ಕುರ್ನಾಡು: ಕುರ್ನಾಡು,ಬಾಳೆಪುಣಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ದುಡಿವಾದನ,ಬ್ಯಾಂಡ್‌ನ ಮೂಲಕ ಜಾಥಾ ನಡೆಸಿ ವಿಶಿಷ್ಟ ರೀತಿಯಲ್ಲಿ ಮತದಾನ ಜಾಗೃತಿ ಮೂಡಿಸಲಾಯಿತು.
ಗ್ರಾಮ ಪಂಚಾಯತ್ ಕುರ್ನಾಡು, ಬಾಳೆಪುಣಿ, ಜನ ಶಿಕ್ಷಣ ಟ್ರಸ್ಟ್, ಮುಡಿಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ, ಎಲೆಕ್ಟೋರಲ್ ಲಿಟ್ರಸಿ ಕ್ಲಬ್, ರೇಂಜರ್ – ರೋವರ್, ಗ್ರಾಮ ವಿಕಾಸ ಕೇಂದ್ರ, ಜಾಗೃತಿ ವೇದಿಕೆ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಸಹಭಾಗಿತ್ವದಲ್ಲಿ ನಡೆದ ಜಾಗೃತಿ ಜಾಥಾವು ಕಾಲೇಜು ವಠಾರದಿಂದ ಆರಂಭವಾಗಿ ಕುರ್ನಾಡು ಪಂಚಾಯತ್, ಮುಡಿಪು ಪೇಟೆ, ಚೆಕ್ ಪೋಸ್ಟ್, ಗರಡಿಪಳ್ಳ, ನವೋ ದಯ ವಿದ್ಯಾಲಯ ಮೂಲಕ ಸಾಗಿ ಕುರ್ನಾಡು ಗ್ರಾಮ ಪಂಚಾಯತ್ ವಠಾರದಲ್ಲಿ ಮುಕ್ತಾಯವಾಯಿತು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ| ಗಿರಿಧರ್ ರಾವ್ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿ ಜಾಥಾಕ್ಕೆ ಚಾಲನೆ ನೀಡಿದರು.
ಮುಡಿಪು ಜಂಕ್ಷನ್‌ನಲ್ಲಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿಲ್ಲಾ ಸ್ವತ್ಛತಾ ರಾಯಭಾರಿ ಎನ್. ಶೀನಾಶೆಟ್ಟಿ ಮಾತನಾಡಿ, ಚುನಾವಣೆ ಪ್ರಜಾಪ್ರಭುತ್ವದ ಅಡಿಗಲ್ಲಾಗಿದ್ದು, ಚುನಾವಣೆಯನ್ನು ಸಂಭ್ರಮದ ಉತ್ಸವ ರೀತಿಯಲ್ಲಿ ನಡೆಸಲು ಚುನಾವಣೆ ಆಯೋಗದೊಂದಿಗೆ ಮತದಾರರು ಪಾಲುದಾರರಾಗಿ ವಿವೇ ಚನೆಯಿಂದ ಮತ ಚಲಾಯಿಸಿದರೆ ಪ್ರಜಾ ಪ್ರಭುತ್ವ ಬಲವರ್ಧನೆಗೆ ನೆರವಾಗಬೇಕು ಎಂದರು.
ಪ್ರಾಧ್ಯಾಪಕರಾದ ವತ್ಸಲಾ, ಶೋಭಾ ಮಣಿ, ಪವನ್, ಪ್ರದೀಪ್, ಶೋಭಾ ಕೆ.ಎಂ, ಪಿಡಿಒ ಗಳಾದ ಕೇಶವ, ಸುನಿಲ್, ಕಾರ್ಯದರ್ಶಿ ರುಕ್ಮಯದಾಸ್, ಜನ ಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಕೃಷ್ಣ ಮೂಲ್ಯ, ಸಂಯೋಜಕ ಚೇತನ್‌ಕುಮಾರ್,ವಿದ್ಯಾರ್ಥಿ ಪ್ರತಿನಿಧಿಗಳಾದ ದಾûಾಯಿಣಿ,ಅಭಯ ಅಶೋಕ್ ಭಟ್,ಜೀವನ್ ಡಿ’ಸೋಜಾ, ಹರ್ಷಿತಾ, ಅಪರ್ಣಾ ಕುಮಾರಿ,ಜೀನತ್, ತನುಜಾ ಮತ ದಾನದ ಬಗ್ಗೆ ಜಾಗೃತಿ ಮೂಡಿಸಿದರು.
ಬಾಳೆಪುಣಿ ಪಂಚಾಯತ್ ಸಿಬಂದಿ ಸದಾನಂದ ಮತ್ತು ಬಳಗದ ದುಡಿ ವಾದನ, ಲೋಕನಾಥ್ ಮತ್ತು ಸಂದೀಪ್‌ರ ಟಾಸೆ ಡೋಲು ನಾದ ಜಾಥಾಕ್ಕೆ ಹೊಸ ಮೆರುಗು ನೀಡಿತು. ಕುರ್ನಾಡು, ಬಾಳೆಪುಣಿ ಗ್ರಾಮ ಪಂಚಾಯತ್ ಸಿಬಂದಿಗಳು, ಜನ ಶಿಕ್ಷಣ ಟ್ರಸ್ಟ್‌ನ ಕಾರ್ಯಕರ್ತರು ಜಾಥಾದ ಯಶಸ್ವಿ ನಿರ್ವಹಣೆಗೆ ಸಹಕರಿಸಿದರು.