Advertisement

ಮೊದಲ ಬಾರಿಗೆ ಮತದಾನ: ಸಸಿ ವಿತರಣೆ

05:16 PM Apr 19, 2019 | Team Udayavani |

ಕೆಂಗೇರಿ: ಕೆಂಗೇರಿ ಉಪನಗರದ ಶೇಷಾದ್ರಿಪುರಂ ಕಾಲೇಜಿನ ಮತಗಟ್ಟೆಯಲ್ಲಿ ಇದೇ ಮೊದಲ ಬಾರಿಗೆ ಮತದಾನ ಮಾಡಿದ ಯುವಜನತೆಗೆ ಜರ್ನಲಿಸ್ಟ್ಸ್ ಅಸೋಶಿಯೇಷನ್‌ ಆಫ್‌ ಕರ್ನಾಟಕ ಮತ್ತು ವಿಶ್ವ ಒಕ್ಕಲಿಗರ ವೇದಿಕೆಯಿಂದ ಉಚಿತ ಸಸಿ ವಿತರಿಸಿ ಅಭಿನಂದಿಸಲಾಯಿತು.

Advertisement

ವಿಶ್ವ ಒಕ್ಕಲಿಗರ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕನ್ನಡವೇ ಸತ್ಯ ರಂಗಣ್ಣ ಮಾತನಾಡಿ, ಮೊದಲ ಮತದಾನದ ಪುಳಕವೇ ಬೇರೆ. ಯುವಜನಾಂಗ ಅದನ್ನು ಅನುಭವಿಸುತ್ತಿದ್ದು, ಅದರ ಜತೆಗೆ ಸಸಿ ನೀಡುವುದು ಉತ್ತಮ ಬೆಳವಣಿಗೆ.

ಈ ನೆನಪು ನಿಮ್ಮ ಜೀವನದಲ್ಲಿ ಹಚ್ಚ ಹಸಿರಾಗಿರಲಿ ಎಂದು ಹಾರೈಸಿದ ಅವರು ನೀವು ಮತ ನೀಡಿದ ಅಭ್ಯರ್ಥಿ ಆಯ್ಕೆಗೊಂಡು ನಿಮಗೆ ನೆರಳಾಗಿ ನಿಲ್ಲುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ನೀವು ನೆಡುವ ಸಸಿಯಂತೂ ನಿಮಗೆ ನೆರಳಾಗಿ ನಿಲ್ಲುವುದು ಶತಸತ್ಯವೆಂದರು. ಪ್ರೊ. ಚೇತನಾ ಮಾತನಾಡಿ, ಉತ್ತಮ ನಾಯಕರ ಆಯ್ಕೆ ಎನ್ನುವುದು ತಂತಾನೇ ಸೃಷ್ಟಿಯಾಗುವುದಿಲ್ಲ. ಅದಕ್ಕೆ ಪ್ರಜಾಪ್ರಭುತ್ವದಲ್ಲಿ ಜನರ ಸಹಭಾಗಿತ್ವ ಬಹಳ ಮುಖ್ಯ.

ಎಲ್ಲರೂ ತಪ್ಪದೇ ಮತದಾನ ಮಾಡಿದಾಗ ಮಾತ್ರ ಅದಕ್ಕೆ ಅರ್ಥ ಬರುತ್ತೆ ಎಂದರು. ಜರ್ನಲಿಸ್ಟ್ಸ್ ಅಸೋಶಿಯೇಷನ್‌ ಆಫ್‌ ಕರ್ನಾಟಕ ಕಾರ್ಯಾಧ್ಯಕ್ಷ ಸುಧೀಂದ್ರ ರಾವ್‌. ಪ್ರಧಾನ ಕಾರ್ಯದರ್ಶಿ ವೀರಭದ್ರಪ್ಪ ಬಿಸ್ಲಳ್ಳಿ, ಯಶವಂತಪುರ ಕ್ಷೇತ್ರ ವಿಶ್ವ ಒಕ್ಕಲಿಗರ ವೇದಿಕೆ ಅಧ್ಯಕ್ಷ ಅಶೋಕ ರಾಮಸಂದ್ರ, ವಾಸುಪ್ರಸಾದ್‌ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next