Advertisement

ವಿವಿಧೆಡೆ ಮತದಾರರ ದಿನಾಚರಣೆ

01:04 PM Jan 25, 2020 | Suhan S |

ಬ್ಯಾಡಗಿ: ಮತದಾನ ಪ್ರಕ್ರಿಯೆಯಿಂದ ದೂರ ಉಳಿಯುವುದು ಆತ್ಮ ವಂಚನೆಗೆ ಸಮನಾದ ಕಾರ್ಯವಾಗಿದ್ದು, ಶೇ.62ರಷ್ಟು ಯುವಕರಿರುವ ದೇಶದಲ್ಲಿ ಶೇ.50ರಷ್ಟು ಮತದಾನ ನಡೆಯದಿರುವುದು ಖೇದಕರ ಎಂದು ಕಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶ ರಾಜೇಶ್‌ ಹೊಸ್ಮನೆ ಕಳವಳ ವ್ಯಕ್ತಪಡಿಸಿದರು.

Advertisement

ಪಟ್ಟಣದ ತಹಶೀಲ್ದಾರ್‌ ಕಚೇರಿ ಸಭಾಭವನದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಅಭ್ಯುದಯಕ್ಕಾಗಿ ಮತದಾನ ಶ್ರೇಷ್ಠವಾದದ್ದು. ಇಂತಹ ಸಾರ್ವತ್ರಿಕ ಸತ್ಯಕ್ಕೆ ಮತಗಟ್ಟೆಗಳಿಂದ ದೂರ ಉಳಿಯುವ ಮೂಲಕ ಮನಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳುವುದನ್ನು ನಿಲ್ಲಿಸಬೇಕು ಎಂದರು. ನ್ಯಾಯವಾದಿಗಳ ಸಂಘದ ಅಧ್ಯಕ್ಷ ಪ್ರಕಾಶ ಬನ್ನಿಹಟ್ಟಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪ್ರತಿಫವಿಲ್ಲದೆ ಮತದಾರರು ಮತದಾನಕ್ಕೆ ಮುಂದಾಗದಿರುವುದು ಖೇದಕರ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಹತ್ವದ ಹಕ್ಕು. ಆದರೆ ಇಂದು ಮತದಾರ ಆಮಿಷಗಳಿಗೆ ಬಲಿಯಾಗಿ ಮಾರಾಟಕ್ಕಿಟ್ಟಿರುವುದು ದೇಶಕ್ಕೆ ಅಭಿವೃದ್ಧಿಗೆ ಮಾರಕ ಎಂದರು.

ದೇಶದ ಭವಿಷ್ಯ ನಿರ್ಧರಿಸುವ ಶಕ್ತಿ ಮತದಾನಕ್ಕಿದೆ. ಶೇ.62ರಷ್ಟು ಯುವ ಜನಾಂಗ ಹೊಂದಿರುವ ದೇಶದಲ್ಲಿ ಮತದಾರರು ಭ್ರಷ್ಟರಾಗುತ್ತಿರುವುದು ನೋವಿನ ಸಂಗತಿ. ಆದ್ದರಿಂದ ಪ್ರಬುದ್ಧರಾಗಿ ಮತ ಚಲಾಯಿಸುವ ಕಾರ್ಯಕ್ಕೆ ಮುಂದಾಗಿ ಎಂದರು. ತಾಪಂ ಕಾರ್ಯ ನಿರ್ವಾಹಕಾಧಿ ಕಾರಿ ಅಬಿದ್‌ ಗದ್ಯಾಳ ಪ್ರಾಸ್ತಾವಿಕ ಮಾತನಾಡಿ, ಯುವಕರನ್ನು ಉತ್ತೇಜನಗೊಳಿಸುವ ಮೂಲಕ ಮತದಾನಕ್ಕೆ ಸಿದ್ಧಗೊಳಿಸುವುದು ತನ್ಮೂಲಕ ಸುಭದ್ರ ಸರ್ಕಾರ ಆಡಳಿತಕ್ಕೆ ತರುವಂತಹ ಕೆಲಸಕ್ಕೆ ಎಲ್ಲರೂ ಮುಂದಾಬೇಕಿದೆ ಎಂದರು.

ಶಿಕ್ಷಕ ಜೀವರಾಜ ಛತ್ರದ ಉಪನ್ಯಾಸ ನೀಡಿ ಮಾತನಾಡಿ, ದೇಶದ ಪ್ರತಿ ಪ್ರಜೆಯು ಮತದಾನಕ್ಕಿರುವ ಶಕ್ತಿ-ಪ್ರಾಮುಖ್ಯತೆ ಅರಿಯಬೇಕು. ಮತದಾನಮಾಡುವುದು ಇನ್ನೊಬ್ಬರನ್ನು ಓಲೈಸುವುದಕ್ಕಾಗಲ್ಲ ಎಂದರು.

ಇದೇ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದ ಅಡಿವೆಪ್ಪ ಕುರಿ ಜಾನಪದ ಗೀತೆಗಳ ಮೂಲಕ ಮತದಾನ ಜಾಗೃತಿ ಮೂಡಿಸಿದರು. ತಹಶೀಲ್ದಾರ್‌ ಶರಣಮ್ಮ, ಪುರಸಭೆ ಮುಖ್ಯಾ ಧಿಕಾರಿ ವಿ.ಎಂ. ಪೂಜಾರ, ನ್ಯಾಯವಾ ದಿಗಳಾದ ಎಚ್‌.ಎಸ್ . ಜಾಧವ ಎಂ.ಕೆ. ಕೋಡಿಹಳ್ಳಿ, ಭಾರತಿ ಕುಲಕರ್ಣಿ, ಸಿ.ಪಿ. ದೊಣ್ಣೇರ, ಸುರೇಶ ಕಾಟೇನಹಳ್ಳಿ, ವಿಜಯಕುಮಾರ ಪಾಟೀಲ ಇದ್ದರು. ಗುಂಡಪ್ಪ ಹುಬ್ಬಳ್ಳಿ ಸ್ವಾಗತಿಸಿ, ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next