ಮುಳಗುಂದ: ಪಟ್ಟಣದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ. 1 ಪ್ರಾಥಮಿಕ ಶಾಲೆಯಲ್ಲಿ ಚುನಾವಣೆ ಮೂಲಕ ಶಾಲಾ ಸಂಸತ್ತು ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು.
ಮತದಾನಕ್ಕೆ ಚಾಲನೆ ನೀಡಿದ ಶಾಲಾ ಪ್ರಧಾನ ಗುರು ಪಿ.ಬಿ. ಕೆಂಚನಗೌಡ್ರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪಾರದರ್ಶಕ ಚುನಾವಣೆ ಮಹತ್ವ ಮತ್ತು ಅದರ ಹಂತಗಳ ಬಗ್ಗೆ ಅನುಭವ ಮೂಡಿಸಲು ಇಂತಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಚುನಾವಣೆಯಲ್ಲಿ 21 ಅಭ್ಯರ್ಥಿಗಳು ನಾಮಪ್ರ ಸಲ್ಲಿಸಿದ್ದರು. ಶಿಕ್ಷಕಿ ವಿ.ಎಂ. ಕಂಠಿ ಚುನಾವಣಾಧಿಕಾರಿಯಾಗಿ ನಾಮಪತ್ರ ಪರಿಶೀಲನೆ ಮಾಡಿ ಅಭ್ಯರ್ಥಿಗಳಿಗೆ ಚಿಹ್ನೆ ನೀಡಿದರು. ಬ್ಯಾಲೆಟ್ ಪತ್ರ ಸಿದ್ಧಪಡಿಸಿ ಮತದಾನ ಮಾಡಲಾಯಿತು. ಒಟ್ಟು 149 ಮತದಾರರಲ್ಲಿ 136 ಜನ ಮತ ಚಲಾಯಿಸಿದರು. 12 ಜನರನ್ನು ಆಯ್ಕೆ ಮಾಡಲಾಯಿತು.
ಆಯ್ಕೆಯಾದ ಮಂತ್ರಿ ಮಂಡಳ ಸದಸ್ಯರು ಚುನಾವಣಾ ಅಧಿಕಾರಿಗಳಿಂದ ಪ್ರಮಾಣ ವಚನ ಸ್ವೀಕರಿಸಿದರು. ಪ್ರಧಾನ ಮಂತ್ರಿಯಾಗಿ ಅಭಿಷೇಕ ಮಟ್ಟಿ, ಉಪ ಪ್ರಧಾನಮಂತ್ರಿ ಶಮೀರ್ ಲಾಡಸಾಬನವರ, ಶಿಕ್ಷಣ ಮಂತ್ರಿ ಕಿರಣ ಕೊಟಗಿ, ಆಹಾರ ಮಂತ್ರಿ ಬಸವರಾಜ ಪೂಜಾರ, ಪ್ರಾರ್ಥನಾ ಮಂತ್ರಿ ಕರಿಯಪ್ಪ ಕರಿಗಾರ, ಆರೋಗ್ಯ ಮಂತ್ರಿ ದಾವಲಸಾಬ ಕುರ್ತಕೋಟಿ, ಕ್ರೀಡಾ ಮಂತ್ರಿ ಮಹಾಂತೇಶ ದೊಡ್ಡಮನಿ, ಸಾಂಸ್ಕೃತಿಕ ಮಂತ್ರಿ ಪ್ರಜ್ವಲ್ ಯಲುವಿಗಿ, ನೀರಾವರಿ ಮಂತ್ರಿ ಸಾಗರ ಗುಡಗೇರಿ, ಪ್ರವಾಸ ಮಂತ್ರಿ ಶ್ರೀಕಾಂತ ಸಿದ್ಧನಗೌಡರ, ಆರ್ಥಿಕ ಮಂತ್ರಿ ನೀಲಪ್ಪ ತೆಂಬದಮನಿ, ಪರಿಸರ ಮಂತ್ರಿ ಶಾಹೀಲ್ ಅಣ್ಣಿಗೇರಿ ಆಯ್ಕೆಯಾಗಿದ್ದಾರೆ. ಎಚ್.ಆರ್. ಬಜೆಂತ್ರಿ, ಎಸ್.ಎಚ್. ಉಪ್ಪಾರ, ಎಸ್.ವಿ. ಹಿರೇಮಠ, ಕೆ.ಸಿ. ನಾಯಕ್, ಜಿ.ಎಂ. ಗಲಗಲಿ, ಎಸ್.ಎಂ. ಉಜ್ಜಣ್ಣವರ, ಹಾಗೂ ಎಸ್‌ಡಿಎಂಸಿ ಸದಸ್ಯ ವಿ.ಡಿ. ಸಿದ್ಧನಗೌಡರ ಇದ್ದರು.