Advertisement

ವಿಟಿಯು ಕಾಲೇಜಿನವಿದ್ಯಾರ್ಥಿ ಸಮ್ಮೇಳನ

11:43 AM Oct 21, 2017 | Team Udayavani |

ಬೆಂಗಳೂರು: ಯೂನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್‌ ಆಫ್ ಎಂಜಿನಿಯರಿಂಗ್‌ ಶತಮಾನೋತ್ಸವ ಅಂಗವಾಗಿ 14ನೇ ರಾಷ್ಟ್ರೀಯ ವಿದ್ಯಾರ್ಥಿಗಳ ಸಮ್ಮೇಳನ-“ಕಾಗದ’ ಅದ್ಧೂರಿಯಾಗಿ ಆಚರಿಸಲಾಯಿತು.

Advertisement

ಐಎಸ್‌ಐ ಗಣಕಯಂತ್ರ ವಿಭಾಗದ ಪ್ರೊ. ಬಿ.ಎಸ್‌.ದಯಾಸಾಗರ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ವಾಕ್‌ ಚಾತುರ್ಯ ರೂಢಿಸಿಕೊಂಡು ಸಂಶೋಧನಾ ಲೇಖನ ಹಾಗೂ ಗ್ರಂಥಗಳನ್ನು ರಚಿಸಿ ಜ್ಞಾನದ ಮಟ್ಟ ಸುಧಾರಿಸಿಕೊಳ್ಳುತ್ತಿರಬೇಕು. ಪ್ರತಿ ವಿದ್ಯಾರ್ಥಿಯೂ ಗಣಿತಶಾಸ್ತ್ರಜ್ಞನಂತೆ ಯೋಚಿಸಿ, ಭೌತಶಾಸ್ತ್ರನಂತೆ ತರ್ಕಿಸಿ, ಅಭಿಯಂತರನಂತೆ ಕಾರ್ಯನಿರ್ವಸಿದರೆ ಜೀವನದಲ್ಲಿ ಯಶಸ್ಸು ಸಾಧ್ಯ ಎಂದರು.

ಯುವಿಸಿಇ ಪ್ರಾಂಶುಪಾಲ ಡಾ.ಕೆ.ಆರ್‌.ವೇಣುಗೋಪಾಲ್‌ ಮಾತನಾಡಿ, ವ್ಯಕ್ತಿಯ ಯಶಸ್ಸಿಗೆ ಪದವಿ ಹಾಗೂ ಉತ್ತಮ ಅಂಕಗಳಷ್ಟೇ ಸಹಾಯಕಾರಿಯಲ್ಲ. ಯುವಪೀಳಿಗೆಯಲ್ಲಿನ ಪ್ರತಿಭೆಯ ಅನಾವರಣಕ್ಕೆ ಹೊಸ ಕೌಶಲ ಹಾಗೂ ಜ್ಞಾನ ಸಂಪಾದನೆ ಅವಶ್ಯಕ ಎಂದು ಹೇಳಿದರು. ಸಮ್ಮೇಳನದಲ್ಲಿ ರಾಜ್ಯದ ವಿವಿಧ ತಾಂತ್ರಿಕ ಕಾಲೇಜುಗಳಿಂದ ಸುಮಾರು 200 ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಲೇಖನ, ಪ್ರಾಜೆಕ್ಟ್ ಹಾಗೂ ಪೋಸ್ಟರ್‌ಗಳನ್ನು ಪ್ರಸ್ತುತಿಪಡಿಸಿದರು.

ಎಂಎಸ್‌ಆರ್‌ಐಟಿ, ಎಎಂಸಿ ಕಾಲೇಜ್‌ ಆಫ್ ಎಂಜಿನಿಯರಿಂಗ್‌, ರೇವಾ ಯುನಿರ್ವಸಿಟಿ, ಎನ್‌ಎಂಎಎಂಐಟಿ ಹಾಗೂ ಯುಸಿಇಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ವಿಜೇತರಾಗಿ ಬಹುಮಾನ ಪಡೆದರು. ಜಿನಿಯಸ್‌ ಪ್ಲಸ್‌ ಟಿಕ್ನಾಲಜಿಯ ಡಾ.ಜಯಕುಮಾರ ಸಿಂಗರನ್‌, ನೋಕಿಯಾ ಸಂಸೆœಯ ಮಾಲಾ ಶಿವಪ್ರಸಾದ್‌, ಸಿ-ಡಾಟ್‌ನ ಡಾ.ವೈ.ಎಸ್‌. ಲಕ್ಷ್ಮೀ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next