Advertisement

ಖರ್ಗೆ ಮಾಡಿದ ಅಭಿವೃದ್ಧಿ ಕೆಲಸಕ್ಕಾಗಿ ಮತ ನೀಡಿ

04:44 PM Mar 31, 2019 | Team Udayavani |

ಯಾದಗಿರಿ: ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡಾ| ಮಲ್ಲಿಕಾರ್ಜುನ ಖರ್ಗೆ ಅವರು ಹಲವಾರು ವರ್ಷಗಳಿಂದ ಗುರುಮಠಕಲ್‌ ಮತಕ್ಷೇತ್ರದ ಗ್ರಾಮೀಣ ಭಾಗದ ಜನರಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ. ಅವರ ಅಭಿವೃದ್ಧಿ ಕೆಲಸಕ್ಕಾಗಿ ಚುನಾವಣೆಯಲ್ಲಿ ಅವರಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಚೆನ್ನಾರಡ್ಡಿ ಪಾಟೀಲ ತುನ್ನೂರ ಮನವಿ ಮಾಡಿದರು.

Advertisement

ಗುರಮಠಕಲ್‌ ಮತಕ್ಷೇತ್ರದ ಕೌಳೂರು, ಜಿನಕೇರಿ, ಜಿನಕೇರಿ ತಾಂಡಾ ಹಾಗೂ ಶೆಟಗೇರಾ ಗ್ರಾಮದಲ್ಲಿ ಶುಕ್ರವಾರ ಖರ್ಗೆ ಅವರ ಪರ ಮತಯಾಚಿಸಿ ಅವರು ಮಾತನಾಡಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಈಗಿನ ಪ್ರಧಾನಮಂತ್ರಿ ನರೇಂದ್ರ ಮೋದಿ ವರ್ಷಕ್ಕೆ 2ಕೋಟಿ ಉದ್ಯೋಗ ನೀಡುವುದಾಗಿ ಸುಳ್ಳು ಭರವಸೆ ನೀಡಿ 5 ವರ್ಷ ಅಧಿಕಾರ ನಡೆಸಿದರು ಎಂದು ಟಿಕಿಸಿದರು.

ಖರ್ಗೆ ಹಾಗೂ ದಿ| ಧರ್ಮಸಿಂಗ್‌ ಅವರು ಸಂಸತ್ತಿನಲ್ಲಿ ಹೈ.ಕ.ಭಾಗದ ಅಭಿವೃದ್ಧಿಗಾಗಿ ಸಂವಿಧಾನದ 371ನೇ (ಜೆ) ಕಲಂ ತಿದ್ದುಪಡಿ ಮಾಡಿಸಿದ್ದರಿಂದ ಈ ಭಾಗದ ಯುವಕರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಹೆಚ್ಚಿನ ಅವಕಾಶಗಳು ಸಿಗುತ್ತಿವೆ. ಯುವಕರು ಬಿಜೆಪಿ ನಾಯಕರ ಸುಳ್ಳು ಭರವಸೆಗಳಿಗೆ ಮಾರುಹೋಗದೆ ಕಾಂಗ್ರೆಸ್‌ ಪಕ್ಷ ಬೆಂಬಲಿಸಬೇಕು ಎಂದು ಹೇಳಿದರು.

ಗುರುಮಠಕಲ್‌ ಕ್ಷೇತ್ರದ ಮತದಾರರ ಆಶೀರ್ವಾದದಿಂದಲೇ ಖರ್ಗೆ ಅವರು ದೇಶದಲ್ಲಿ ಒಬ್ಬ ಪ್ರಬುದ್ಧ ರಾಜಕಾರಣಿಯಾಗಿ
ಹೊರಹೊಮ್ಮಿದ್ದಾರೆ. ಈ ಕ್ಷೇತ್ರದಿಂದ ಸಾಮಾನ್ಯ ಮನುಷ್ಯ ಅವರ ಬಳಿಗೆ ತೆರಳಿದರೆ ಸಮಸ್ಯೆ ಪರಿಹಾರಕ್ಕೆ ಸ್ಪಂದಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿರುವ ಡಾ| ಉಮೇಶ ಜಾಧವ ಮೊದಲು ಎಲ್ಲಿದ್ದರು? ಅವರ ಕೊಡುಗೆ ಏನು ಎಂದು ಪ್ರಶ್ನಿಸಿದರು. ತಾಪಂ ಮಾಜಿ ಸದಸ್ಯ ಶರಣಪ್ಪಗೌಡ ಕೌಳೂರು, ಹನುಮಂತಪ್ಪ ಬಳಿಚಕ್ರ ಮಾತನಾಡಿದರು. ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡರಾದ ಚಿದಾನಂದಪ್ಪ ಕಾಳಬೆಳಗುಂದಿ, ಶಾಂತರಡ್ಡಿ ದೇಸಾಯಿ ನಾಯ್ಕಲ್‌, ಸಿದ್ದಪ್ಪಗೌಡ ಕಾಳಬೆಳಗುಂದಿ, ಶರಣಪ್ಪ ದಳಪತಿ ಶೆಟಗೇರಾ, ಶ್ರೀನಿವಾಸ ಕುಲಕರ್ಣಿ, ಮರೆಪ್ಪ ಗೌಡಗೇರಿ, ಲಕ್ಷ¾ಣ ನಾಯಕ, ಹನುಮಂತಪ್ಪ ಜಿನಿಕೇರಿ, ಸಾಬರಡ್ಡಿ ಕೌಳೂರು, ಸೋಮಶೇಖರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next