Advertisement
ನಗರದ ರಂಗಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಶ್ರೀಶೈಲ ಅಕ್ಕಮಹಾದೇವಿ ಚೈತನ್ಯ ಕೇಂದ್ರದಿಂದ 2017-18ನೇ ಸಾಲಿನ ಅಕ್ಕಮಹಾದೇವಿ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
Related Articles
Advertisement
ಉತ್ತಮ ನಡುವಳಿಕೆಯಿಂದ ಬದುಕಲು ಕಲಿಸುತ್ತವೆ. ಸಮಾಜದಲ್ಲಿ ಗೌರವ ಸನ್ಮಾನಗಳಿಗೆ ಭಾಜನರಾಗಲು ಕಾರಣವಾಗುತ್ತವೆ. ಪರಸ್ಪರ ಪ್ರೀತಿ, ವಿಶ್ವಾಸ, ಮಾನವೀಯತೆ, ಸಾಮಾಜಿಕ ಪ್ರಜ್ಞೆ, ಜೊತೆಗೆ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬದುಕಲು ದಾರಿ ಮಾಡಿಕೊಡುತ್ತವೆ ಎಂದರು. ಮಹಿಳೆ ಇಂದು ಸ್ವತಂತ್ರಳಾಗಿ ತನ್ನಿಷ್ಟದ ವಸ್ತ್ರಗಳನ್ನು ಧರಿಸಲು ಅಸಾಧ್ಯವಾದ ವಾತಾವರಣ ಸೃಷ್ಟಿಯಾಗಿದೆ.
ಏಕಾಂಗಿಯಾಗಿ ಬದುಕಲು ಮುಂದಾದರೆ ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾಳೆ. ಆಕೆಯ ರಕ್ಷಣೆಗೆ ಧಾವಿಸಬೇಕಿದ್ದ ಸಮಾಜ ಇಂದು ನಿಂದನೆಗೆ ಮುಂದಾಗುತ್ತಿರುವುದು ವಿಪರ್ಯಾಸ. ಆದ್ದರಿಂದ ಪ್ರತಿ ಹೆಣ್ಣು ತನ್ನಲ್ಲಿನ ಅಷ್ಟ ಶಕ್ತಿಗಳನ್ನು ಜಾಗೃತಗೊಳಿಸಿ ವಿರಾಗಿನಿಯಾಗಿ ಎದ್ದು ನಿಲ್ಲಬೇಕಿದೆ ಎಂದರು.
ಸಮಾರಂಭ ಉದ್ಘಾಟಿಸಿದ ಖ್ಯಾತ ಸಾಹಿತಿ, ಧಾರವಾಡದ ಡಾ| ಗುರುಲಿಂಗ ಕಾಪಸೆ ಮಾತನಾಡಿ, ನಮ್ಮಲ್ಲಿ ಅಧ್ಯಾತ್ಮಿಕ ಕೌಶಲ್ಯ ಜಾಗೃತವಾಗಿದ್ದರೆ ಆತ್ಮದ ಮೂಲಕ ಮಾತನಾಡುವ ಶಕ್ತಿ ಬರುತ್ತದೆ. ಆತ್ಮವನ್ನು ಲಿಂಗದೊಂದಿಗೆ ಬೆರೆಸಿ ಅನುಭಾವಿಯಾಗಿ ಹೊರಹೊಮ್ಮಬಹುದಾಗಿದೆ. ಇದು ನಮ್ಮಲ್ಲಿಸಕಾರಾತ್ಮಕ ದೃಷ್ಟಿಕೋನ, ಧನಾತ್ಮಕ ಚಿಂತನೆ, ನೈತಿಕ ಹಾಗೂ ಭಾವನಾತ್ಮಕ ಬೆಳವಣಿಗೆಗೆ ಇಂಬು ನೀಡುತ್ತದೆ ಎಂದರು. ಲೇಖಕಿ ಹಾಗೂ ಶಹಾಪುರದ ನಿವೃತ್ತ ಪ್ರಾಚಾರ್ಯೆ ನೀಲಮ್ಮ ಕತ್ನಳ್ಳಿ, ಚೈತನ್ಯ ಕೇಂದ್ರದ ಸಂಚಾಲಕ ಡಾ| ರಾಜಶೇಖರ ಸ್ವಾಮೀಜಿ, ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ಪರಿವೀಕ್ಷಣಾ ಸಮಿತಿ ಸಂಚಾಲಕ ಡಾ| ಎಸ್.ಕೆ. ಮಿತ್ತಲ್, ಪಂಚಗಾಂವ ಆಶ್ರಮದ ಮಾತೆ ಶಶಿಕಲಾ ತಾಯಿ, ಕಲಬುರಗಿಯ ವಿಲಾಸಮತಿ ಖೂಬಾ, ಜಿಪಂ ಸದಸ್ಯೆ ಮಂಜುಳಾ ಶಿವಕುಮಾರ ಸ್ವಾಮಿ, ಅಕ್ಕಮಹಾದೇವಿ ಚೈತನ್ಯ ಕೇಂದ್ರದ ಉಪಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಧನ್ನುರ್, ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಕಾಶೆಪ್ಪ ಧನ್ನುರ್, ಹೈದ್ರಾಬಾದ್ ಅಖೀಲ ಭಾರತೀಯ ವೀರಶೈವ ಮಹಾಸಭೆ ಅಧ್ಯಕ್ಷ ನೇತಿ ಮಹೇಶ್ವರ, ಹೈದ್ರಾಬಾದ್ ಅಕ್ಕ ಮಹಾದೇವಿ ಸಮಿತಿ ಅಧ್ಯಕ್ಷೆ ದಾಕ್ಷಾಯಣಿ ದೇವಿ, ರಾಷ್ಟ್ರೀಯ ಬುಡಕಟ್ಟು ಹಾಗೂ ಕಲಾ ಪರಿಷತ್ ಕಾರ್ಯದರ್ಶಿ ರಾಜಕುಮಾರ ಹೆಬ್ಟಾಳೆ, ಶಿವಯ್ಯ ಸ್ವಾಮಿ, ಶಿವಕುಮಾರ ಸ್ವಾಮಿ ಬಂಬುಳಗಿ, ಡಾ| ಸೋಮನಾಥ ಪಾಟೀಲ, ಡಾ| ಸಿದ್ರಾಮಯ್ಯ ಸ್ವಾಮಿ ಗೋರಟಾ, ಕಾರ್ತಿಕ ಸ್ವಾಮಿ, ಮೀರಾ ಖೇಣಿ, ಮಲ್ಲಮ್ಮ ಸಂತಾಜಿ ಇದ್ದರು.