Advertisement

ಮತದಾರರ ಪಟ್ಟಿ ಪರಿಷ್ಕರಣೆ ಕೊನೆ ದಿನ ಇಂದು

10:51 AM Jan 12, 2018 | Team Udayavani |

ಆಳಂದ: ರಾಜ್ಯದಲ್ಲಿ 2018ರಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ನೂತನ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಕಟ್ಟುನಿಟ್ಟಾಗಿ ಕೈಗೊಳ್ಳಬೇಕು ಎಂದು ತಹಶೀಲ್ದಾರ್‌ ಬಸವರಾಜ ಎಂ. ಬೆಣ್ಣೆಶಿರೂರ ಹೇಳಿದರು.

Advertisement

ತಹಶೀಲ್ದಾರ್‌ ಕಚೇರಿಯಲ್ಲಿ ಮತಗಟ್ಟೆವಾರು ಸೆಕ್ಟರ್‌ ಹಾಗೂ ಮಾರ್ಗ ಅಧಿಕಾರಿಗಳಿಗೆ ಕರೆದ ಸಭೆಯಲ್ಲಿ ಮಾತನಾಡಿದ ಅವರು, ನೂತನ ಮತದಾರರ ಪಟ್ಟಿಯಲ್ಲಿ 1ಡಿಸೆಂಬರ್‌ 2000ಕ್ಕೆ ಜನಿಸಿದವರ ವಯಸ್ಸು 18ಕ್ಕೆ ತಲುಪಿ ಮತಪಟ್ಟೆಯಲ್ಲಿ ಹೊಸ ಹೆಸರು ಸೇರ್ಪಡೆಗೆ ಅವಕಾಶವಿದ್ದು, ಪರಿಷ್ಕರಣೆಗೆ ಜ.12ರಂದು ಕೊನೆಯ ದಿನವಾಗಿದ್ದು, ಬಾಕಿ ಉಳಿಯದಂತೆ 18 ವರ್ಷ ಪೊರೈಸಿದ ಎಲ್ಲರ ಹೆಸರು ಮತಪಟ್ಟಿಯಲ್ಲಿ ಸೇರ್ಪಡೆಯಾಗಬೇಕು ಎಂದರು.

ಮೃತಪಟ್ಟಿದ್ದರೆ ಅಥವಾ ವಲಸೆ ಹೋಗಿದ್ದರೆ, ಹೆಸರು ತೆಗೆದುಹಾಕುವುದು. ಎರಡು ಕಡೆ ಹೆಸರಿರುವ ಮತದಾರರ ಹೆಸರು ಸಹ ತೆಗೆದು ಹಾಕುವಂತೆ ಬಿಎಲ್‌ಒಗಳಿಗೆ ತಿಳಿಸಲಾಗಿದೆ. ಈ ಕಾರ್ಯ ಕಟ್ಟುನಿಟ್ಟಿನಿಂದ ನಡೆಯುವಂತೆ
ಮೇಲಿಂದ ಮೇಲೆ ಭೇಟಿ ನೀಡಿ ಚುರುಕಿನ ಕಾರ್ಯ ನಡೆಯುವಂತೆ ನೋಡಿಕೊಂಡು ಖಚಿತ ಮಾಹಿತಿ ನೀಡುವಂತೆ ಹೇಳಿದರು.

ಸಭೆಯಲ್ಲಿ ಹಾಜರಿದ್ದ ಎಲ್ಲ ಪಿಯು ಮತ್ತು ಪದವಿ ಕಾಲೇಜುಗಳ ಮುಖ್ಯಸ್ಥರು ತಮ್ಮ ಕಾಲೇಜುಗಳಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳ ಹೆಸರು ಸಹ ಮತದಾರರ ಪಟ್ಟಿಯಲ್ಲಿ ಇದೆಯೋ ಇಲ್ಲವೋ ಎಂಬ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. 2000 ಜನವರಿ 1ರೊಳಗೆ ಹುಟ್ಟಿರುವ ಮತದಾರರನ್ನು ಮಿಲೇನಿಯಂ ಮತದಾರರು ಎಂದು
ಪರಿಗಣಿಸಿ ಸೇರ್ಪಡೆ ಮಾಡಿಕೊಳ್ಳಬೇಕು. ಅಧಿಕಾರಿಗಳು ಪ್ರತಿ ಮನೆಗೂ ಭೇಟಿ ನೀಡಿ ಕಡ್ಡಾಯವಾಗಿ ಮತದಾರರ ಮೊಬೈಲ್‌ ಸಂಖ್ಯೆ ಸಂಗ್ರಹಿಸಬೇಕು ಎಂದರು.

ಪ್ರೊ| ಶಿವಶರಣಪ್ಪ ಬಿರಾದಾರ, ದೇವಿಂದ ರಾಠೊಡ, ಭಗವಂತ ಬಳೂಂಡಗಿ, ಸಿದ್ಧಲಿಂಗಪ್ಪ ಎಂ.ಎನ್‌. ರೇವಣಸಿದ್ಧಪ್ಪ ನಾಗೋಜಿ ತಹಶೀಲ್ದಾರ್‌ರಿಂದ ಮಾಹಿತಿ ಪಡೆದರು. ಗ್ರೇಡ್‌-2 ತಹಶೀಲ್ದಾರ್‌ ಬಿ.ಜಿ. ಕುದರಿ, ಶಿರಸ್ತೇದಾರ ಶ್ರೀನಿವಾಸ ಕುಲಕರ್ಣಿ, ರಾಕೇಶ ಶೀಲವಂತ, ಕಂ.ನೀ. ಶರಣಬಸಪ್ಪ ಹಕ್ಕಿ, ವಿ.ಎ. ರಮೇಶ ಮಾಳಿ, ಸೆಕ್ಟರ್‌ ಅಧಿಕಾರಿ ಗಿರೀಶ ರೂಗಿ, ಶಿವರಾಜ ಕಲಶೆಟ್ಟಿ, ಶ್ರೀಶೈಲ ಖುರ್ದ, ಸುಭಾಷಶ್ಚಂದ್ರ ಆರ್‌. ರಾಮಚಂದ್ರ ಟಿ. ಹಕ್ಕಿ, ಬಾಬುರಾವ್‌ ಸರಡಗಿ, ಚಂದ್ರಕಾಂತ ಮಲಕೆ, ಮಲ್ಲಿನಾಥ ಕಾರಬಾರಿ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next