Advertisement

ಚುನಾವಣೆಗೆ ತ್ವರಿತ ಗತಿಯಲ್ಲಿ ಸಿದ್ಧತೆ: ಜಿಲ್ಲಾಧಿಕಾರಿ

12:30 AM Mar 23, 2019 | Team Udayavani |

ಕಾಸರಗೋಡು: ಲೋಕಸಭೆ ಚುನಾವಣೆ ಎ.23ರಂದು ನಡೆಯಲಿದ್ದು, ಜಿಲ್ಲಾ ಮಟ್ಟದಲ್ಲಿ ಈ ಸಂಬಂಧ ನಡೆಯುತ್ತಿರುವ ಸಿದ್ಧತೆ ತ್ವರಿತ ಗತಿಯಲ್ಲಿ ನಡೆಯುತ್ತಿವೆ ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ತಿಳಿಸಿದರು.ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದರು.

Advertisement

ಚುನಾವಣೆ ಸಿದ್ಧತೆಯ ಪೂರ್ವಭಾವಿ ಯಾಗಿ ಮಾಹಿತಿಗಳ ಎಲೆಕ್ಷನ್‌ ಮೆನೇಜ್‌ಮೆಂಟ್‌ ಪ್ಲಾನ್‌ (ಡಿ.ಇ.ಎಂ.ಪಿ.) ಸಿದ್ಧಗೊಳಿಸಲಾಗಿದೆ. ಜಿಲ್ಲೆಯ ಸಂಬಂಧ ಮಾಹಿತಿಗಳು, ಚುನಾವಣೆ ಸಿಬಂದಿ ಕುರಿತಾದ ಮಾಹಿತಿಗಳು, ಮತಗಟ್ಟೆಗಳು, ಚುನಾ ವಣಾಧಿ ಕಾರಿಗಳು, ಉಪಚುನಾವಣಾ ಧಿಕಾರಿಗಳು, ಸೆಕ್ಟರ್‌ಗಳು ಇತ್ಯಾದಿ ಚುನಾವಣೆ ಸಂಬಂಧ ಎಲ್ಲ ಮಾಹಿತಿಗಳೂ ಎಲೆಕ್ಷನ್‌ ಮೆನೇಜ್‌ಮೆಂಟ್‌ ಪ್ಲಾನ್‌ನಲ್ಲಿ ಇವೆ.

ಕಾಸರಗೋಡು ಜಿಲ್ಲೆಯ 5 ವಿಧಾನಸಭೆ ಕ್ಷೇತ್ರಗಳೂ, ಕಣ್ಣೂರು ಜಿಲ್ಲೆಯ ಪಯ್ಯನ್ನೂರ್‌, ಕಲ್ಯಾಶೆÏàರಿ ವಿಧಾನಸಭೆ ಕ್ಷೇತ್ರಗಳೂ ಸೇರಿರುವುದು ಕಾಸರಗೋಡು ಲೋಕಸಭೆ ಕ್ಷೇತ್ರವಾಗಿದೆ. ಕಾಸರ ಗೋಡು ಜಿಲ್ಲೆಯಲ್ಲಿ 9,86,172 ಮತ ದಾರರೂ, ಕಲ್ಯಾಶೆÏàರಿ, ಪಯ್ಯನ್ನೂರು ವಿಧಾನಸಭೆ ಕ್ಷೇತ್ರಗಳಲ್ಲಿ 3,38,215ಮತದಾರರೂ ಸೇರಿ ಒಟ್ಟು 13,24,387 ಮತದಾರರು ಲೋಕಸಭೆ ಕ್ಷೇತ್ರದಲ್ಲಿದ್ದಾರೆ. ಮಾ.25 ವರೆಗೆ ಮತದಾತರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅವಕಾಶವಿದೆ ಎಂದರು.

ಈ ಲೋಕಸಭೆ ಚುನಾವಣೆಯಲ್ಲಿ ಹಸುರು ಸಂಹಿತೆ ಪಾಲನೆ ಕಡ್ಡಾಯಗೊಳಿಸಿದ್ದು, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಈ ಬಗ್ಗೆ ಜಾಗರೂಕತೆ ವಹಿಸಬೇಕು. ಹಸುರು ಸಂಹಿತೆ ನೋಡೆಲ್‌ ಅ ಧಿಕಾರಿಯಾಗಿ ಶುಚಿತ್ವ ಮಿಷನ್‌ ಸಂಚಾಲಕರನ್ನು ನೇಮಕಗೊಳಿಸಲಾಗಿದೆ ಎಂದು ಜಿಲ್ಲಾ ಧಿಕಾರಿ ತಿಳಿಸಿದರು.

ಚುನಾವಣೆಯಲ್ಲಿ ಕರ್ತವ್ಯದಲ್ಲಿರುವ ವೀಡಿಯೋ ಗ್ರಾಫರ್‌, ಚಾಲಕರು ಮೊದಲಾದವರಿಗೆ ಅಂಚೆ ಮತದಾನ ಸೌಲಭ್ಯ ಏರ್ಪಡಿಸಲಾಗಿದೆ. ಈ ನಿಟ್ಟಿನಲ್ಲಿ ಚಾಲಕರಿಗೆ ಆರ್‌.ಟಿ.ಒ. ನೀಡುವ ಆದೇಶದ ನಕಲು, ಚುನಾವಣೆಯ ಗುರುತು ಚೀಟಿ ಸಹಿತ ಚುನಾವಣಾಧಿಕಾರಿಗೆ ಅರ್ಜಿ ಸಲ್ಲಿಸಬೇಕು.

Advertisement

ನೀತಿ ಸಂಹಿತೆ 
ನೀತಿ ಸಂಹಿತೆ ಹಿನ್ನೆಲೆಯಲ್ಲಿ ಈ ವರೆಗೆ 437 ದೂರುಗಳು ಲಭಿಸಿದ್ದು, ಅವುಗಳನ್ನು ಪರಿಹರಿಸಲಾಗಿದೆ. ಸಾರ್ವಜನಿಕರು ಮಾದರಿ ರೂಪದಲ್ಲಿ ನೀತಿಸಂಹಿತೆ ಸಂಬಂಧ ದೂರು ನೀಡಬಹುದಾದ “ಸಿ-ವಿಜಿಲ್‌’ ಎಂಬ ಮೊಬೆ„ಲ್‌ ಆ್ಯಪ್‌ ಸೌಲಭ್ಯ ಏರ್ಪಡಿಸಲಾಗಿದೆ. ಆ ಮೂಲಕ ಲಭಿಸುವ ದೂರುಗಳಿಗೆ 100 ನಿನಿಷಗಳ ಒಳಗೆ ಪರಿಹಾರ ಒದಗಿಸಲಾಗುವುದು. ಈ ಸಂಬಂಧ ಈಗಾಗಲೇ 16 ದೂರುಗಳು ಸಾರ್ವಜನಿಕರಿಂದ ಲಭಿಸಿದ್ದು, 100 ನಿಮಿಷಗಳ ಒಳಗೆ ಪರಿಹರಿಸಲಾಗಿದೆ ಎಂದು ಜಿಲ್ಲಾ ಧಿಕಾರಿ ಹೇಳಿದರು. ಚುನಾವಣೆ ಸಂಬಂಧ ಜನತೆಯ ದೂರು ಸಲ್ಲಿಕೆಗೆ, ಸಂಶಯ ನಿವಾರಣೆಗೆ 24 ತಾಸು ಚಟುವಟಿಕೆ ನಡೆಸುವ ನಿಯಂತ್ರಣ ಕೊಠಡಿ ಜಿಲ್ಲಾ ಧಿಕಾರಿ ಕಚೇರಿಯ ಚುನಾವಣೆ ವಿಭಾಗದಲ್ಲಿ ಕಾರ್ಯಾಚರಿಸುತ್ತಿದೆ. ದೂರವಾಣಿ ಸಂಖ್ಯೆ: 04994-255825, 04994-255676. ಅಂಗವಿಕಲರಿಗೆ ಮತಗಟ್ಟೆಗಳಿಗೆ ಆಗಮಿಸಲು ವಾಹನ ಸೌಲಭ್ಯ ಸಹಿತ ಚುನಾವಣೆ ಆಯೋಗದ ಆದೇಶ ಪ್ರಕಾರದ ಸೌಲಭ್ಯಗಳು ಮತಗಟ್ಟೆಗಳಲ್ಲಿ ಸಜ್ಜುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಯಲ್ಲಿ 31 ಅಂತರ್‌ ರಾಜ್ಯ ಹಾದಿಗಳಿವೆ. ಈ ಮೂಲಕ ವಾಹನಗಳಲ್ಲಿ ಆಗಮಿಸಿ ಅಕ್ರಮ ಕೃತ್ಯ  ಎಸಗುವವರ ನಿಯಂತ್ರಣಕ್ಕೆ ಪೊಲೀಸ್‌, ವೀಡಿಯೋಗ್ರಾಫರ್‌ ಸಹಿತದ ತಂಡ 24 ತಾಸೂ ಚಟುವಟಿಕೆ ನಡೆಸುವ ಸ್ಟಾಟಿಕ್‌ ಸರೆÌಲೆನ್ಸ್‌ ಟೀಂ ಚಟುವಟಿಕೆ ನಡೆಸುತ್ತಿದೆ. 

ಗಡಿಪ್ರದೇಶಗಳಾದ ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳ ಜಿಲ್ಲಾ ಆಡಳಿತೆ ಅ ಧಿಕಾರಿಗಳು, ಪೊಲೀಸರು, ಅಬಕಾರಿ, ತೆರಿಗೆ ಅ ಧಿಕಾರಿಗಳು ಜಂಟಿಯಾಗಿ ನಡೆಸಿದ ಸಭೆಗಳಲ್ಲಿ ಅಕ್ರಮ ಪ್ರವೇಶ, ಅಕ್ರಮ ಮದ್ಯ-ಮಾದಕ ದ್ರವ್ಯ ಸಾಗಾಟ ಇತ್ಯಾದಿ ತಡೆಯಲು ಜಂಟಿ ಕಾರ್ಯಾಚರಣೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಕಾರಿ ಹೇಳಿದರು.                                      

ವಾಹನ ಪ್ರಚಾರ 
ಮತದಾನಕ್ಕೆ ಪೂರಕವಾಗಿ ಸ್ವೀಪ್‌ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ನಡೆಯ ಲಿವೆ. ಇ.ವಿ.ಎಂ., ವಿವಿಪ್ಯಾಟ್‌ ಇತ್ಯಾದಿ ಪರಿಚಯಿಸುವ ನಿಟ್ಟಿನಲ್ಲಿ ವಾಹನ ಪ್ರಚಾರ ಜಿಲ್ಲೆಯಾದ್ಯಂತ ಸಂಚಾರ ನಡೆಸಲಿದೆ. ಬೈಕ್‌ ರ್ಯಾಲಿ, ಭಿತ್ತಿಪತ್ರ ರಚನೆ ಸ್ಪರ್ಧೆ, ಕರಾವಳಿ ಮತ ಯಾತ್ರೆ, ಬೀದಿ ನಾಟಕ, ಕಿರುಚಿತ್ರ ಪ್ರದರ್ಶನ, ಕೂಡಿಯಾಟಂ ಪ್ರಸ್ತುತಿ ಇತ್ಯಾದಿ ನಡೆಸ ಲಾ ಗುತ್ತಿದೆ ಎಂದವರು ಹೇಳಿದರು.

ಜಿಲ್ಲೆಯ ಚುನಾವಣೆ ನಿರೀಕ್ಷಕರಾಗಿ ಜಿನೀಶ್‌ ಐ.ಎ.ಎಸ್‌. ಅವರು ಆಯ್ಕೆ ಯಾಗಿದ್ದು, ಎ. 3ರಂದು ಆಗಮಿಸಲಿದ್ದಾರೆ. ಅವರ ಕರ್ತವ್ಯಕ್ಕೆ ಬೇಕಾದ ಎಲ್ಲ ಸಿದ್ಧತೆಗಳೂ ಪೂರ್ಣಗೊಂಡಿವೆ. ಜಿಲ್ಲೆಯಲ್ಲಿ ಶಾಂತಿಯುತ, ಕಾನೂನುಬದ್ಧ, ಸುಧಾರಿತ ಚುನಾವಣೆ ನಡೆಯುವ ನಿಟ್ಟಿನಲ್ಲಿ ಸಿದ್ಧತೆಗಳು ನಡೆಯುತ್ತಿದ್ದು, ಎಲ್ಲ ಜನತೆಯ ಸಹಕಾರವೂ ಅಗತ್ಯ ಎಂದು ಜಿಲ್ಲಾ ಧಿಕಾರಿ ವಿನಂತಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ದಂಡನಾಧಿ ಕಾರಿ ಬಿಜು, ಸಹಾಯಕ ಜಿಲ್ಲಾ ಧಿಕಾರಿ ಸಜೀವ್‌ ಕುಮಾರ್‌, ಹುಸೂರ್‌ ಶಿರಸ್ತೇದಾರ್‌ ನಾರಾಯಣನ್‌, ನೇಮಕಗೊಂಡಿರುವ ವಿವಿಧ ನೋಡೆಲ್‌ ಅ ಧಿಕಾರಿಗಳು ಉಪಸ್ಥಿತರಿದ್ದರು.

ನಾಮಪತ್ರ ಸಲ್ಲಿಕೆ 
ಮಾ. 28ರಿಂದ ಎ. 4ರ ವರೆಗೆ ನಾಮಪತ್ರ ಸ್ವೀಕರಿಸಲಾಗುವುದು. ಜಿಲ್ಲಾ ಚುನಾವಣೆ ಅ ಧಿಕಾರಿಯಾಗಿರುವ ಜಿಲ್ಲಾ ಧಿಕಾರಿಗೆ ಅಥವಾ ಉಪಚುನಾವಣೆ ಅ ಧಿಕಾರಿಯಾಗಿರುವ ಸಹಾಯಕ ಜಿಲ್ಲಾ ಧಿಕಾರಿ (ಎಲ್‌.ಆರ್‌.) ಅವರಿಗೆ ನಾಮಪತ್ರ ಸಲ್ಲಿಸಬಹುದು. ನಾಮ ಪತ್ರದ ಜತೆಗೆ ಅಭ್ಯರ್ಥಿಗಳು ಫಾರಂ-26  ಸಲ್ಲಿಸಬೇಕು. ಸ್ಪರ್ಧಾಳುಗಳು ಅಪರಾಧ ಪ್ರಕರಣಗಳಲ್ಲಿ ಭಾಗಿಗಳಾಗಿದ್ದರೆ, ಆ ಕುರಿತು ಎ. 12, 16, 21ರ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟಿಸಲಾಗುವುದು. ತದನಂತರ ಈ ಬಗ್ಗೆ ಆಕ್ಷೇಪಗಳಿದ್ದಲ್ಲಿ 500 ರೂ. ಛಾಪಾಪತ್ರದಲ್ಲಿ ಮಾಹಿತಿ ಸಿದ್ಧªಪಡಿಸಿ ಜಿಲ್ಲಾ ಧಿಕಾರಿಗೆ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಹೇಳಿದರು.

968 ಮತಗಟ್ಟೆಗಳು 
ಜಿಲ್ಲೆಯ 5 ವಿಧಾನಸಭೆ ಕ್ಷೇತ್ರಗಳಲ್ಲಿ 968 ಮತಗಟ್ಟೆಗಳಿವೆ. ಕಣ್ಣೂರು ಜಿಲ್ಲೆಯ ಪಯ್ಯ ನ್ನೂರು, ಕಲ್ಯಾಶೆÏàರಿ ವಿಧಾನಸಭೆ ಕ್ಷೇತ್ರಗಳಲ್ಲಿ 49 ಮತಗಟ್ಟೆಗಳಿವೆ. ಚುನಾವಣೆ ಆಯೋಗ ಆದೇಶಿಸಿದ ಪ್ರಕಾರದ ಎಲ್ಲ ಮೂಲ ಸೌಲಭ್ಯ ಗಳು ಈ ಮತಗಟ್ಟೆಗಳಲ್ಲಿ ಸಜ್ಜುಗೊಂಡಿವೆ. ಇ.ವಿ.ಎಂ, ವಿವಿಪ್ಯಾಟ್‌ ಇತ್ಯಾದಿಗಳು ರಿಸರ್ವ್‌ ಸಹಿತ ಮೊದಲ ಹಂತದ ತಪಾಸಣೆ ಮುಗಿಸಿ ಸ್ಟ್ರಾಂಗ್‌ ರೂಂನಲ್ಲಿ ದಾಸ್ತಾನಾಗಿವೆ. ಚುನಾವಣೆ ಸಿದ್ಧತೆ ಹಿನ್ನೆಲೆಯಲ್ಲಿ 18 ಮಂದಿ ನೋಡೆಲ್‌ ಅ ಧಿಕಾರಿಗಳನ್ನು ನೇಮಿಸಿದ್ದು, ಅವರಿಗೆ ನಿಗದಿತ ಹೊಣೆಗಾರಿಕೆ ನೀಡಲಾಗಿದೆ. ಮಾದರಿ ನೀತಿಸಂಹಿತೆ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ತಪಾಸಣೆ ಗಳಿಗಾಗಿ ಹೆಚ್ಚುವರಿ ದಂಡನಾ ಧಿಕಾರಿ ನೇತೃತ್ವದಲ್ಲಿ 6 ಸ್ಕ್ವಾಡ್‌ಗಳ ನೇಮಕವಾಗಿದೆ.

ಮತಗಟ್ಟೆ ಸಿಬಂದಿಗೆ ಮೊದಲ ಹಂತದ ತರಬೇತಿ  
ಚುನಾವಣೆ  ಸಂಬಂಧ ಮತಗಟ್ಟೆ  ಕರ್ತವ್ಯದ ಸಿಬಂದಿಗೆ ಮೊದಲ ಹಂತದ ತರಬೇತಿ ಮಾ.27 ಮತ್ತು 28ರಂದು ತ್ರಿಕರಿಪುರ, ಪೆರಿಯ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ನಡೆಯಲಿದೆ. ಸುಮಾರು 5228 ಮತದಾನ ಸಂಬಂಧ ಸಿಬಂದಿ ಈ ಚುನಾವಣೆಯಲ್ಲಿ ಕರ್ತವ್ಯದಲ್ಲಿರುವರು. ಪ್ರಿಸೈಡಿಂಗ್‌ ಆಫೀಸರ್‌ಗಳು, ಮೊದಲ ಪೋಲಿಂಗ್‌ ಆಫೀಸರ್‌ಗಳಿಗೆ ಮೊದಲ ಹಂತದ ತರಬೇತಿ ನೀಡಲಾಗುವುದು. ಎರಡನೇ ಹಂತದಲ್ಲಿ ಕರ್ತವ್ಯದಲ್ಲಿರುವ ಎಲ್ಲ ಸಿಬಂದಿಗೂ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next