Advertisement

ಪ್ರತಾಪಸಿಂಹಗೆ ಟಿಕೆಟ್‌ ಕೊಡದಿದ್ದರೆ ನೋಟಾಕ್ಕೆ ಮತ

11:26 PM Mar 10, 2024 | Team Udayavani |

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪಸಿಂಹ ಅವರಿಗೆ ಈ ಬಾರಿ ಟಿಕೆಟ್‌ ಕೈತಪ್ಪುವ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ, ಸಂಸದರ ಪರವಾಗಿ ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನ ಆರಂಭವಾಗಿದೆ.

Advertisement

ಮೈಸೂರು-ಕೊಡಗು ಕ್ಷೇತ್ರವಷ್ಟೇ ಅಲ್ಲದೆ ರಾಜ್ಯಾದ್ಯಂತ ಪ್ರತಾಪಸಿಂಹ ಅವರ ಅಭಿಮಾನಿಗಳು ಫೇಸ್‌ಬುಕ್‌, ಎಕ್ಸ್‌ ಖಾತೆಗಳಲ್ಲಿ ಪ್ರತಾಪ್‌ಗೆ ಟಿಕೆಟ್‌ ನೀಡುವಂತೆ ಆಗ್ರಹಿಸಿದ್ದಾರೆ.

ವಿಶೇಷ ಎಂದರೆ, ಪ್ರತಾಪಸಿಂಹ ಅವರನ್ನು ಸೈದ್ಧಾಂತಿಕವಾಗಿ ವಿರೋಧಿಸಿದವರೂ ಅವರ ಪರ ಬ್ಯಾಟಿಂಗ್‌ ಮಾಡುತ್ತಿದ್ದಾರೆ. ಪ್ರತಾಪ್‌ಗೆ ಟಿಕೆಟ್‌ ಕೊಡದಿದ್ದರೆ ನೋಟಾಕ್ಕೆ ಮತ ಹಾಕುವುದಾಗಿ ಪೋಸ್ಟ್‌ ಮಾಡಿದ್ದಾರೆ. ಕೆಲವರು “ಮತ್ತೂಮ್ಮೆ ಪ್ರತಾಪಸಿಂಹ’ ಎಂಬ ಪೋಸ್ಟ್ ಮಾಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next