ಬೆಂಗಳೂರು: ರಾಜ್ಯದಲ್ಲಿ ಮತದಾರ ಬದಲಾವಣೆ ಬಯಸಿದ್ದಾನೆ ಎಂಬುದಕ್ಕೆ ಉಪ ಚುನಾವಣೆ ಮತ ಚಲಾವಣೆ ಸಾಕ್ಷಿ. ಮುಖ್ಯಮಂತ್ರಿ ತವರು ಜಿಲ್ಲೆ ಹಾನಗಲ್ ನಲ್ಲಿ ಬಿಜೆಪಿ ಅಧಿಕಾರ ದುರ್ಬಳಕೆ ಮಾಡಿ, ಮಾಡಬಾರದ್ದು ಮಾಡಿತು. ಆದರೆ ಅಲ್ಲಿ ಮತಗಳಿಗೆ ನೋಡಿದರೆ ಕಾಂಗ್ರೆಸ್ ಗೆಲ್ಲುವ ಹಾದಿಯಲ್ಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಚುನಾವಣೆ ಫಲಿತಾಂಶ ನಾನು ವಿಶ್ಲೇಷಣೆ ಮಾಡುವುದಿಲ್ಲ. ಮಾನೆ ಆರು ಸಾವಿರ ಮತಗಳಿಂದ ಸೋತಿದ್ದರು. ಡಬಲ್ ಇಂಜಿನ್ ಸರ್ಕಾರ ಕೂಡ ಇತ್ತು. ಗೆಲ್ಲಲು ಎಲ್ಲ ಪ್ರಯತ್ನ ಬಿಜೆಪಿ ಸರ್ಕಾರ ಮಾಡಿತ್ತು. ಹಾನಗಲ್ ನಲ್ಲಿ ಕಾಂಗ್ರೆಸ್ ಗೆದ್ದಿಲ್ಲ. ಆದರೆ ಕಾಂಗ್ರೆಸ್ ಗೆಲುವಿನ ಹಾದಿಯಲ್ಲಿ ಇದೆ ಎಂದು ಹೇಳಿದರು.
ಸಿಂದಗಿಯಲ್ಲಿ ಕಾಂಗ್ರೆಸ್ ಮತಗಳಿಕೆ ಹೆಚ್ಚಾಗಿದೆ. ಬಿಜೆಪಿ ಏನೆಲ್ಲಾ ಕುತಂತ್ರ ಮಾಡಿದರು, ನಾವು ಮತಗಳಿಕೆಯಲ್ಲಿ ಸಮಾಧಾನ ಹೊಂದಿದ್ದೇವೆ. ಮೂರನೇ ಸ್ಥಾನದಲ್ಲಿ ಇದ್ದ ನಾವು, ಈಗ ಎರಡನೇ ಸ್ಥಾನಕ್ಕೆ ಬಂದಿದ್ದೇವೆ ಎಂದರು.
ಇದನ್ನೂ ಓದಿ:ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ರಾಜ್ ಕುಮಾರ್ ಸಮಾಧಿಗೆ ಹಾಲು ತುಪ್ಪದ ಶಾಸ್ತ್ರ
ಮನಗೂಳಿ ಜೆಡಿಎಸ್‍ನಲ್ಲಿ ನಿಲ್ಲದೆ ಕಾಂಗ್ರೆಸ್ ಗೆ ಬಂದರು. ಅವರಿಗೆ ಟಿಕೆಟ್ ನೀಡಿದ್ದೇವು, , ಒಟ್ಟಾಗಿ ಪ್ರಚಾರ ಮಾಡಿದ್ದೇವು. ಒಂದೇ ದಿನದಲ್ಲಿ ಎಲ್ಲ ಬದಲಾವಣೆ ಆಗಲ್ಲ. ನಾವು ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಮತ ಪಡೆದಿದ್ದೇವೆ ಎಂದರು.
ಈ ಚುನಾವಣೆಯಲ್ಲಿ ಒಂದು ಸ್ಪಷ್ಟವಾಗಿದೆ. ಜನರು ಬದಲಾವಣೆ ಬಯಸುತ್ತಿದ್ದಾರೆ. ಕಾಂಗ್ರೆಸ್ ಕಡೆ ಮತದಾರರ ಒಲವಿದೆ. ಎಲ್ಲವೂ ನಮ್ಮಿಂದ ಆಯಿತು ಅಂತ ಹೇಳುವುದಿಲ್ಲ. ಆದರೆ ಮತದಾರ ಬದಲಾಗಿದ್ದಾನೆ ಎಂದು ಹೇಳಿದ್ದಾರೆ.