Advertisement

ಎತ್ತಿನ ಬಂಡಿಯಲ್ಲಿ ಮತದಾನ ಜಾಗೃತಿ ಜಾಥಾ

01:31 PM Apr 09, 2018 | Team Udayavani |

ದೇವದುರ್ಗ: ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಶಿಶು ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಗ್ರಾಪಂ ಸಂಯುಕ್ತಾಶ್ರಯಲ್ಲಿ ಮಿಂಚಿನ ನೋಂದಣೆ ಅಭಿಯಾನ ಕುರಿತು ರವಿವಾರ ಎತ್ತಿನ ಬಂಡಿಗಳ ಮೂಲಕ ಜಾಗೃತಿ ಜಾಥಾ ನಡೆಸಲಾಯಿತು. ಮೇಲ್ವಿಚಾರಕಿ ಲತಾ ಮಾತನಾಡಿ, ಏ.14ವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಅವಕಾಶವಿದೆ. ಯುವ ಮತದಾರರು ಕಡ್ಡಾಯವಾಗಿ ಹೆಸರು ಸೇರ್ಪೆಡೆ ಮಾಡಬೇಕು ಎಂದು ಸಲಹೆ ನೀಡಿದರು.

Advertisement

ಪ್ರತಿ ಮತಗಟ್ಟೆಯಲ್ಲಿ ಬೆಳಗ್ಗೆ 8:00ರಿಂದ ಸಂಜೆ 5:00ರ ವರೆಗೆ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಪ್ರತಿಯೊಬ್ಬರು ಮತದಾನ ಹಕ್ಕು ಪಡೆಯಲು ನೋಂದಣೆ ಪ್ರಕ್ರಿಯೆಗೆ ಮುಂದಾಗಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಬಯಸುವವರು ಅಗತ್ಯ ದಾಖಲೆಯೊಂದಿಗೆ ಬಿಎಲ್‌ಒಗಳಿಗೆ ಅರ್ಜಿ ಸಲ್ಲಿಸಬೇಕು. 18ವರ್ಷ ಮೇಲ್ಪಿಟ್ಟ ಅರ್ಹ ಮತದಾರರು ತಪ್ಪದೇ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ ಚುನಾವಣೆಯಲ್ಲಿ ಮತಾ ಧಿಕಾರ ಚಲಾಯಿಸಬೇಕು. ಸಂವಿಧಾನ ನೀಡಿದ ಮತದಾನದ ಹಕ್ಕನ್ನು ಬಳಸಿ ಪ್ರಜಾಸತ್ತಾತ್ಮಕ ವ್ಯವಸ್ಥೆ ಭದ್ರಪಡಿಸಬೇಕು.

ಪ್ರತಿಯೊಂದು ಮತಕ್ಕೂ ಅತ್ಯಮೂಲ್ಯ ಬೆಲೆ ಇದ್ದು, ನಿರ್ಲಕ್ಷ್ಯ ತಾಳದೇ ಮತ ಚಲಾಯಿಸಬೇಕು ಎಂದು ಹೇಳಿದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ, ಡಾ| ಪ್ರತಿಭಾ ಪಾಟೀಲ, ಕೃಷಿ ಅಧಿಕಾರಿ ಆರ್‌.ಬಿ.ಮಠಪತಿ, ಸುನೀಲಕುಮಾರ, ಆರೋಗ್ಯ ಸಹಾಯಕಿ ಸುಧಾರಾಣಿ, ಅಂಗನವಾಡಿ ಕಾರ್ಯಕರ್ತೆ ನೀಲಮ್ಮ, ಪಾರ್ವತಿ, ಲಕ್ಷ್ಮೀ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next