ಉಡುಪಿ: ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಹಳ್ಳಿ, ಹಂಡೆ ಛತ್ರ, ಸಂತೆ ಮೈದಾನ ಮತ್ತಿತರ ಕಡೆಗಳಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅಮೃತ್ ಶೆಣೈ ಪಿ. ಅವರು ಮತ ಯಾಚಿಸಿದರು.
ಮತದಾರರನ್ನು ಉದ್ದೇಶಿಸಿ ಶೆಣೈ ಮಾತನಾಡಿ, ಪ್ರಸ್ತುತ ನೈಸರ್ಗಿಕ ವಿಕೋಪದಿಂದ ಬೆಳೆ ಇಲ್ಲದೆ ರೈತರು ಆರ್ಥಿಕ ಸಂಕಷ್ಟದಲ್ಲಿ¨ªಾರೆ.
ಸಾಲಗಾರರ ಕಿರುಕುಳ ತಾಳಲಾರದೆ ರೈತರು ಆತ್ಮಹತ್ಯೆ ಕೂಡ ಮಾಡಿಕೊಳ್ಳುತ್ತಿ¨ªಾರೆ. ತಾನು ಗೆದ್ದ ಬಳಿಕ ಬ್ಯಾಂಕಿಂಗ್ ನೀತಿಗಳನ್ನು ಬದಲಾಯಿಸಲು ಹೋರಾಟ ನಡೆಸುತ್ತೇನೆ ಎಂದರು.
ಉಡುಪಿ ಮತ್ತು ಚಿಕ್ಕಮಗಳೂರಿನಲ್ಲಿ ಅದ್ಭುತ ಸಂಪನ್ಮೂಲಗಳಿದ್ದು, ಆಕರ್ಷಕ ಪ್ರಾಕೃತಿಕ ಸೌಂದರ್ಯವಿದ್ದ ನೆಲೆಯಲ್ಲಿ ಈ ಎರಡೂ ಜಿÇÉೆಗಳನ್ನು ವಿಶ್ವವಿಖ್ಯಾತ ಪ್ರವಾಸಿ ತಾಣಗಳನ್ನಾಗಿ ಮಾಡಲು ಹೋರಾಟ ನಡೆಸುತ್ತೇನೆ.
ವಿದ್ಯಾವಂತ ಯುವಕರು ಉದ್ಯೋಗವನ್ನರಸಿ ವಲಸೆ ಹೋಗುವುದನ್ನು ತಡೆಯಲು ಸ್ಥಳೀಯ ಮಟ್ಟದಲ್ಲಿ ಉದ್ಯಮ ಸ್ಥಾಪಿಸಿ ಸ್ಥಳೀಯರಿಗೆ ಉದ್ಯೋಗಾವಕಾಶ ಕೊಡುವವರಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ಭರವಸೆ ನೀಡಿದ ಅವರು ವಜ್ರ ಚಿಹ್ನೆಗೆ ಮತ ನೀಡಿ ನನ್ನನ್ನು ಆರಿಸಬೇಕೆಂದು ಮನವಿ ಮಾಡಿದರು.
ಮಹಮ್ಮದ್ ಹನೀಫ್, ದಿನೇಶ್, ಜಯಶ್ರೀ ಭಟ್, ಅನಿತಾ ಡಿ’ಸೋಜಾ, ಅಹಮ್ಮದ್, ಆಫÕರ್ ಬಾಯಿ, ಮಲ್ಲಿಕಾ, ಅಸಿಫ್, ವರದರಾಜ್ ಉಪಸ್ಥಿತರಿದ್ದರು.