Advertisement

ವಡಾಲ ರಾಮ ಮಂದಿರ: ಸಂತ ವಿರಾಸತ್‌ ಸಂಗೀತ ನಾಟಕ ಸಮಾವೇಶ

06:39 PM Sep 27, 2019 | Team Udayavani |

ಮುಂಬಯಿ, ಸೆ. 26: ಜಿಎಸ್‌ಬಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವಡಾಲ ಪ್ರಾಯೋಜಕತ್ವದಲ್ಲಿ ಸಂತ ವಿರಾಸತ್‌ ಮಹಾರಾಷ್ಟ್ರ ಶ್ರೇಷ್ಠ ಸಂತರ ಕುರಿತು ಕೀರ್ತನ ಅಭಂಗ, ಭಜನೆ ಹಾಗೂ ಅಭಿನಯಗಳಿಂದ ಕೂಡಿದ ಕೊಂಕಣಿ ಸಂಗೀತ ನಾಟಕವು ಸೆ. 22ರಂದು ಅಪರಾಹ್ನ3.30ರಿಂದ ವಡಾಲದ ದ್ವಾರಕಾನಾಥ ಭವನದಲ್ಲಿ ನಡೆಯಿತು.

Advertisement

ಜಿಎಸ್‌ಬಿ ಸಭಾ ಮಹಿಳಾ ಶಾಖೆ ಮುಂಬಯಿ ಇವರ ನಿರ್ಮಾಪಕತ್ವದಲ್ಲಿ ಹಾಗೂ ಬೀನಾ ಶೆಣೈ ಅವರ ದಿಗದರ್ಶನದಲ್ಲಿ ಈ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಾಯಿತು. ಮಾಯಾ ನಾಯಕ್‌ ಮತ್ತು ತಂಡದವರು ಸಂಗೀತದಲ್ಲಿ ಸಹಕರಿಸಿದರು. ಗೋಕರ್ಣ ಪರ್ತಗಾಳಿ ಜೀವೋ ತ್ತಮ ಮಠಾಧೀಶರಾದ ಶ್ರೀಮದ್‌ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ್‌ ಸ್ವಾಮೀಜಿ ಮತ್ತು ಪಟ್ಟಶಿಷ್ಯ ಶ್ರೀಮದ್‌ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮವು ಜರಗಿತು.

ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಗೌರವಾಧ್ಯಕ್ಷ ಲಕ್ಷ್ಮೀಕಾಂತ್‌ ಪ್ರಭು, ಜಿಎಸ್‌ಬಿ ಸಭಾ ಮುಂಬಯಿ ಗೌರವ ಕೋಶಾಧಿಕಾರಿ ಉದಯ ಮಲ್ಯ, ಸಂಸ್ಥೆಯ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಕಲಾಭಿಮಾನಿಗಳು, ಸಮಾಜ ಬಾಂಧವರು, ಶ್ರೀಗಳ

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲ ಕಲಾವಿದರನ್ನು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಶ್ರೀಮದ್‌ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ್‌ ಸ್ವಾಮೀಜಿ ಮತ್ತು ಪಟ್ಟಶಿಷ್ಯ ಶ್ರೀಮದ್‌ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು ಫಲಪುಷ್ಪ, ಪ್ರಸಾದವನ್ನಿತ್ತು ಅನುಗ್ರಹಿಸಿದರು

Advertisement

Udayavani is now on Telegram. Click here to join our channel and stay updated with the latest news.

Next