ಶಿರಸಿ: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ ಮತ್ತೆ ಭಾರತದ ಗದ್ದುಗೆ ಏರಬೇಕು, ಉತ್ತರ ಕನ್ನಡದಲ್ಲಿ ಸಚಿವ ಅನಂತಕುಮಾರ ಹೆಗಡೆ ಅತ್ಯಧಿ ಕ ಮತಗಳಿಂದ ಗೆಲ್ಲಬೇಕು ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಆಶಿಸಿದರು.
ಅವರು ಶನಿವಾರ ತಾಲೂಕಿನ ತಾರಗೋಡ, ಇಸಳೂರು, ದೊಡ್ನಳ್ಳಿ ಭಾಗದಲ್ಲಿ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ಪರವಾಗಿ ಮತಯಾಚನೆ ಮಾಡಿದ ಅವರು, ಯಾವುದೇ ಕಾರಣಕ್ಕೂ ಮತದಾನ ತಪ್ಪಬಾರದು.
ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು. ನಮ್ಮ ಕಾರ್ಯಕರ್ತರೂ ಮತದಾನಕ್ಕೆ ಪ್ರೇರೇಪಿಸಬೇಕು. ಮುಂಜಾನೆ 11 ಗಂಟೆಯೊಳಗೆ ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಪ್ರತೀ ಗ್ರಾಮಕ್ಕೂ ಪೇಜ್ ಪ್ರಮುಖರನ್ನು ನೇಮಕಗೊಳಿಸಲಾಗಿದೆ. 30 ಮತದಾರರಿಗೆ ಒಬ್ಬರು ಪ್ರಮುಖರಿರುತ್ತಾರೆ. ಮತದಾನ ಮಾಡುವ ವ್ಯಕ್ತಿ ಕಡ್ಡಾಯವಾಗಿ ಹಕ್ಕು ಚಲಾಯಿಸುವಂತೆ ನೋಡಿಕೊಳ್ಳಬೇಕು. ಊರಿನಿಂದ ಹೊರಗಡೆ ಇದ್ದರೂ ಸಂಪರ್ಕ ಮಾಡಬೇಕು ಎಂದು ಸೂಚಿಸಿದರು. ಪ್ರಮುಖರಾದ ಆರ್.ವಿ. ಹೆಗಡೆ ಚಿಪಗಿ, ಉಷಾ ಹೆಗಡೆ, ಶಿವರಾಮ ಭಟ್ಟ, ನರೇಶ ಭಟ್ಟ, ಪ್ರಸನ್ನ ಹೆಗಡೆ ಇತರರು ಇದ್ದರು.