ಹುಣಸೂರು: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕಿಯರು ಸ್ವೀಪ್ ಸಮಿತಿ ಸಹಯೋಗದಲ್ಲಿ ನಗರದಲ್ಲಿ ಮತದಾನದ ಅರಿವು ಮೂಡಿಸಲು ಜಾಥಾ ನಡೆಸಿದರು.
ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಯಿಂದ 500ಕ್ಕೂ ಹೆಚ್ಚು ಮಂದಿ ಕಾರ್ಯಕರ್ತೆಯರ ಜಾಥಾ ಪ್ರಮುಖ ರಸ್ತೆಗಳಲ್ಲಿ ಮತದಾನ ಮಾಡಿ ಪ್ರಜಾಪ್ರಭುತ್ವ ಉಳಿಸಿ, ಮತದಾನ ಮಾಡುವುದು ನಮ್ಮ ಕರ್ತವ್ಯ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು. ಬಳಿಕ ಕಲ್ಪತರು ಹಾಗೂ ರೋಟರಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ನಾಗರಿಕರ ಗಮನ ಸೆಳೆದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಹಾಗೂ ಇಒ ಸಿ.ಆರ್.ಕಷ್ಣಕುಮಾರ್, ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಬಾರಿ ನೂರಕ್ಕೆ ನೂರು ಪ್ರತಿಶತ ಮತದಾನ ಆಗಬೇಕಿದೆ ಎಂದರು. ಈ ವೇಳೆ ಸಿಡಿಪಿಒ ಬಸವರಾಜು, ಎಸಿಡಿಪಿಒ ವೆಂಕಟಪ್ಪ, ಪಿಡಿಒ ನರಹರಿ, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಮಂಗಳಗೌರಿ, ಕಾರ್ಯದರ್ಶಿ ಪುಷ್ಪ ಇತರರಿದ್ದರು.
ಮತದಾನ ಅರಿವಿಗಾಗಿ ಬೈಕ್ ಜಾಥಾ: ಹುಣಸೂರು ಸ್ವೀಪ್ ಸಮಿತಿ ಮತದಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಮಂಗಳವಾರ ಬೆಳಗ್ಗೆ 11ಕ್ಕೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಸುಮಾರು 300ಕ್ಕೂ ಹೆಚ್ಚು ಬೈಕ್‌ಗಳಲ್ಲಿ ನಗರದ ಎಪಿಎಂಸಿ ಬಳಿಯ ದೇವರಾಜೇ ಅರಸರ ಪುತ್ಥಳಿ ಬಳಿಯಿಂದ ಹೊರಟು ತಾಲೂಕಿನ ಬೀಜಗನಹಳ್ಳಿ,
ಉದ್ದೂರು, ನಾಡಪ್ಪನಹಳ್ಳಿ, ಗೌರಿಪುರ, ಸಂತೆಕೆರೆಕೋಡಿ, ರತ್ನಪುರಿ, ಆಸ್ಪತ್ರೆ ಕಾವಲ್, ಕೊಯಮುತ್ತೂರು ಕಾಲೋನಿ, ವಿನೋಬಾ ಕಾಲೋನಿ ಮಾರ್ಗವಾಗಿ ನಗರದ ಚಿಕ್ಕಹುಣಸೂರಿನ ಸಲೀಂ ಪ್ಯಾಲೆಸ್ ಬಳಿ ಅಂತ್ಯಗೊಳ್ಳಲಿದೆ ಎಂದು ಸ್ವೀಪ್ ಸಮಿತಿಯ ಸಂಚಾಲಕ ತಾಪಂ ಇಒ ಕಷ್ಣಕುಮಾರ್ ತಿಳಿಸಿದರು.