Advertisement

ಅಲ್ಲಮನ ಜೀವನ ಚಿತ್ರಣ  ‘ವ್ಯೋಮಕಾಯ ಸಿದ್ದ ಶ್ರೀಅಲ್ಲಮಪ್ರಭು’

04:22 PM Jun 04, 2022 | Team Udayavani |

ಹನ್ನೆರಡನೆಯ ಶತಮಾನದ ಮಹಾಶರಣ ಶ್ರೀಅಲ್ಲಮಪ್ರಭು ಅವರ ಜೀವನಾಧಾರಿತ ” ವ್ಯೋಮಕಾಯ ಸಿದ್ದ ಶ್ರೀಅಲ್ಲಮಪ್ರಭು’ ಚಿತ್ರದ ಟ್ರೇಲರ್‌ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಶ್ರೀರಾಮಸೇನೆ ಮುಖ್ಯಸ್ಥರಾದ ಪ್ರಮೋದ್‌ ಮುತಾಲಿಕ್‌, ನಟ ನೆನಪಿರಲಿ ಪ್ರೇಮ್‌ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ. ಮ ಹರೀಶ್‌ ಮುಖ್ಯ ಅತಿಥಿಗಳಾಗಿ ಆಗಮಿಸಿ, ಚಿತ್ರತಂಡಕ್ಕೆ ಶುಭ ಕೋರಿದರು.

Advertisement

ಇದೇ ವೇಳೆ ಮಾತನಾಡಿದ ಪ್ರಮೋದ್‌ ಮುತಾಲಿಕ್‌, “ನನಗೂ ಚಿತ್ರರಂಗಕ್ಕೂ ಸಂಬಂಧವಿಲ್ಲ. ನನ್ನ ಕ್ಷೇತ್ರವೇ ಬೇರೆ. ಆದರೂ ನನ್ನನ್ನು ಏಕೆ ಕರೆದರೂ ಎಂದು ಯೋಚಿಸುತ್ತಿದ್ದೆ? ಅವರು ನನ್ನ ಮೇಲಿಟ್ಟಿರುವ ಪ್ರೀತಿ ಅಪಾರ. ಹಾಗಾಗಿ ಬಂದಿದ್ದೀನಿ. ಕಮರ್ಷಿಯಲ್‌ ಚಿತ್ರಗಳ ಪೈಪೋಟಿ ಇರುವ ಈ ಸಮಯದಲ್ಲಿ ಇಂತಹ ಕಥೆ ಆಯ್ದುಕೊಂಡಿರುವ ನಿರ್ಮಾಪಕರಿಗೆ ಮೊದಲು ಧನ್ಯವಾದ ತಿಳಿಸಬೇಕು. ವೀರಭೂಮಿ, ಧರ್ಮಭೂಮಿ, ಪುಣ್ಯಭೂಮಿ ಅಂತ ಬೇರೆ ಯಾವ ದೇಶಕ್ಕೂ ಹೆಸರಿಲ್ಲ. ಆ ಎಲ್ಲಾ ಹೆಸರುಗಳಿರುವುದು ನಮ್ಮ ಭಾರತಕ್ಕೆ ಮಾತ್ರ. ಭಾರತಕ್ಕೆ ಈ ರೀತಿಯ ಹೆಸರು ಬರಲು ಸಾಕಷ್ಟು ಜನ ಸಾಧು-ಸಂತರು ಇಲ್ಲಿ ಅವತರಿಸುವುದೇ ಕಾರಣ. ಅಂತಹ ಮಹಾಪುರುಷರಾದ ಶ್ರೀಅಲ್ಲಮಪ್ರಭುಗಳ ಕುರಿತಾದ ಈ ಚಿತ್ರಕ್ಕೆ ಶುಭವಾಗಲಿ’ ಎಂದು ಹಾರೈಸಿದರು.

ಮಾಧವಾನಂದ ನಿರ್ಮಾಣದಲ್ಲಿ ಮೂಡಿಬರುತ್ತಿರುವ ” ವ್ಯೋಮಕಾಯ ಸಿದ್ದ ಶ್ರೀಅಲ್ಲಮಪ್ರಭು’ ಚಿತ್ರಕ್ಕೆ ಶರಣ್‌ ಗದ್ವಾಲ್ ನಿರ್ದೇಶನವಿದೆ. ಸಚಿನ್‌ ಸುವರ್ಣ, ನೀನಾಸಂ ಅಶ್ವಥ್‌, ರಮೇಶ್‌ ಪಂಡಿತ್‌, ಶೃಂಗೇರಿ ರಾಮಣ್ಣ, ಗಣೇಶ್‌ ರಾವ್‌ ಮುಂತಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಗಿರಿ ಛಾಯಾಗ್ರಹಣ, ಕೆಂಪರಾಜ್‌ ಸಂಕಲನವಿದೆ

Advertisement

Udayavani is now on Telegram. Click here to join our channel and stay updated with the latest news.

Next