Advertisement

ಪದವಿ ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ

07:35 AM Mar 22, 2019 | Team Udayavani |

ಹುಳಿಯಾರು: ಹುಳಿಯಾರು-ಕೆಂಕೆರೆ ಬಿಎಂಎಸ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ಕಡ್ಡಾಯ ಮತದಾನ ಜಾಗೃತಿ ಜಾಥಾ ಗುರುವಾರ ಆಯೋಜಿಸಲಾಗಿತ್ತು.

Advertisement

ಕಾಲೇಜಿನ ಬಳಿ ಪ್ರಾಚಾರ್ಯ ಬಿಳಿಗೆರೆ ಕೃಷ್ಣಮೂರ್ತಿ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿ, ಮತದಾನ ಮಾಡುವುದು ಪವಿತ್ರ ಕಾರ್ಯ.ಯಾವುದೇ ಆಮಿಷಗಳಿಗೆ ಒಳಗಾಗಬಾರದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತಮ ಬದಲಾವಣೆ ತರಲು ನೀವು ಚಲಾಯಿಸುವ ಮತವೇ ಮುಖ್ಯ ಎಂದು ಹೇಳಿದರು.

ಹುಳಿಯಾರು ಬಸ್‌ ನಿಲ್ದಾಣದ ಆವರಣದಲ್ಲಿ ಮಾನವ ಸರಪಳಿ ನಿರ್ಮಿಸಿ ಮತದಾನ ಮಾಡುವುದರಿಂದ ಆಗುವ ಅನುಕೂಲ ಹಾಗೂ ಮಾಡದಿದ್ದರೆ ಆಗುವ ಅನಾನುಕೂಲಗಳ ಬಗ್ಗೆ ಘೋಷಣೆ ಕೂಗಲಾಯಿತು.

ನಂತರ ಸಂತೆ ಬೀದಿ, ರಾಮಗೋಪಾಲ್‌ ಸರ್ಕಲ್‌, ಆಸ್ಪತ್ರೆ ರಸ್ತೆ  ಉಪನ್ಯಾಸಕರೊಂದಿಗೆ ವಿದ್ಯಾರ್ಥಿಗಳು “ಮತದಾನ ಮಾಡದೇ ಇದ್ದಲ್ಲಿ ಮುಂದೆ ಅನುಭವಿಸುವೆವು ಕಷ್ಟ’, “ಪ್ರತಿಯೊಂದು ಮತ ಪ್ರಜಾಪ್ರಭುತ್ವದ ಹಿತ’ ಎಂದು ಘೋಷಣೆ ಕೂಗುತ್ತಾ ಜಾಥಾ ನಡೆಸಿದರು.

ಚುನಾವಣಾ ಸಾಕ್ಷರತಾ ಕ್ಲಬ್‌ ಸಂಚಾಲಕರಾದ ಡಾ.ಲೋಕೇಶ್‌ ನಾಯ್ಕ ಉಪನ್ಯಾಸಕರಾದ ಪೊ›.ಎಂ.ಬಿ.ಮೋಹನ್‌ಕುಮಾರ್‌, ದೈಹಿಕ ಶಿಕ್ಷಣ ನಿರ್ದೇಶಕ ಆರ್‌.ಶಿವಯ್ಯ ಮತ್ತಿತರರಿದ್ದರು.

Advertisement

ಈ ಚುನಾವಣೆಯಲ್ಲಿ ಭ್ರಷ್ಟಾಚಾರ ಯುವ ಜನತೆ ಕಿತ್ತೂಗೆಯುವ ನಿಟ್ಟಿನಲ್ಲಿ ನನ್ನ ಮತ ಮಾರಾಟಕ್ಕಿಲ್ಲ ಎಂದು ರಾಜಕಾರಣಿಗಳಿಗೆ ಖಡಕ್ಕಾಗಿ ಹೇಳಬೇಕಿದೆ. ಹಣ ಕೊಡಲು ಬಂದವರಿಗೆ ಗೆದ್ದ ಮೇಲೆ ನಮ್ಮ ಊರಿಗೆ ಒಂದಿಷ್ಟು ಕೆಲಸ ಮಾಡಿ ಎಂದು ಹೇಳಬೇಕು.
-ಬಿ.ಜಿ.ನಾಗರಾಜು, ಬಸ್‌ಸ್ಟಾಂಡ್‌ ಹೋಟೆಲ್‌, ಹುಳಿಯಾರು

ಬಜೆಟ್‌ನಲ್ಲಿ ಘೋಷಿಸಿದ ಅದೆಷ್ಟೋ ಯೋಜನೆಗಳು ಜನಸಾಮಾನ್ಯರ ಕೈಗೆಟುಕದಿರುವುದು ನನ್ನಂತ ಹೊಸ ಮತದಾರರಿಗೆ ಯಾವ ಪುರುಷಾರ್ಥಕ್ಕೆ ಮತ ಹಾಕಬೇಕಿದೆ ಎಂದು ಪ್ರಶ್ನೆ ಮೂಡುತ್ತಿದೆ. ಆದರೂ ಮುಂದಾದರೂ ಒಳ್ಳೆಯದಾಗಬಹುದೆಂದು ಭರವಸೆಯಿಂದ ಮತ ಹಾಕುತ್ತಿದ್ದೇನೆ.
-ಎಚ್‌.ಬಿ.ಬಾಲಾಜಿ, ಪದವಿ ವಿದ್ಯಾರ್ಥಿ, ಹುಳಿಯಾರು

Advertisement

Udayavani is now on Telegram. Click here to join our channel and stay updated with the latest news.

Next