ಕಾಸರಗೋಡು: ಕೇರಳದಲ್ಲಿ ಲೋಕಸಭಾ ಚುನಾವಣೆಯ ಪ್ರಚಾರಾರ್ಥವಾಗಿ ಸಿಪಿಎಂ, ಸಿಪಿಐ, ಕಾಂಗ್ರೆಸ್‌ನ 40 ರಷ್ಟು ತಾರಾ ವರ್ಚಸ್ಸಿನ ಪ್ರಚಾರಕರ ಯಾದಿ ಸಿದ್ಧವಾಗಿದ್ದು, ಬಿಜೆಪಿಯ ಯಾದಿ ಅಂತಿಮ ಹಂತದಲ್ಲಿದೆ. ಇದೇ ವೇಳೆ ಸಿ.ಪಿ.ಎಂ.ನ ತಾರಾ ವರ್ಚಸ್ಸಿನ ಪ್ರಚಾರಕರ ಯಾದಿಯಲ್ಲಿ ಸ್ಥಾನ ಪಡೆಯಲು ಮಾಜಿ ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ವಿಫಲರಾಗಿದ್ದಾರೆ.
ಹಿಂದಿನ ಚುನಾವಣೆಗಳಲ್ಲೆಲ್ಲ ಸಿಪಿಎಂನ ಪ್ರಚಾರದ ಚುಕ್ಕಾಣಿ ಹಿಡಿದಿದ್ದ ವಿ.ಎಸ್.ಅಚ್ಯುತಾನಂದನ್ ಪ್ರಚಾರ ರಂಗದಲ್ಲಿದ್ದರೂ, ಚುನಾವಣಾ ಆಯೋಗಕ್ಕೆ ನೀಡಿದ ತಾರಾ ವರ್ಚಸ್ಸಿನ ಪ್ರಚಾರಕರ ಯಾದಿಯಲ್ಲಿ ವಿ.ಎಸ್.ಅಚ್ಯುತಾನಂದನ್ ಅವರ ಹೆಸರು ಇಲ್ಲ.
ತಾರಾ ವರ್ಚಸ್ಸಿನ ಪ್ರಚಾರಕರ ಯಾದಿಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಎಸ್.ರಾಮಚಂದ್ರನ್ ಪಿಳ್ಳೆ, ಕೊಡಿಯೇರಿ ಬಾಲಕೃಷ್ಣನ್, ಎಂ.ಎ.ಬೇಬಿ, ತೋಮಸ್ ಐಸಾಕ್, ಎ.ವಿಜಯ ರಾಘವನ್, ಎಳಮರಂ ಕರೀಂ, ವಿಜು ಕೃಷ್ಣನ್, ಎ.ಆರ್.ಸಿಂಧು ಪ್ರಚಾರಕರ ಯಾದಿಯಲ್ಲಿರುವ ವರ್ಚಿಸ್ಸಿನ ತಾರೆಯರು. ಸೀತಾರಾಂ ಯೆಚೂರಿಯೂ ಈ ಯಾದಿಯಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ.
ಕಾಂಗ್ರೆಸ್‌ನ ತಾರಾ ವರ್ಚಸ್ಸಿನ ಪ್ರಚಾರಕರ ಯಾದಿಯಲ್ಲಿ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಒಳಗೊಂಡಿದ್ದಾರೆ. ಎರ್ನಾಕುಳಂ ಲೋಕಸಭಾ ಕ್ಷೇತ್ರದಲ್ಲಿ ಸೀಟು ನಿಷೇಧಿಸಲ್ಪಟ್ಟ ಕೆ.ವಿ.ಥೋಮಸ್ ಕೂಡಾ ಕಾಂಗ್ರೆಸ್‌ನ ತಾರಾ ವರ್ಚಸ್ಸಿನ ಪ್ರಚಾರಕ ಯಾದಿಯಲ್ಲಿದ್ದಾರೆ. ಮಾಜಿ ಕೆ.ಪಿ.ಸಿ.ಸಿ. ಅಧ್ಯಕ್ಷ ತೆನ್ನಲ ಬಾಲಕೃಷ್ಣನ್ ಪಿಳ್ಳೆ, ಕೆಎಸ್‌ಯು ಅಧ್ಯಕ್ಷ ಕೆ.ಎಂ.ಅಭಿಜಿತ್ ಈ ಯಾದಿಯಲ್ಲಿದ್ದಾರೆ.
ಸಿಪಿಐಯ ತಾರಾ ವರ್ಚಸ್ಸಿನ ಪ್ರಚಾರಕರ ಯಾದಿಯಲ್ಲಿ ಕಾನಂ ರಾಜೇಂದ್ರನ್, ಪಣ್ಯನ್ ರವೀಂದ್ರನ್, ಬಿನೋಯ್ ವಿಶ್ವಂ, ಆನಿ ರಾಜ್, ಕೆ.ಇ.ಇಸ್ಮಾಯಿಲ್ ಸ್ಥಾನ ಪಡೆದಿದ್ದಾರೆ. ಕನಯ್ಯ ಕುಮಾರ್ ಹೆಸರು ಕೂಡ ಇದೆ.
ಮುಸ್ಲಿಂ ಲೀಗ್‌ನ ತಾರಾ ವರ್ಚಸ್ಸಿನ ಪ್ರಚಾರಕರ ಯಾದಿಯಲ್ಲಿ ಹೈದರಲಿ ಶಿಹಾಬ್ ತಂಙಳ್ ಸಹಿತ ಪ್ರಮುಖ ನೇತಾರರಿದ್ದಾರೆ.