Advertisement
ಬೆಳಗ್ಗೆ 7 ಗಂಟೆಗೆ ಮಂಗಳೂರಿನ ಮಂಗಳಾ ಕ್ರೀಡಾಂಗಣದಿಂದ ಮ್ಯಾರಥಾನ್ ಪ್ರಾರಂಭವಾಗಲಿದೆ. 16 ವರ್ಷಕ್ಕಿಂತ ಕೆಳಗಿನವರಿಗೆ 6 ಕಿ.ಮೀ. ಹಾಗೂ 16 ವರ್ಷಕ್ಕಿಂತ ಮೇಲ್ಪಟ್ಟವರಿಗೆ 18 ಕಿ.ಮೀ. ಮ್ಯಾರಥಾನ್ ನಡೆಯಲಿದೆ. ಹಿರಿಯ ನಾಗರಿಗೆ ಮತ್ತು ಸಾರ್ವಜನಿಕರಿಗೆ ಮತದಾನದ ಕಡೆಗೆ ನಮ್ಮ ನಡಿಗೆ ಕೂಡ ಆಯೋಜಿಸಲಾಗಿದೆ. ಇದರಲ್ಲಿ ಜಿಲ್ಲಾ ವ್ಯಾಪ್ತಿಯ ಎಲ್ಲ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು, ಸ್ವಯಂಸೇವಾ ಸಂಸ್ಥೆಗಳು ಹಾಗೂ ಸಾರ್ವಜನಿಕರು ಭಾಗವಹಿಸುವಂತೆ ಕೋರಲಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿ.ಪಂ. ಸಿಇಒ ಡಾ| ಆರ್. ಸೆಲ್ವಮಣಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮನಪಾ ಆಯಕ್ತ ಮಹಮ್ಮದ್ ನಜೀರ್ ಮಾತನಾಡಿ, 16ರ ವಯೋಮಿತಿಯ ಒಳಗಿನ ಬಾಲಕ ಬಾಲಕಿಯರಿಗೆ ಮಂಗಳಾ ಕ್ರೀಡಾಂಗಣದಿಂದ ಮಣ್ಣಗುಡ್ಡೆ ರಸ್ತೆ, ನ್ಯೂಚಿತ್ರಾ, ರಥಬೀದಿ, ಮಂಗಳೂರು ಸೆಂಟ್ರಲ್ ಮಾರ್ಕೆಟ್, ಹಂಪನಕಟ್ಟೆ ರಸ್ತೆ ಮೂಲಕ ಸಾಗಿ ಪಿವಿಎಸ್ ವೃತ್ತ, ಬಲ್ಲಾಳ್‌ಬಾಗ್, ಲಾಲ್‌ಬಾಗ್, ದಿವ್ಯದೀಪ ಟವರ್ ಮುಂಭಾಗದಲ್ಲಿ ತಿರುಗಿ ಕ್ರೀಡಾಂಗಣದಲ್ಲಿ ಸಮಾಪನ ಗೊಳ್ಳಲಿದೆ ಎಂದರು. 16 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಂಗಳಾ ಕ್ರೀಡಾಂಗಣದಿಂದ ಮಣ್ಣಗುಡ್ಡೆ ರಸ್ತೆ, ನ್ಯೂಚಿತ್ರಾ, ರಥಬೀದಿ, ಶರವು ದೇವಸ್ಥಾನ, ಕಾರ್ನಾಡ್ ಸದಾಶಿವ ರಾವ್ ರಸ್ತೆ, ನವಭಾರತ ವೃತ್ತ, ಪಿವಿಎಸ್ ವೃತ್ತ, ಸೆಲ್ಮಾ ಆರ್ಕೆಡ್, ಕದ್ರಿ ದೇವಸ್ಥಾನ ರಸ್ತೆ, ಬಿಜೈ, ಲಾಲ್‌ಬಾಗ್ ವೃತ್ತದಿಂದ ಯೂಟರ್ನ್ ಪಡೆದು ಪಂಚಮಿ ಕಾಂಪ್ಲೆಕ್ಸ್, ಕಾಪಿಕಾಡ್, ದಡ್ಡಲ ಕಾಡು, ಉರ್ವಾಸ್ಟೋರ್, ಆಶೋಕನಗರ, ಉರ್ವಾ ಮಾರ್ಕೆಟ್, ಲೇಡಿಹಿಲ್ ಮೂಲಕ ಮಂಗಳಾ ಕ್ರೀಡಾಂಗಣ ತಲುಪಲಿದೆ. ಮತದಾನದ ಕಡೆಗೆ ನಮ್ಮ ನಡಿಗೆ ಮಂಗಳಾ ಕ್ರೀಡಾಂಗಣದಿಂದ ಮಣ್ಣಗುಡ್ಡೆ, ಬಲ್ಲಾಳ್‌ಬಾಗ್, ಲಾಲ್‌ಬಾಗ್, ಲೇಡಿಹಿಲ್ ಮೂಲಕ ಮಂಗಳಾಕ್ರೀಡಾಂಗಣ ಸೇರಲಿರುವುದು. ವಿಜೇತರಿಗೆ ನಗದು ಬಹುಮಾನ ನೀಡಿ ಪುರಸ್ಕರಿಸಲಾಗುವುದು ಎಂದರು.
Related Articles
Advertisement
ಮನಪಾ ಅಧಿಕಾರಿ ಗಾಯತ್ರಿ, ನೆಹರೂ ಯುವಕೇಂದ್ರದ ಸಂಯೋಜಕ ರಘುವೀರ್ ಸೂಟರ್‌ಪೇಟೆ ಉಪಸ್ಥಿತರಿದ್ದರು.
18 ಕಿ.ಮೀ. ವಿಶೇಷಎರಡು ಮುಖ್ಯ ಉದ್ದೇಶವನ್ನು ಇಟ್ಟುಕೊಂಡು ಮ್ಯಾರಥಾನ್ ಆಯೋಜಿಸಲಾಗಿದೆ. ಎ. 18 ಚುನಾವಣೆಯ ದಿನಾಂಕದ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸುವುದು ಹಾಗೂ 18 ವಯೋಮಿತಿಯ ಬಳಿಕ ಮತದಾನ ಅರ್ಹತೆಯನ್ನು ನೆನಪಿಸುವುದು 18 ಕಿ.ಮೀ. ದೂರದ ಹಿಂದಿರುವ ಅಂಶ ಎಂದು ಆಗಿದೆ ಎಂದು ಡಾ| ಆರ್. ಸೆಲ್ವಮಣಿ ತಿಳಿಸಿದ್ದಾರೆ.