Advertisement

ಕಾಂಗ್ರೆಸ್‌ ಅಭ್ಯರ್ಥಿಗೆ ಮತ ನೀಡಿ: ಚಂದ್ರು ಮನವಿ

04:31 PM Jun 02, 2018 | |

ದಾವಣಗೆರೆ: ಎರಡೂವರೆ ದಶಕಗಳ ಕಾಲ ಉಪನ್ಯಾಸಕರಾಗಿ, ಈಚೆಗೆ ಶಿಕ್ಷಣ ಸಂಸ್ಥೆ ನಡೆಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕಾಂಗ್ರೆಸ್‌ನ ಎಸ್‌. ರಾಮಪ್ಪ ಅವರನ್ನು ಪ್ರಥಮ ಪ್ರಾಶಸ್ತ್ಯ ಮತದೊಂದಿಗೆ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಆಯ್ಕೆ ಮಾಡಲು ರಾಜ್ಯ ಕಾಂಗ್ರೆಸ್‌ ಪ್ರಚಾರ ಸಮಿತಿ ಪ್ರಧಾನ ಕಾರ್ಯದರ್ಶಿ
ಮುಖ್ಯಮಂತ್ರಿ ಚಂದ್ರು ಮನವಿ ಮಾಡಿದ್ದಾರೆ.

Advertisement

ಚಿಂತಕರ ಚಾವಡಿ, ಮೇಲ್ಮನೆ ಎಂದೇ ಕರೆಯಲ್ಪಡುವ ವಿಧಾನ ಪರಿಷತ್‌ನಲ್ಲಿ ಶಿಕ್ಷಕರ ಕ್ಷೇತ್ರದ ಸಮಸ್ಯೆ ಮತ್ತು ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವರು ಬೇಕಾಗುತ್ತದೆ. ಆ ನಿಟ್ಟಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಸ್‌. ರಾಮಪ್ಪ ಅರ್ಹರಾಗಿದ್ದಾರೆ. ಹಾಗಾಗಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಮತದಾರರು ಅವರನ್ನ ಗೆಲ್ಲಿಸಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು. 

ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಇದೆ. ವಿಧಾನ ಸಭೆಯಲ್ಲಿ ಮಂಡನೆಯಾಗುವಂತಹ ವಿಧೇಯಕ,
ಮಸೂದೆ, ಕಾನೂನುಗಳ ಬಗ್ಗೆ ವಿಧಾನ ಪರಿಷತ್‌ನಲ್ಲಿ ಅರ್ಥಪೂರ್ಣ ಚರ್ಚೆ ಆಗಬೇಕು. ಬಹುಮತದೊಂದಿಗೆ ವಿಧೇಯಕ, ಮಸೂದೆ, ಕಾನೂನು ಅಂಗೀಕಾರಗೊಳ್ಳಲು ಅಗತ್ಯ ಸದಸ್ಯರು ಬೇಕು. ಹಾಗಾಗಿ ಕಾಂಗ್ರೆಸ್‌ನ ಎಸ್‌. ರಾಮಪ್ಪ ಅವರಿಗೆ ಪ್ರಥಮ ಪ್ರಾಶಸ್ತ್ಯ ಮತ ನೀಡಬೇಕು. ಪ್ರಾಶಸ್ತ್ಯ ಮತ ವ್ಯವಸ್ಥೆ ಇರುವುದರಿಂದ ಇನ್ನುಳಿದವರಿಗೆ ಮತ ನೀಡಬಹುದು. ಯಾವುದೇ ಕಾರಣಕ್ಕೂ ಮತ ಹಾಕುವುದನ್ನು ತಪ್ಪಿಸಬಾರದು ಎಂದರು.

ಈಚೆಗೆ ಎಲ್ಲಿಯೋ ಒಂದು ಕಡೆ ವಿಧಾನ ಸಭೆ, ಪರಿಷತ್‌ನ ಗೌರವ ಕಡಿಮೆ ಆಗುತ್ತಿದೆ ಎಂದೆನಿಸುತ್ತದೆ. ಪರಿಷತ್‌ನಲ್ಲಿ ಆಯಾಯ ಕ್ಷೇತ್ರದವರು ಬರಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಆದರೆ, ಆ ರೀತಿ ಆಗುತ್ತಿಲ್ಲ. ರಾಮಪ್ಪ ಉಪನ್ಯಾಸಕರಾಗಿದ್ದವರು. ಹಾಗಾಗಿ ಅವರು ಶಿಕ್ಷಕರ ಕ್ಷೇತ್ರಕ್ಕೆ ಸೂಕ್ತ. ನಮ್ಮ ನೇರ ವಿರೋಧಿ ಬಿಜೆಪಿಯವರು ಶಿಕ್ಷಕರಲ್ಲ ಮತ್ತು ಶಿಕ್ಷಣ ಕ್ಷೇತ್ರದಿಂದಲೂ ಬಂದವರಲ್ಲ, ಹಾಗಾಗಿ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ನೀಡಬೇಕು ಎಂದರು.

ಪ್ರಚಾರ ಸಮಿತಿಯ ಹನಗವಾಡಿ ರುದ್ರಪ್ಪ, ಶರಣಪ್ಪ, ಜಿಲ್ಲಾ ಅಧ್ಯಕ್ಷ ಎಂ.ಟಿ. ಸುಭಾಶ್ಚಂದ್ರ ಇತರರು ಸುದ್ದಿಗೋಷ್ಠಿಯಲ್ಲಿದ್ದರು.’ ವಂತಿಗೆಗೆ ಕಡಿವಾಣ ಖಾಸಗಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ವಸೂಲು
ಮಾಡುವ ವಂತಿಗೆಗೆ ಕಡಿವಾಣ ಹಾಕಲೇಬೇಕು. ವಂತಿಗೆ ನಿಯಂತ್ರಣಕ್ಕೆ ನಾನು ಸಾಕಷ್ಟು ಹೋರಾಟ ನಡೆಸುತ್ತಿದ್ದೇನೆ. ವಂತಿಗೆ ವಸೂಲು ಮಾಡುವುದು ಒಳ್ಳೆಯದಲ್ಲ ಎಂದು ನಟ ಮುಖ್ಯಮಂತ್ರಿ ಚಂದ್ರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next