ಕ್ರೈಸ್ಟ್ ಚರ್ಚ್: ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರು ಅಸ್ಥಿರ ಪ್ರದರ್ಶನದ ಹೊರತಾಗಿಯೂ ಸತತ ಅವಕಾಶ ಪಡೆಯುತ್ತಿದ್ದಾರೆ. ಟೀಂ ಮ್ಯಾನೇಜ್ ಮೆಂಟ್ ಕೂಡಾ ಸಂಜು ಸ್ಯಾಮ್ಸನ್ ಅವರ ಬದಲಿಗೆ ಪಂತ್ ಗೆ ಅವಕಾಶ ನೀಡುತ್ತಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೂ ಕಾರಣವಾಗುತ್ತಿದೆ.
ಕಿವೀಸ್ ವಿರುದ್ಧ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಸಂಜು ಕಣಕ್ಕಿಳಿದಿದ್ದರು. 34 ರನ್ ಗಳಿಸಿ ಶ್ರೇಯಸ್ ಅಯ್ಯರ್ ಜತೆ ಬಹುಮೂಲ್ಯ ಜೊತೆಯಾಟ ನಡೆಸಿದ್ದರು. ಆದರೆ ನಂತರದ ಪಂದ್ಯಗಳಿಗೆ ಅವರನ್ನು ಕೈಬಿಡಲಾಗಿದೆ. ಮತ್ತೊಂದೆಡೆ ಪಂತ್ ಗೆ ಸತತ ಅವಕಾಶ ನೀಡುತ್ತಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಪಂತ್ ಬಗ್ಗೆ ಮಾತನಾಡಿದ ಕೋಚ್ ವಿವಿಎಸ್ ಲಕ್ಷ್ಮಣ್ , “ ರಿಷಭ್ ಪಂತ್ ನಾಲ್ಕನೇ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ’ ಎಂದಿದ್ದಾರೆ.
ಇದನ್ನೂ ಓದಿ:ಫಲಿತಾಂಶ ಬರೋವರೆಗೂ ಕಾದು ನೋಡಿ…ಗುಜರಾತ್ ನಲ್ಲಿ AAP ಖಾತೆಯನ್ನೇ ತೆರೆಯಲ್ಲ: ಶಾ
“ಪಂತ್ ನಂ.4 ರಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಓಲ್ಡ್ ಟ್ರಾಫರ್ಡ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಪ್ರಮುಖ ಶತಕ ಗಳಿಸಿದ್ದರು. ಅವರನ್ನು ಬೆಂಬಲಿಸುವುದು ಮುಖ್ಯ” ಎಂದು ವಿವಿಎಸ್ ಲಕ್ಷ್ಮಣ್ ಮೂರನೇ ಏಕದಿನ ಪಂದ್ಯಕ್ಕೂ ಮುನ್ನ ಅವರು ಅಮೆಜಾನ್ ಪ್ರೈಮ್ ವಿಡಿಯೋ ಜೊತೆಗಿನ ಸಂವಾದದಲ್ಲಿ ಹೇಳಿದರು.
ರಿಷಭ್ ಪಂತ್ ಅವರು ಈ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 15 ರನ್ ಗಳಿಸಿದ್ದರೆ, ಎರಡನೇ ಪಂದ್ಯ ರದ್ದಾಗಿತ್ತು. ಇಂದಿನ ಪಂದ್ಯದಲ್ಲಿ 10 ರನ್ ಗಳಿಸಿದ್ದಾರೆ.