Advertisement

ಮತದಾರರ ಪಟ್ಟಿ ಪರಿಷ್ಕರಣೆ: ಆ್ಯಪ್‌ನಲ್ಲಿ ದೃಢೀಕರಿಸಿ

01:33 PM Oct 07, 2021 | Team Udayavani |

ನೆಲಮಂಗಲ: ತಾಲೂಕಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮವು ನಡೆಯತ್ತಿದ್ದು, ಹೊಸ ಮತದಾರರ ಸೇರ್ಪಡೆ, ಪರಿಶೀಲನೆ ಮತ್ತು ದೃಢೀಕರಣ, ಮತದಾರರ ಪಟ್ಟಿಯಲ್ಲಿ ತಿದ್ದುಪಡಿ ಮುಂತಾದವುಗಳನ್ನು ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ತಹಶೀಲ್ದಾರ್‌ ಕೆ. ಮಂಜುನಾಥ ತಿಳಿಸಿದ್ಧಾರೆ.

Advertisement

ಇದನ್ನೂ ಓದಿ:- ಬಿಎಸ್ ವೈ ಆಪ್ತನ ನಿವಾಸದ ಮೇಲೆ ಐಟಿ ದಾಳಿ, ಬಿಜೆಪಿ ‘ಆಂತರಿಕ ವಿಷಯ’ ಇರಬಹುದು: ಎಚ್ಡಿಕೆ

ಮತದಾರರ ಅನುಕೂಲಕ್ಕಾಗಿ ಚುನಾವಣಾ ಆಯೋಗದಿಂದ ಮತದಾರರ ಸಹಾಯವಾಣಿ ಮೊಬೈಲ್‌ ಆ್ಯಪ್‌ ಬಿಡುಗಡೆ ಮಾಡಲಾಗಿದೆ. ಆ್ಯಪ್‌ ಮೂಲಕ ಪರಿಶೀಲಿಸಿ ದೃಢೀಕರಿಸಬಹುದು. ಮತದಾರರು ತಮ್ಮ ಮೊಬೈಲ್‌ನಲ್ಲಿ ಭಾರತ ಚುನಾವಣೆ ಆಯೋಗ ಹೊಸದಾಗಿ ಸಿದ್ಧಪಡಿಸಿರುವ ವೋಟರ್‌ ಹೆಲ್ಪ್ಲೈನ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಮತದಾರರ ಗುರುತಿನ ಚೀಟಿಯ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ತಹಶೀಲ್ದಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next