Advertisement

ಮೇಘಾಲಯ ಚುನಾವಣೆ: ಎಲ್ಲ 4,400 ವಿವಿಪ್ಯಾಟ್‌ಗಳ ಆಗಮನ

07:25 PM Feb 10, 2018 | Team Udayavani |

ಶಿಲ್ಲಾಂಗ್‌ : ಇದೇ ಫೆಬ್ರವರಿ 27ರಂದು ನಡೆಯುವ ಮೇಘಾಲಯ ವಿಧಾನಸಭಾ ಚುನಾವಣೆಗೆ ಅಗತ್ಯವಿರುವ ಎಲ್ಲ  4,400 ವಿವಿಪ್ಯಾಟ್‌ (ವೋಟರ್‌ ವೆರಿಫ‌ಯೇಬಲ್‌ ಪೇಪರ್‌ ಆಡಿಟ್‌ ಟ್ರೇಲ್‌) ಯಂತ್ರಗಳು ಬಂದಿರುವುದಾಗಿ ಮುಖ್ಯ ಚುನಾವಣಾ ಅಧಿಕಾರಿ  ಎಫ್ ಆರ್‌ ಖಾರ್‌ಖೋನ್‌ಗರ್‌ ತಿಳಿಸಿದ್ದಾರೆ.

Advertisement

ಈ ವಿವಿಪ್ಯಾಟ್‌ ಯಂತ್ರಗಳು ಎರಡು ಕಂತುಗಳಲ್ಲಿ ಬಂದಿದ್ದವು; ಮೊದಲ ಕಂತಿನಲ್ಲಿ  2,400 ಮತ್ತು ಎರಡನೇ ಕಂತಿನಲ್ಲಿ 2000 ಯಂತ್ರಗಳು ಬಂದವು ; ಇವುಗಳು ಇಲ್ಲಿಗೆ ಬರುವ ಮೊದಲೇ ಕೂಲಂಕಷ ಪರೀಕ್ಷೆಗೆ ಒಳಪಟ್ಟಿವೆ ಮತ್ತು ಅವು ಚುನಾವಣೆಗೆ ಸಿದ್ಧವಾಗಿವೆ ಎಂದವರು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next