Advertisement

Vote: 93 ವರ್ಷದಲ್ಲೇ ಪ್ರಥಮ ಬಾರಿಗೆ ಮತದಾನ !

08:02 PM Sep 25, 2023 | Team Udayavani |

ನವದೆಹಲಿ: ಮತದಾನ ದೇಶದ ಪ್ರತಿಯೊಬ್ಬ ಪ್ರಜೆಯ ಹಕ್ಕು. ಇನ್ನೇನು ಪಂಚರಾಜ್ಯ ಚುನಾವಣೆಗಳು ನಡೆಯಲಿದ್ದು, ಆಯಾ ರಾಜ್ಯದ ಪ್ರಜೆಗಳು ಮತ ಚಲಾಯಿಸಲಿದ್ದಾರೆ.

Advertisement

ಛತ್ತೀಸ್‌ಗಢದಲ್ಲಿಯೂ 93ರ ವಯಸ್ಸಿನ ಹಿರಿಯರೊಬ್ಬರು ಹಕ್ಕು ಚಲಾಯಿಸಲು ಕೌತುಕರಾಗಿದ್ದು, ಇದು ಅವರ ಜೀವನದಲ್ಲಿಯೇ ಮಾಡಲಿರುವ ಮೊದಲ ಮತದಾನ ಎಂಬುದು ವಿಶೇಷ!
ಹೌದು, ಭಾನುಪ್ರತಾಪಪುರ ವಿಧಾನಸಭಾ ಕ್ಷೇತ್ರದ ಬೈನ್‌ಸಂಕನ್‌ಹಾರ್‌ ಗ್ರಾಮದ ನಿವಾಸಿ ಶೇರ್‌ ಸಿಂಗ್‌ ಹೆಡ್ಕೊ (93) ಈವರೆಗೆ ಒಂದು ಬಾರಿಯೂ ಮತ ಚಲಾಯಿಸಿಲ್ಲವಂತೆ ! ದಾಖಲಾತಿಗಳ ಕೊರತೆಯಿಂದಾಗಿ ಮತದಾರರ ಪಟ್ಟಿಯಲ್ಲಿ ಅವರ ಹೆಸರಿಲ್ಲದೇ ಹೋದದ್ದು ಇದಕ್ಕೆ ಕಾರಣ.

ಆದರೆ, ಇತ್ತೀಚೆಗೆ ಬೂತ್‌ ಮಟ್ಟದ ಅಧಿಕಾರಿಗಳು ಗ್ರಾಮಗಳಲ್ಲಿ ಚುನಾವಣೆಗೆ ಅರ್ಹರಾಗಿರುವವರ ಹೆಸರನ್ನು ನೋಂದಣಿ ಮಾಡುವ ವೇಳೆ ಹೆಡ್ಕೊà ಅವರ ವಿಚಾರ ತಿಳಿದುಬಂದಿದೆ. ಬಳಿಕ ಅವರು ಸ್ವತಃ ಚುನಾವಣೆಯಲ್ಲಿ ಮತದಾನ ಮಾಡಲು ತಮ್ಮ ಹೆಸರನ್ನು ನೋಂದಾಯಿಸುವಂತೆ ಕೇಳಿದ ಹಿನ್ನೆಲೆಯಲ್ಲಿ ನೋಂದಣಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next