Advertisement

ಮತ ಖಾತ್ರಿ: ವಿವಿ ಪ್ಯಾಟ್‌ ಪ್ರಾತ್ಯಕ್ಷಿಕೆ

12:18 PM Mar 30, 2018 | Team Udayavani |

ಚಿತ್ತಾಪುರ: ವಿದ್ಯುನ್ಮಾನ ಮತಯಂತ್ರ (ಇವಿಎಂ)ದಲ್ಲಿ ದಾಖಲಿಸಿದ ಮತ ಯಾರಿಗೆ ಬಿದ್ದಿದೆ ಎಂಬುವುದನ್ನು ಖಚಿತ ಪಡಿಸುವ ಮತ ಖಾತ್ರಿ ಯಂತ್ರ (ವಿವಿ ಪ್ಯಾಟ್‌)ದ ಪ್ರಾತ್ಯಕ್ಷಿಕೆಗೆ ಪಟ್ಟಣದ ತಾಪಂ ಸಭಾಂಗಣದಲ್ಲಿ ಗುರುವಾರ ಚಾಲನೆ ನೀಡಲಾಯಿತು.

Advertisement

ವಿವಿಧ ರಾಜಕೀಯ ಪಕ್ಷಗಳ ಮುಖಂಡರಿಗೆ ಈ ಬಗ್ಗೆ ಮಾಹಿತಿ ನೀಡಲು ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿತ್ತು. ಸೇಡಂ ಸಹಾಯಕ ಆಯುಕ್ತ ಎಂ.ಪಿ ಮಾರುತಿ ಮಾತನಾಡಿ, ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಎಲ್ಲ ರಾಜಕೀಯ ಪಕ್ಷಗಳು, ಶಾಲಾ-ಕಾಲೇಜು, ಸಂಘ-ಸಂಸ್ಥೆ, ಗ್ರಾಮೀಣ ಪ್ರದೇಶದಲ್ಲಿ ಹಾಗೂ ಜಾತ್ರೆಗಳಲ್ಲಿ ಇವಿಎಂ ಮತ್ತು ವಿವಿಪ್ಯಾಟ್‌ ಯಂತ್ರ ಬಳಕೆ ಕುರಿತು ಅಣುಕು ಮತದಾನದ ಮೂಲಕ ಜಾಗೃತಿ ಮೂಡಿಸಲಾಗುತ್ತದೆ. ಇವಿಎಂ ಮತ್ತು ವಿವಿ ಪ್ಯಾಟ್‌ಗಳನ್ನು ಈಗಾಗಲೇ ಹಲವು ಬಾರಿ ತಪಾಸಣೆಗೆ ಒಳಪಡಿಸಲಾಗಿದೆ.

ವಿವಿ ಪ್ಯಾಟ್‌ನಲ್ಲಿ ಉತ್ತಮ ಗುಣಮಟ್ಟದ ಪೇಪರ್‌ನ್ನು ಮುದ್ರಣಕ್ಕೆ ಬಳಸಲಾಗುತ್ತದೆ. 22.5/15 ವೊಲ್ಟೆಜ್‌ ಬ್ಯಾಟರಿ ಕಾರ್ಯನಿರ್ವಹಿಸಲಿದೆ. ಒಂದು ರೀಲ್‌ನಲ್ಲಿ 1,500 ಮತಗಳು ಮುದ್ರಣಗೊಳ್ಳುತ್ತವೆ. ಪ್ರತಿ ವಿವಿ ಪ್ಯಾಟ್‌ ಯಂತ್ರದ ಜತೆಗೆ ಹೆಚ್ಚುವರಿ ರೀಲ್‌ನ್ನು ಕೊಡಲಾಗುತ್ತದೆ ಎಂದು ಹೇಳಿದರು.

ಮತದಾನ ಖಾತ್ರಿ ಪಡಿಸುವ ಯಂತ್ರ ಇದಾಗಿದೆ. ಮತದಾನದ ನಂತರ ಯಾರಿಗೆ ಮತದಾನ ಮಾಡಲಾಗಿದೆ ಎಂಬುವುದನ್ನು ಮತದಾರ ಖಾತ್ರಿ ಪಡಿಸಿಕೊಳ್ಳಲು ಏಳು ಸೆಕೆಂಡ್‌ ಮತಪತ್ರ ವಿವಿ ಪ್ಯಾಟ್‌ನಲ್ಲಿ ಪ್ರದರ್ಶನಗೊಳ್ಳುತ್ತದೆ. ನಂತರ ಅದು ವಿವಿಪ್ಯಾಟ್‌ ಪೆಟ್ಟಿಗೆಯಲ್ಲಿ ತುಂಡರಿಸಿಕೊಂಡು ಬೀಳುತ್ತದೆ ಎಂದು ಮಾಹಿತಿ ನೀಡಿದರು. ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿರುವುದರಿಂದ
ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರ ಕಾರ್ಯಕ್ರಮ, ಸಮಾರಂಭಗಳಿಗೆ ಉಪಯೋಗಿಸಲಾಗುವ ಪ್ಲೆಕ್ಸ್‌, ಕ್ಯಾಪ್‌, ಟೀ-ಶರ್ಟ, ಶಾಮಿಯಾನ, ಟವಲ್‌, ತಾತ್ಕಾಲಿಕ ವೇದಿಕೆ, ಬ್ಯಾನರ್‌, ಸ್ಪೀಕರ್‌, ಕರಪತ್ರ ಹೀಗೆ ಅನೇಕ ವಸ್ತು ಹಾಗೂ ಉಪಹಾರ, ಊಟ, ನೀರು ಸೇರಿದಂತೆ ಇನ್ನಿತರ ಸಾಮಗ್ರಿಗಳಿಗೆ ದರ ನಿಗದಿಪಡಿಸಲಾಗಿದೆ. ಮುದ್ರಣ ಮತ್ತು ವಿದ್ಯುನ್ಮಾನ ವಾಹಿನಿಯಲ್ಲಿ ನೀಡಲಾಗುವ ಜಾಹೀರಾತಿಗೂದರ ಇದ್ದು, ಇದೆಲ್ಲದರ ಖರ್ಚನ್ನು ಆಯಾ ರಾಜಕೀಯ ಪಕ್ಷದ ಖಾತೆ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂದು
ಹೇಳಿದರು.

ಮಾಸ್ಟರ್‌ ಟ್ರೇನರ್‌ಗಳಾದ ಬಸವರಾಜ ಎಂಬತ್ನಾಳ, ಕಾಶಿರಾಯ ಕಲಾಲ್‌, ಸಂತೋಷ ಶಿರನಾಳ ಅವರು ಇವಿಎಂ ಮತ್ತು ವಿವಿಪ್ಯಾಟ್‌ ಮತಯಂತ್ರದ ಕಾರ್ಯನಿರ್ವಹಿಸುವ ಕುರಿತು ಸಮಗ್ರ ಮಾಹಿತಿಯನ್ನು ಪ್ರಾಯೋಗಿಕವಾಗಿ ರಾಜಕೀಯ ಪಕ್ಷದವರಿಗೆ ಹಾಗೂ ಪತ್ರಕರ್ತರಿಗೆ ತಿಳಿಸಿಕೊಟ್ಟರು.

Advertisement

ತಹಶೀಲ್ದಾರ್‌ ಶಿವಾನಂದ ಪಿ. ಸಾಗರ, ತಾಪಂ ಇಒ ಲಕ್ಷ್ಮಣ ಶೃಂಗೇರಿ, ಕೃಷಿ ಇಲಾಖೆ ಸಹಾಯಕ ಆಯುಕ್ತ ಜಾಲೇಂದ್ರ ಗುಂಡಪ್ಪ, ಸೋಮು ರಾಠೊಡ, ದಶರಥ, ಮಧುಸೋಧನ್‌ ಗಾಳೆ, ಕರೀಬಬಸಪ್ಪ, ವಿಜಯಕುಮಾರ, ಮಾಹಾನಿಂಗಯ್ಯ, ಮಕ್‌ಸೂದ್‌, ಬಾಬು ಇದ್ದರು.

ಹಣ ಸಾಗಿಸಿದರೆ ಜಪ್ತಿ
ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಯಾವುದೇ ಪಕ್ಷಕ್ಕೆ ಸಿಮೀತವಾದ ವಾಹನಗಳಲ್ಲಿ 50 ಸಾವಿರ ರೂ. ಇದ್ದರೆ ಅದನ್ನು ಜಪ್ತಿ ಮಾಡಿಕೊಂಡು ದೂರು ದಾಖಲಿಸಿಕೊಳ್ಳಬೇಕು. 10 ಲಕ್ಷರೂ. ಕ್ಕಿಂತ ಹೆಚ್ಚು ಹಣ ಸಾಗಿಸುತ್ತಿರುವ ವಾಹನಗಳು ಚೆಕ್‌ಪೋಸ್ಟ್‌ ಹತ್ತಿರ ಸಿಕ್ಕರೇ ಐಟಿ ಅಧಿ ಕಾರಿಗಳಿಗೆ ಪರೀಶಿಲಿಸಲು ಒಪ್ಪಿಸಲಾಗುವುದು.
 ಎಂ.ಪಿ. ಮಾರುತಿ ಸಹಾಯಕ ಆಯುಕ್ತರು, ಸೇಡಂ

Advertisement

Udayavani is now on Telegram. Click here to join our channel and stay updated with the latest news.

Next