Advertisement

ವಾಡಿ: ಆಶ್ರಯ ಮನೆಗಾಗಿ 4 ಲಕ್ಷ ವಂತಿಗೆ ಪಾವತಿಸಿ

11:49 AM Mar 04, 2020 | Naveen |

ವಾಡಿ: ಪಟ್ಟಣದ ಹೊರ ವಲಯದಲ್ಲಿ ಪುರಸಭೆ ವತಿಯಿಂದ ನಿರ್ಮಿಸಲಾಗುತ್ತಿರುವ ಆಶ್ರಯ ಮನೆಗಳ ಸೌಲಭ್ಯ ಪಡೆದುಕೊಳ್ಳಲು ಆಸಕ್ತ ಅರ್ಹ ಫಲಾನುಭವಿಗಳು 4 ಲಕ್ಷ ರೂ. ಪಾವತಿಸಬೇಕು ಎಂದು ಪುರಸಭೆ ಆಡಳಿತ ಆದೇಶ ಹೊರಡಿಸಿದೆ.

Advertisement

ಈ ಕುರಿತು ಮಂಗಳವಾರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಪುರಸಭೆ ಮುಖ್ಯಾಧಿ ಕಾರಿ ವಿಠuಲ ಹಾದಿಮನಿ, ವಾಡಿ ಪಟ್ಟಣವನ್ನು ವಿಸ್ತರಿಸಲು ಹಾಗೂ ವಸತಿ ರಹಿತ ಅರ್ಹ ಫಲಾನುಭವಿಗಳಿಗೆ ಸರಕಾರದ ವತಿಯಿಂದ ಮನೆಗಳನ್ನು ಒದಗಿಸಲು ಯೋಜನೆ ರೂಪಿಸಲಾಗಿದೆ. ಪಿಎಂಎವೈ ಯೋಜನೆಯಡಿ ಜಿ+1 ಮಾದರಿಯ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಒಂದು ಮನೆ ನಿರ್ಮಾಣಕ್ಕೆ 5.50 ಲಕ್ಷ ರೂ. ಮೊತ್ತ ತಗಲುತ್ತಿದೆ. ಸರಕಾರದಿಂದ 1.50 ಲಕ್ಷ ರೂ. ಭರಿಸುತ್ತಿದೆ. ಉಳಿದ 4 ಲಕ್ಷ ರೂ. ವಂತಿಗೆ ಹಣವನ್ನು ಫಲಾನುಭವಿಗಳೆ ಪಾವತಿಸಬೇಕಿದೆ. ವಂತಿಗೆ ಪಾವತಿಸುವವರನ್ನು ಮಾತ್ರ ಫಲಾನುಭವಿಯಾಗಿ ಆಯ್ಕೆ ಮಾಡಲಾಗುತ್ತದೆ. ಆಸಕ್ತರು ಪುರಸಭೆ ಕಚೇರಿ ಸಂಪರ್ಕಿಸಲು ಕೋರಿದ್ದಾರೆ.

ಅಂಬೇಡ್ಕರ್‌-ವಾಜಪೇಯಿ ವಸತಿ ಯೋಜನೆ ಬ್ಲಾಕ್‌: 2015/16 ಹಾಗೂ 17ನೇ ಸಾಲಿನ ಡಾ| ಅಂಬೇಡ್ಕರ್‌ ಆವಾಸ್‌ ಯೋಜನೆ ಮತ್ತು ವಾಜಪೇಯಿ ವಸತಿ ಯೋಜನೆಯಡಿ ಮಂಜೂರಾದ ಮನೆಗಳನ್ನು ಫಲಾನುಭವಿಗಳು ನಿರ್ಮಿಸಿಕೊಳ್ಳದ ಕಾರಣ ಅರ್ಜಿಗಳನ್ನು ಬ್ಲಾಕ್‌ ಮಾಡಲಾಗಿದೆ. ಈ ಮಧ್ಯೆ ರಾಜೀವಗಾಂ ಧಿ ಗ್ರಾಮೀಣ ವಸತಿ ನಿಗಮವು ಮಾರ್ಚ್‌ 14ರ ವರೆಗೆ ಮನೆ ನಿರ್ಮಿಸಿಕೊಂಡು ಫೋಟೋ ಅಪ್ಲೋಡ್‌ ಮಾಡುವಂತೆ ಆದೇಶಿಸಿದೆ.

ನಿಗದಿತ ದಿನಾಂಕದೊಳಗೆ ಮನೆ ಕಟ್ಟಡ ಆರಂಭಿಸದಿದ್ದರೆ ಈ ಮನೆಗಳ ಅರ್ಜಿಗಳನ್ನೂ ಬ್ಲಾಕ್‌ ಮಾಡಲಾಗುತ್ತದೆ ಎಂದು ಮುಖ್ಯಾಧಿಕಾರಿಗಳು ಫಲಾನುಭವಿಗಳಿಗೆ ನೋಟಿಸ್‌ ಜಾರಿ ಮಾಡುವ ಮೂಲಕ ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next