ನವದೆಹಲಿ: ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಹಾಗೂ ಸಂಚಾರಿ ನಿಯಮಗಳಲ್ಲಿ ಮಹತ್ತರವಾದ ಬದಲಾವಣೆ ತರುವ ‘2019ರ ಮೋಟಾರು ವಾಹನ ತಿದ್ದುಪಡಿ ವಿಧೇಯಕ’ಕ್ಕೆ, ರಾಜ್ಯಸಭೆಯ ಒಪ್ಪಿಗೆ ಸಿಕ್ಕಿದೆ. ಮಸೂದೆ ಕುರಿತಾಗಿ ಬುಧವಾರ ನಡೆದ ಮತದಾನದಲ್ಲಿ ಮಸೂದೆ ಪರವಾಗಿ 108 ಮತಗಳು ಬಂದರೆ, ವಿರುದ್ಧವಾಗಿ 13 ಮತಗಳು ಬಂದವು.
ಅಪಘಾತವೇನಾದರೂ ಸಂಭವಿಸಿದಲ್ಲಿ, ಅಪಘಾತಕ್ಕೀಡಾದವರಿಗೆ ವೈದ್ಯಕೀಯ ಸೇರಿ ಇತರೆ ಸಹಾಯ ಮಾಡುವಂಥವರನ್ನು ವಿಚಾರಣೆಗೆ ಒಳಪಡಿಸುವ ನಿಯಮವನ್ನು ತೆಗೆದುಹಾಕಲಾಗಿದೆ. ಇದರ ಜತೆಗೆ, ವಾಹನದಲ್ಲೇನಾದರೂ ದೋಷ ಕಂಡು ಬಂದಲ್ಲಿ, ಅಂದರೆ, ಪರಿಸರ, ಚಾಲಕ ಅಥವಾ ಇತರೆ ಗ್ರಾಹಕರಿಗೆ ತೊಂದರೆ ಮಾಡುವಂತ ದೋಷ ಇದ್ದಲ್ಲಿ ಇವುಗಳನ್ನು ತಯಾರಕರು ವಾಪಸ್ ಕರೆಸಿಕೊಂಡು, ಗ್ರಾಹಕನಿಗೆ ಹೊಸ ವಾಹನ ಅಥವಾ ಸಂಪೂರ್ಣ ಹಣ ಕೊಡುವ ಅವಕಾಶವನ್ನೂ ಮಾಡಿಕೊಡಲಾಗಿದೆ.
ರಸ್ತೆ ಏನಾದರೂ ಹಾಳಾದರೆ, ಇನ್ನು ಮುಂದೆ ರಸ್ತೆ ನಿರ್ಮಿಸಿದ ಕಂಟ್ರಾಕ್ಟರ್ ಹೊಣೆಯಾಗುತ್ತಾನೆ ಎಂಬುದನ್ನೂ ಈ ಮಸೂದೆ ಒಳಗೊಂಡಿದೆ.
ಗದ್ದಲದ ನಡುವೆ ಅಂಗೀಕಾರ: ರಾಜ್ಯಸಭೆಯಲ್ಲಿ ಬುಧವಾರ, ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರಿಂದ ಮಂಡನೆಯಾದ ಈ ವಿಧೇಯಕದಲ್ಲಿರುವ 94ನೇ ಕಲಂನ ನಿಯಮ, ಜುಲೈ. 23ರಂದು ಲೋಕಸಭೆಯಲ್ಲಿ ಅಂಗೀಕಾರಗೊಂಡಿದ್ದ ಇದೇ ವಿಧೇಯಕದಲ್ಲಿ ಇರಲಿಲ್ಲ. ರಾಜ್ಯಸಭೆಯಲ್ಲಿ ಮಂಡನೆಯಾಗುವಾಗ ಈ ಕಲಂ ಅನ್ನು ಹೊಸದಾಗಿ ಸೇರಿಸಲಾಗಿದೆ. ಲೋಕಸಭೆಯಲ್ಲಿ ಅಂಗೀಕಾರವಾಗದ ಕಲಂ ಅನ್ನು ಈಗ ಸೇರಿಸಲಾಗಿದೆ ಎಂದು ಕರ್ನಾಟಕದ ಸಂಸದ ಬಿ.ಕೆ. ಹರಿಪ್ರಸಾದ್ ಆರೋಪಿಸಿದರು.
• ಚಾಲನಾ ತರಬೇತಿ ಪಡೆಯಲು ಅಗತ್ಯವಿದ್ದ ಕನಿಷ್ಟ ವಿದ್ಯಾರ್ಹತೆ ರದ್ದು.
• ಚಾಲನಾ ತರಬೇತಿ ರದ್ದು ಅಥವಾ ಅಮಾನತುಗೊಂಡಿದ್ದರೆ, ಚಾಲಕರಿಗೆ ಪುನಃ ಚಾಲನಾ ತರಬೇತಿ ಕೋರ್ಸ್ ಮಾಡಬೇಕು. 2. ಓಲಾ, ಒಬರ್ ಮೇಲೆ ಹಿಡಿತ
• ಟ್ಯಾಕ್ಸಿ ಸೇವೆಗಳನ್ನು ನೀಡುವ ಓಲಾ, ಉಬರ್ ಮಾದರಿಯ ಸಂಸ್ಥೆಗಳಿಗೆ ತಮ್ಮಲ್ಲಿ ಚಾಲಕರನ್ನು ನೇಮಿಸಿಕೊಳ್ಳಲು ಹೊಸ ನಿಬಂಧನೆಗಳು ಜಾರಿ. 3. ಪರವಾನಗಿ ನವೀಕರಣಕ್ಕೆ ಹೊಸ ನಿಯಮ
• ಪರವಾನಗಿ ಅವಧಿ ವಿಸ್ತರಣೆ
• ಪರವಾನಗಿ ನವೀಕರಣದ ನಿಯಮ ಉಲ್ಲಂಘನೆ 4. ಸಮುದಾಯ ಸೇವೆಯ ಶಿಕ್ಷೆ!
• ಸಂಚಾರ ನಿಯಮಗಳ ಉಲ್ಲಂಘನೆಗೆ ಸಮುದಾಯ ಸೇವೆಯ ಶಿಕ್ಷೆಯ ಆಯ್ಕೆ ಸೇರ್ಪಡೆ. 5. ಸಹಾಯಕ್ಕೆ ಬರುವ ನಾಗರಿಕರಿಗೆ ರಕ್ಷೆ
ಅಪಘಾತಕ್ಕೊಳಗಾದ ನೆರವಿಗೆ ಬರುವ ಜನರಿಗೆ ಅನವಶ್ಯಕ ಕಾನೂನು ಕಿರಿಕಿರಿ ಇಲ್ಲ. 6. ದೋಷಯುಕ್ತ ವಾಹನಗಳ ಸಂಚಾರಕ್ಕೆ ತಡೆ
ತಾಂತ್ರಿಕ ದೋಷವಿರುವ ವಾಹನಗಳು ಅಥವಾ ವಾಹನ ಬಿಡಿಭಾಗಗಳ ಜಪ್ತಿ. ಇದಕ್ಕೆ ನಿಗದಿತ ಶೇಕಡಾವಾರು ದೂರುಗಳು, ವಾಹನ ಪರೀಕ್ಷಾ ಸಂಸ್ಥೆ ಅಥವಾ ಇನ್ಯಾವುದೇ ಅಧಿಕೃತ ಮೂಲಗಳಿಂದ ಬಂದ ದೂರುಗಳೇ ಮಾನದಂಡ. 7. ಕೆಟ್ಟ ರಸ್ತೆ ನಿರ್ಮಿಸಿದವರೇ ಹೊಣೆ!
ಲೋಪಗಳಿರುವ ರಸ್ತೆಗಳನ್ನು ನಿರ್ಮಿಸಿದರೆ
ಅದಕ್ಕೆ ಸಂಬಂಧಿಸಿದ ಕಂಟ್ರಾಕ್ಟರ್‌ಗಳು, ಪ್ರಾಧಿಕಾರಗಳಿಗೆ ಲಕ್ಷ ರೂ. ದಂಡ. 8. ಹಿಟ್ ಆ್ಯಂಡ್ ರನ್‌ಪರಿಹಾರ ಹೆಚ್ಚಳ
ಹಿಟ್ ಆ್ಯಂಡ್ ರನ್ ಪ್ರಕರಣಗಳಲ್ಲಿ ಸಾವಿಗೀಡಾದವರಿಗೆ ನೀಡಲಾಗುವ ಪರಿಹಾರ ಮೊತ್ತ 25,000 ರೂ.ಗಳಿಂದ 2 ಲಕ್ಷ ರೂ.ಗಳಿಗೆ ಏರಿಕೆ. ಗಾಯಗೊಂಡವರಿಗೆ ನೀಡುವ ಪರಿಹಾರ 12,500 ರೂ.ಗಳಿಂದ 50,000 ರೂ.ಗೆ ಏರಿಕೆ. 9. ತಮ್ಮದ್ದಲ್ಲದ ತಪ್ಪುಗಳ ದುರ್ದೈವಿಗಳಿಗೆ ಸಹಾಯ
ತಮ್ಮದ್ದಲ್ಲದ ತಪ್ಪುಗಳಿಂದಾಗಿ ಅಪಘಾತಕ್ಕೀಡಾಗಿ ಸಾಯುವ ನಾಗರಿಕರಿಗೆ ನೀಡಲಾಗುವ ಪರಿಹಾರ ಧನ ಗರಿಷ್ಠ 5 ಲಕ್ಷ ರೂ., ಗಾಯಗೊಂಡಲ್ಲಿ ಗರಿಷ್ಠ 2.5 ಲಕ್ಷ ರೂ.ಗಳಿಗೆ ನಿಗದಿ. 10. ಕ್ಯಾಶ್‌ಲೆಸ್ ಚಿಕಿತ್ಸೆ
ಎಲ್ಲಾ ರಸ್ತೆ ಬಳಕೆದಾರರಿಗೆ ವಿಮೆ ಕಡ್ಡಾಯ. ಗಂಭೀರ ಗಾಯಗೊಂಡವರಿಗೆ ಅಪಘಾತವಾಗಿ ಒಂದು ಗಂಟೆಯೊಳಗೆ ಧನರಹಿತ ಚಿಕಿತ್ಸೆಯ ಅನುಕೂಲ. ವಿಮಾ ಪರಿಹಾರ: ಕಾಲಾವಧಿ ನಿಗದಿ: ಅಪಘಾತ ಹಿನ್ನೆಲೆಯಲ್ಲಿ ವಿಮಾ ಪರಿಹಾರ ಮೊತ್ತಕ್ಕೆ ಅರ್ಜಿ ಸಲ್ಲಿಸಲು ಅಪಘಾತ ದಿನದಿಂದ ಆರು ತಿಂಗಳವರೆಗೆ ಕಾಲಾವಕಾಶ. ಗಾಯಗೊಂಡ ವ್ಯಕ್ತಿಯು ಚಿಕಿತ್ಸಾ ಹಂತದಲ್ಲಿ ಯಾವುದೇ ಕಾರಣಕ್ಕೆ ತೀರಿಕೊಂಡಲ್ಲಿ, ಹತ್ತಿರದ ಸಂಬಂಧಿಗೆ ಪರಿಹಾರ ಕೇಳುವ ಹಕ್ಕು. ರಾಷ್ಟ್ರೀಯ ಸಾರಿಗೆ ನೀತಿ: ಸಾರಿಗೆ ವ್ಯವಸ್ಥೆಯ ಸರಳ ನಿರ್ವಹಣೆಗಾಗಿ ರಾಷ್ಟ್ರೀಯ ಸಾರಿಗೆ ನೀತಿ ಅನುಷ್ಠಾನಕ್ಕೆ ಕ್ರಮ. ರಾಷ್ಟ್ರೀಯ, ಬಹು ಪ್ರಾಂತ್ಯಗಳ ನಡುವಿನ ಹಾಗೂ ಅಂತರ ರಾಜ್ಯಗಳ ಸಾರಿಗೆಯ ನಿಯಮಗಳನ್ನು ರೂಪಿಸಲು ಕೇಂದ್ರ ಸರ್ಕಾರಕ್ಕೆ ಪರಮಾಧಿಕಾರ. ರಸ್ತೆ ಸುರಕ್ಷಾ ಮಂಡಳಿ: ರಸ್ತೆ ಸುರಕ್ಷೆಯ ವಿಚಾರದಲ್ಲಿ ರಾಜ್ಯಗಳಿಗೆ ಸಲಹೆ, ಸೂಚನೆಗಳನ್ನು ನೀಡಲು ರಸ್ತೆ ಸುರಕ್ಷಾ ಮಂಡಳಿ ಸ್ಥಾಪನೆಗೆ ನಿರ್ಧಾರ ಉಗ್ರ ಕ್ರಮ ಹಾಗೂ ದಂಡ: ರಸ್ತೆ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಉಗ್ರ ಕ್ರಮ ಹಾಗೂ ದಂಡ ವಿಧಿಸುವ ಅಂಶ ಪ್ರಸ್ತಾಪನೆ. ಅಪ್ರಾಪ್ತರ ತಪ್ಪಿಗೆ ಹೆತ್ತವರಿಗೆ ಶಿಕ್ಷೆ: ಅಪ್ರಾಪ್ತರಿಂದ ಆಗುವ ರಸ್ತೆ ಅಪಘಾತಗಳಿಗೆ ಅವರ ಹೆತ್ತವರು ಅಥವಾ ಪಾಲಕರೇ ಹೊಣೆ. ಅವರಿಗೆ 25,000 ರೂ. ದಂಡ, ಮೂರು ವರ್ಷಗಳ ಜೈಲು ಹಾಗೂ ವಾಹನ ನೋಂದಾವಣಿ ರದ್ದು ಮಾಡುವ ಉಗ್ರ ಕ್ರಮ. •ಅತಿ ವೇಗದ ಚಾಲನೆ-400(ಹಾಲಿ), ಲಘು ಮೋಟಾರು ವಾಹನ-1000, ಮಧ್ಯಮ ಗಾತ್ರದ ಮೋಟಾರು ವಾಹನ-2000
•ಲೈಸನ್ಸ್ ಷರತ್ತು ಉಲ್ಲಂಘನೆ (ಹೊಸತು) 25,000-1,00,000
•ಹೆಚ್ಚು ಪ್ರಯಾಣಿಕರು-ಪ್ರತಿ ಹೆಚ್ಚುವರಿ ಪ್ರಯಾಣಿಕರಿಗೆ 1000
•ಬಾಲಾಪರಾಧಿಗಳ ಅಪರಾಧ (ಹೊಸತು)- ಹೆತ್ತವರು, ರಕ್ಷಕರಿಗೆ 25,000 ದಂಡ ಮತ್ತು 3 ವರ್ಷ ಜೈಲು. ವಾಹನ ನೋಂದಾವಣಿ ರದ್ದು.
ನಿತಿನ್ ಗಡ್ಕರಿ, ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ
Advertisement
ಈ ಮಸೂದೆಯಿಂದಾಗಿ ಇನ್ನು ಮುಂದೆ ಟ್ರಾಫಿಕ್ ಉಲ್ಲಂಘನೆಗೆ ಭಾರೀ ದಂಡ ತೆರಬೇಕಾದ ಪ್ರಸಂಗ ಎದುರಾಗಲಿದೆ. ಡ್ರಿಂಕ್ ಆ್ಯಂಡ್ ಡ್ರೈವ್‌ಗೆ 10,000 ರೂ. ದಂಡ ವಿಧಿಸಲಾಗುತ್ತದೆ. ವಾಹನ ತಯಾರಕರು ನಿಗದಿತ ಗುಣಮಟ್ಟದಲ್ಲಿ ವಾಹನವನ್ನು ಸಿದ್ಧಪಡಿಸದೇ, ಇದರಲ್ಲೇನಾದರೂ ದೋಷ ಕಂಡು ಬಂದರೆ, ತಯಾರಕರಿಗೆ 100 ಕೋಟಿ ರೂ.ಗಳವರೆಗೆ ದಂಡ ವಿಧಿಸುವ ಅವಕಾಶವನ್ನೂ ನೀಡಲಾಗಿದೆ. ಇದಷ್ಟೇ ಅಲ್ಲ, ಒಂದು ವರ್ಷದವರೆಗೆ ಜೈಲು ಶಿಕ್ಷೆಯನ್ನೂ ವಿಧಿಸಬಹುದಾಗಿದೆ.
Related Articles
Advertisement
ಹೊಸ ವಿಧೇಯಕದಲ್ಲಿರುವ 15 ಪ್ರಮುಖ ಅಂಶ
1. ಚಾಲನಾ ತರಬೇತಿಗೆ ವಿದ್ಯಾರ್ಹತೆ ಬೇಕಿಲ್ಲ• ಚಾಲನಾ ತರಬೇತಿ ಪಡೆಯಲು ಅಗತ್ಯವಿದ್ದ ಕನಿಷ್ಟ ವಿದ್ಯಾರ್ಹತೆ ರದ್ದು.