Advertisement
ಕೆಎಸ್ಸಾರ್ಟಿಸಿಯಲ್ಲಿ ಈಗಾಗಲೇ 84 ಘಟಕಗಳಿದ್ದು, 17 ವಿಭಾಗಗಳಿವೆ. ಒಟ್ಟಾರೆ 8,729 ಬಸ್‌ಗಳಿವೆ. ಇದರಲ್ಲಿ ಮಂಗಳೂರು, ಪುತ್ತೂರು, ಮೈಸೂರು ಗ್ರಾಮಾಂತರ, ರಾಮನಗರ ವಿಭಾಗಗಳ ಒಟ್ಟಾರೆ 2,000 ಬಸ್‌ಗಳಲ್ಲಿ ಮೊದಲನೇ ಹಂತವಾಗಿ ವಿಟಿಎಂಎಸ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಎರಡನೇ ಹಂತದ ಯೋಜನೆ ಸದ್ಯದಲ್ಲಿಯೇ ಆರಂಭಗೊಳ್ಳಲಿದ್ದು, ನಿಗಮದ ಎಲ್ಲ ಬಸ್‌ಗಳಿಗೂ ಈ ಸೌಲಭ್ಯ ವನ್ನು ಅಳವಡಿಸಲು ಕೆಎಸ್ಸಾರ್ಟಿಸಿ ನಿರ್ಧರಿಸಿದೆ.
ವಿಟಿಎಂಎಸ್ ಎಂದರೇನು?
ಬಸ್‌ಗಳಲ್ಲಿ ಜಿಪಿಆರ್‌ಎಸ್ ತಂತ್ರಜ್ಞಾನವನ್ನು ಅಳವಡಿಸಿ ಯಾವ ಬಸ್ ಯಾವ ಭಾಗದಲ್ಲಿ ಸಂಚರಿಸುತ್ತಿದೆ ಎಂಬುದನ್ನು ಟ್ರ್ಯಾಕ್ ಮಾಡುವ ವಿಧಾನವೇ ವಿಟಿಎಂಎಸ್. ಜಿಪಿಆರ್‌ಎಸ್ ಮಾದರಿಯ ಯುನಿಟ್ ಅನ್ನು ಸಂಬಂಧಿತ ಬಸ್‌ನಲ್ಲಿ ಮೊದಲಿಗೆ ಅಳವಡಿಸಲಾಗುತ್ತದೆ. ಇದರಿಂದ ಬಸ್ ಎಲ್ಲಿದೆ, ನಿಗದಿತ ನಿಲ್ದಾಣಕ್ಕೆ ಎಷ್ಟು ಗಂಟೆಗೆ ಬರಲಿದೆ ಮಾಹಿತಿ ದೊರಕುತ್ತದೆ.
ಸದ್ಯದಲ್ಲೇ ಆ್ಯಪ್
ನಾಲ್ಕು ಕೆಎಸ್ಸಾರ್ಟಿಸಿ ವಿಭಾಗದ 2,000 ಬಸ್‌ಗಳಿಗೆ ಸದ್ಯ ವಿಟಿಎಂಎಸ್ ವ್ಯವಸ್ಥೆ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ತ್ವರಿತಗತಿಯಲ್ಲಿ ವಿಭಾಗದ ಎಲ್ಲ ಬಸ್‌ಗಳಿಗೂ ಈ ವ್ಯವಸ್ಥೆ ಅಳವಡಿಸುತ್ತೇವೆ. ವಿಟಿಎಂಎಸ್ ಆ್ಯಪ್ ವಿಚಾರವಾಗಿ ಸದ್ಯ ಚರ್ಚೆ ನಡೆಯುತ್ತಿದ್ದು, ಸದ್ಯದಲ್ಲೇ ಟೆಂಡರ್ ಕರೆದು ಆ್ಯಪ್ ಮುಖೇನ ಪ್ರಯಾಣಿಕ ಸ್ನೇಹಿ ಮಾಡುತ್ತೇವೆ.
– ಶಿವಯೋಗಿ ಸಿ. ಕಳಸದ್, ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ
ನವೀನ್ ಭಟ್ ಇಳಂತಿಲ