Advertisement

ಇಂದು-ನಾಳೆ ಬೆಳ್ತಂಗಡಿಯಲ್ಲಿ ಅರಸೀಕೆರೆ ಮೂಲದ ವ್ಯಕ್ತಿಯಿಂದ ಮತದಾನ ಜಾಗೃತಿ ಜಾಥಾ!

09:29 PM Apr 08, 2019 | mahesh |

ಬೆಳ್ತಂಗಡಿ: ಹಲವಾರು ಜಾಗೃತಿ ಅಭಿಯಾನಗಳ ಮೂಲಕ ದೇಶಾದ್ಯಂತ ತಿರುಗಾಟ ನಡೆಸಿರುವ ಹಾಸನ ಜಿಲ್ಲೆಯ ಅರಸೀಕೆರೆ ಮೂಲದ ಉಮಾಪತಿ ಮೊದಲಿಯಾರ್‌ ಅವರು ಪ್ರಸ್ತುತ ಮತದಾನ ಜಾಗೃತಿ ಕಾರ್ಯದಲ್ಲಿ ತೊಡಗಿದ್ದು, ಎ. 9 ಮತ್ತು 10ರಂದು ಬೆಳ್ತಂಗಡಿಯ ಏಳು ಗ್ರಾ.ಪಂ. ಗಳಲ್ಲಿ ಸೈಕಲ್‌ ಜಾಥಾ ನಡೆಸಲಿದ್ದಾರೆ.

Advertisement

ಎ. 9ರಂದು ಬೆಳಗ್ಗೆ 10ಕ್ಕೆ ಮಡಂತ್ಯಾರು, 11ಕ್ಕೆ ಮಾಲಾಡಿ, 1ಕ್ಕೆ ಕುವೆಟ್ಟು, 3ಕ್ಕೆ ಲಾೖಲ, 4ಕ್ಕೆ ಉಜಿರೆ, 5.30ಕ್ಕೆ ಧರ್ಮಸ್ಥಳ, ಎ. 10ರಂದು 10.30ಕ್ಕೆ ಕೊಕ್ಕಡ ಗ್ರಾ.ಪಂ.ವ್ಯಾಪ್ತಿಯಲ್ಲಿ ಜಾಥಾ ನಡೆಸಲಿದ್ದಾರೆ. ಮೆಕ್ಯಾನಿಕ್‌ ವೃತ್ತಿ ಮಾಡುತ್ತಿರುವ 72ರ ಹರೆಯದ ಉಮಾಪತಿ ಅವರು ಕಳೆದ 35 ವರ್ಷಗಳಿಂದ ಇಂತಹ ವಿವಿಧ ಅಭಿಯಾನಗಳನ್ನು ನಡೆಸುತ್ತಿದ್ದು.

ಈಗಾಗಲೇ 11 ರಾಜ್ಯಗಳು ಹಾಗೂ ಕರ್ನಾಟಕದ 27 ಜಿಲ್ಲೆಗಳನ್ನು ಸಂದರ್ಶಿಸಿದ್ದಾರೆ. ವರ್ಷದ 9 ತಿಂಗಳ ಕಾಲ ದುಡಿಯುವ ಇವರು ಉಳಿದ ಮೂರು ತಿಂಗಳನ್ನು ಇಂತಹ ಸಾಮಾಜಿಕ ಕಾರ್ಯಗಳಿಗೆ ಮೀಸಲಿಡುತ್ತಾರೆ. ಏಡ್ಸ್‌ ಜಾಗೃತಿಯ ಮೂಲಕ ಆರಂಭಗೊಂಡ ಇವರ ಅಭಿಯಾನವು ಬಳಿಕ ಗೋಹತ್ಯೆ ವಿರುದ್ಧ ಜಾಗೃತಿ, ಮದ್ಯಪಾನ ವಿರೋಧಿ ಜಾಗೃತಿ, ಶೌಚಾಲಯ ಬಳಕೆ, ನೀರಿನ ಮಿತ ಬಳಕೆ, ಸ್ವತ್ಛತೆ ಮೊದಲಾದ ಅಭಿಯಾನ ನಡೆಸಿದ್ದು, ಚುನಾವಣೆಯ ಸಂದರ್ಭದಲ್ಲಿ ಮತದಾನ ಜಾಗೃತಿಯ ಜಾಥಾ ನಡೆಸುತ್ತಾರೆ.

ಈ ಬಾರಿ ಚಿಕ್ಕಮಗಳೂರಿನಿಂದ ಆರಂಭಗೊಂಡ ಇವರ ಮತ ದಾನ ಜಾಗೃತಿ ಜಾಥಾವು ಪ್ರಸ್ತುತ ಮಂಗಳೂರನ್ನು ಪೂರ್ತಿ ಗೊಳಿಸಿದ್ದು, ಎ. 9 ಮತ್ತು 10ರಂದು ಬೆಳ್ತಂಗ ಡಿಯಲ್ಲಿ ಜಾಥಾ ನಡೆಸಲಿದ್ದಾರೆ. ಜಿ.ಪಂ. ಸಿಇಓ ಅವರ ಪತ್ರದಂತೆ ಬೆಳ್ತಂಗಡಿ ತಾ.ಪಂ. ಜಾಥಾ ಆಯೋಜನೆಗೆ ಕ್ರಮಕೈಗೊಳ್ಳುವಂತೆ ಸ್ಥಳೀಯ ಗ್ರಾ.ಪಂ.ಗಳ ಪಿಡಿಒಗಳಿಗೆ ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next