Advertisement

Wadgera; ಜಮೀನಿನಲ್ಲಿ ಕಾಣಿಸಿಕೊಂಡು ರೈತರಿಗೆ ಆತಂಕ ತಂದ ಮೊಸಳೆ

03:28 PM May 16, 2024 | Team Udayavani |

ಯಾದಗಿರಿ: ಜಿಲ್ಲೆಯ ವಡಗೇರಾ ತಾಲೂಕಿನ‌ ಕುರಕುಂದಿ ಗ್ರಾಮದ ಜಮೀನಿನಲ್ಲಿ ಮೊಸಳೆಯೊಂದು‌ ಕಾಣಿಸಿಕೊಂಡಿದ್ದು, ರೈತರು ಆತಂಕಗೊಂಡು ಅದನ್ನು ಓಡಿಸಲು ಹರಸಾಹಸ ಪಡುವತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Advertisement

ನದಿಗಳು ಬತ್ತಿದ್ದು ಆಹಾರ ಸಿಗದ ಹಿನ್ನೆಲೆಯಲ್ಲಿ ಮೊಸಳೆ ಆಹಾರವನ್ನರಸಿ ಹೊಲ, ಗದ್ದೆಗಳಿಗೆ ಬಂದಿದೆ. ಕುರಕುಂದಿ ಗ್ರಾಮದ ಜನರು ಮೊಸಳೆ ಕಂಡು ಭಯಬೀತರಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಕೂಡಿಕೊಂಡು ಮೊಸಳೆಯನ್ನು ಪುನಃ ನದಿಗೆ ಬಿಡುವ ಕಾರ್ಯ ಮಾಡಿದ್ದಾರೆ.

ನದಿ ಬತ್ತಿಹೋದ ಕಾರಣ ಸಮೀಪ ಇರುವ ಭತ್ತದ ಗದ್ದೆಗೆ ಬಂದ ಮೊಸಳೆಯನ್ನು ಗದ್ದೆಯ ರೈತ ಕಂಡು ಭಯಭೀತನಾಗಿದ್ದಾನೆ. ನಂತರ ಎಲ್ಲರೂ ಸೇರಿ ಅದನ್ನು ಓಡಿಸಲು ಪ್ರಯತ್ನಿಸಿದ್ದಾರೆ. ಕೊನೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಮೊಸಳೆಯನ್ನು ನದಿಗೆ ಬಿಡುವಲ್ಲಿ ಯಶಸ್ವಿಯಾದರು.

ವಡಗೇರಾ ಪೊಲೀಸ್ ಠಾಣೆ ವ್ಯಾಪಿಯಲ್ಲಿ‌ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next