Advertisement

ಇಂದು ನೆಟ್ಟರೆ ನಾಳೆ ನೆರಳು: ಸಾಲುಮರದ ತಿಮ್ಮಕ್ಕ

04:00 AM Jul 04, 2018 | Karthik A |

ಮಂಗಳೂರು: ಗಿಡಗಳನ್ನು ನೆಟ್ಟು ಪೋಷಿಸಿದರೆ ಎಂದಿಗೂ ನಷ್ಟವಾಗುವುದಿಲ್ಲ. ಅವು ಎಲ್ಲರಿಗೂ ಆಸರೆಯಾಗುತ್ತವೆ ಎಂದು ನಾಡೋಜ ಡಾ| ಸಾಲುಮರದ ತಿಮ್ಮಕ್ಕ ಹೇಳಿದರು. ನಗರದ ಸಂತ ಅಲೋಶಿಯಸ್‌ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ ‘ವೃಕ್ಷಾಂಜಲಿ’ ವನಸಂರಕ್ಷಣ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

Advertisement

ಪರಿಸರವಾದಿ, ಕಲಾವಿದ ದಿನೇಶ್‌ ಹೊಳ್ಳ ಮಾತನಾಡಿ, ಪ್ರತಿಯೊಬ್ಬರೂ ಗಿಡ ನೆಡುವುದರೊಂದಿಗೆ ಅವುಗಳ ಜತೆ ಮಾತನಾಡುವ ಗುಣ ಬೆಳೆಸಿಕೊಳ್ಳಬೇಕು. ಸರಕಾರ ಪರಿಸರ ದಿನಾಚರಣೆ ಸಂದರ್ಭದಲ್ಲಿ ಕೋಟಿಗಟ್ಟಲೆ ಗಿಡ ನೆಡುತ್ತದೆ. ಆದರೆ ಪೋಷಣೆ ಮಾಡುವತ್ತ ಗಮನ ಹರಿಸುವುದಿಲ್ಲ. ಮಂಗಳೂರಿನಲ್ಲಿ ಮರ ಉಳಿಸುವುದಕ್ಕಿಂತ ಹೆಚ್ಚಾಗಿ ಕಡಿಯುತ್ತಿದ್ದಾರೆ ಎಂದರು. ಪರಿಸರ ತಜ್ಞ ಉಮೇಶ್‌ ಬಿ.ಎನ್‌. ಮಾತನಾಡಿದರು.

ಸಭಾ ಕಾರ್ಯಕ್ರಮಕ್ಕೆ ಮುನ್ನ ಕಾಲೇಜಿನ ಆವರಣದ ಸಂತ ಮದರ್‌ ತೆರೆಸಾ ಶಾಂತಿವನದಲ್ಲಿ ಸಾಲುಮರದ ತಿಮ್ಮಕ್ಕ ಎರಡು ಸಸಿ ನೆಟ್ಟರು. ಅಧ್ಯಕ್ಷತೆಯನ್ನು ರೆ| ಡಾ| ಪ್ರವೀಣ್‌ ಮಾರ್ಟಿಸ್‌ ಎಸ್‌.ಜೆ. ವಹಿಸಿದ್ದರು. ಡಾ| ಎ.ಎಂ. ನರಹರಿ,  ಶಿಲ್ಪಾ ಜಿ., ದುರ್ಗಾ ಮೆನನ್‌ ಉಪಸ್ಥಿತರಿದ್ದರು.

ಬಾಡಿಗೆ ಮನೆ ವಾಸ
ತಿಮ್ಮಕ್ಕ ಮಾತನಾಡಿ, ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿದ್ದೇನೆ. ಸರಕಾರ ನನಗೆ ನಿವೇಶನ ನೀಡುವುದಕ್ಕೆ ಸ್ಪಂದಿಸಲಿಲ್ಲ. ಊರಿನಲ್ಲಿ ಹೆರಿಗೆ ಆಸ್ಪತ್ರೆ ಕಟ್ಟಬೇಕು ಎಂಬ ಕನಸಿಗೂ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ತಿಮ್ಮಕ್ಕ ಸಾಕುಮಗ ಉಮೇಶ್‌ ಬಿ.ಎನ್‌. ಮಾತನಾಡಿ, ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ ರಾಜ್ಯ ಸರಕಾರ ಅನೇಕ ಯೋಜನೆ ಘೋಷಿಸುತ್ತಿದ್ದು, ಒಂದು ಬಾರಿಯೂ ಈ ಬಗ್ಗೆ ತಿಮ್ಮಕ್ಕ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿಲ್ಲ. ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕ್‌ ಸ್ಥಾಪನೆ ಮಾಡುತ್ತಿದೆ, ಒಂದು ಬಾರಿಯೂ ಇದರ ಉದ್ಘಾಟನೆಗೆ ಅವರನ್ನು ಕರೆದಿಲ್ಲ ಎಂದರು.a

Advertisement

Udayavani is now on Telegram. Click here to join our channel and stay updated with the latest news.

Next