕಲಾಗಿದೆ. ಐದು ವೃತ್ತಗಳಲ್ಲಿರುವ ಹೈಮಾಸ್ಟ್ ದೀಪಗಳು ಐದಾರು ವರ್ಷಗಳಿಂದ ಬೆಳಕು ನೀಡುತ್ತಿಲ್ಲ. ಬೀದಿ ದೀಪಗಳ ಹೆಸರಲ್ಲೂ ಪುರಸಭೆಯ ಹಣ ದುರುಪಯೋಗವಾಗುತ್ತಿದೆ ಪುರಸಭೆಯ ವಿವಿಧ ಯೋಜನೆಗಳ ಲಕ್ಷಾಂತರ ರೂ. ಅನುದಾನ ಕಾಂಗ್ರೆಸ್ ಆಡಳಿತ ಲೂಟಿ ಮಾಡುತ್ತದೆ. ಪುರಸಭೆಯ ಕಾಂಗ್ರೆಸ್ ಆಡಳಿತವು ಕಾಂಗ್ರೆಸ್ ಸದಸ್ಯರಿಗೆ ಗುತ್ತಿಗೆ ನೀಡಿ ಅನುದಾನ ಲಪಟಾಯಿಸಲಾಗುತ್ತಿದೆ ಎಂದು ಕಾಂಗ್ರೆಸ್ ಆಡಳಿತದ ವಿರುದ್ಧ ಪ್ರತಿಪಕ್ಷದ ಬಿಜೆಪಿ ಸದಸ್ಯರು ವಾಗ್ದಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next