Advertisement

“ಆದಿವಾಸಿಗಳ ಬೇಡಿಕೆಗಳಿಗೆ ಸ್ಪಂದಿಸಿದರೆ ಮಾತ್ರ ಮತದಾನ’

01:13 AM Apr 09, 2019 | sudhir |

ಮಡಿಕೇರಿ : ಅರಣ್ಯ ಹಕ್ಕು ಕಾಯ್ದೆಯ ಜಾರಿ ಸೇರಿದಂತೆ ಆದಿವಾಸಿಗಳ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ತಮ್ಮ ಪ್ರಣಾಳಿಕೆಯ ಮೂಲಕ ಭರವಸೆ ನೀಡುವ ಅಭ್ಯರ್ಥಿಗಳಿಗೆ ನಮ್ಮ ಬೆಂಬಲವೆಂದು ಘೋಷಿಸಿರುವ ಬುಡಕಟ್ಟು ಕೃಷಿಕರ ಸಂಘ, ಕೇವಲ ಓಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಆದಿವಾಸಿಗಳನ್ನು ಬಳಸಿಕೊಳ್ಳುತ್ತಿರುವ ರಾಜಕೀಯ ಪಕ್ಷಗಳಿಗೆ ಈ ಬಾರಿಯ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿದೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಮುಖರು, ಲೋ‌ಸಭಾ ಕ್ಷೇತ್ರದಲ್ಲಿ ಸ್ಪಧಿಸಿರುವ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ತಮಗೆ ಅಧಿಕಾರವಿದ್ದ ಅವಧಿಯಲ್ಲಿ ಅರಣ್ಯ ವಾಸಿಗಳ ಸಂಕಷ್ಟಗಳಿಗೆ ಸ್ವಲ್ಪವೂ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಆದಿವಾಸಿಗಳು ಮತಗಟ್ಟೆಗೆ ತೆ‌ರಳಬೇಕೇ, ಬೇಡವೇ ಎನ್ನುವ ಬಗ್ಗೆ ಮತ್ತು ತಮ್ಮ ಸಂಕಷ್ಟಗಳಿಗೆ ಸ್ಪಂದಿಸುವ ಯಾರನ್ನು ಬೆಂಬಲಿಸಬೇಕೆನ್ನುವ ಬಗ್ಗೆ ಇದೇ ಏಪ್ರಿಲ್‌ 15ರ ಬಳಗಾಗಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.

ನ್ಯಾಷನಲ್‌ ಆದಿವಾಸಿ ಅಲಾಯನ್ಸ್‌ ರಾಷ್ಟ್ರೀಯ ಸಂಚಾಲಕ ವಿ.ಎಸ್‌. ರಾಯ್‌ ಡೇವಿಡ್‌ ಮಾತನಾಡಿ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅರಣ್ಯ ಹಕ್ಕು ಮಾನ್ಯತೆಗೆ ಅರ್ಹವಾದ 196 ಹಳ್ಳಿಗಳಿದ್ದು, 2,01,695 ಆದಿವಾಸಿ ಮತದಾರರಿದ್ದಾರೆ. ಈ ಅರಣ್ಯ ವಾಸಿಗಳಿಗೆ ಅರಣ್ಯ ಹಕ್ಕು ಕಾಯ್ದೆಯ ಜಾರಿಯಲ್ಲಿ ಆಗಿರುವ ಲೋಪ ಮತ್ತು ಚಾರಿತ್ರಿಕವಾದ ಅನ್ಯಾಯವನ್ನು ಯಾರು ಸರಿಪಡಿಸುತ್ತಾರೋ ಅಂತಹವರನ್ನು ಈ ಬೆಂಬಲಿಸುವ ಅನಿವಾರ್ಯತೆ ಇದೆ ಎಂದರು.ಜಿಲ್ಲಾ ಬುಡಕಟ್ಟು ಕೃಷಿಕರ ಸಂಘದ ಜಿಲ್ಲಾಧ್ಯಕ್ಷ ಜೆ.ಪಿ.ರಾಜು ಸೋಮವಾರಪೇಟೆ ñ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಆರ್‌.ಕೆ.ಚಂದ್ರ ಮಡಿಕೇರಿ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕುಡಿಯರ ಮುತ್ತಪ್ಪ ನಾಗರಹೊಳೆಯ ಜೆ.ಕೆ.ತಿಮ್ಮ ಹಾಗೂ ಅವರೆಗುಂದದ ಎಂ.ಸಿ.ವಾಸು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next