Advertisement

ಮೈತ್ರಿ ಅಭ್ಯರ್ಥಿಗೆ ಮತ ನೀಡಿ: ವಿಶ್ವನಾಥ್‌

09:53 PM Apr 16, 2019 | Lakshmi GovindaRaju |

ಹುಣಸೂರು: ಪ್ರಾದೇಶಿಕ ಪಕ್ಷಗಳು ಬಲಯುತವಾದರೆ ಕೇಂದ್ರ ಸರ್ಕಾರವನ್ನು ಅಲುಗಾಡಿಸಬಹುದು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಮನವಿ ಮಾಡಿದರು.

Advertisement

ಹುಣಸೂರು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಮಿಳುನಾಡಿನಲ್ಲಿ ನಮ್ಮಷ್ಟೇ ಜನಸಂಖ್ಯೆ ಇದ್ದರೂ ಅಲ್ಲಿ 39 ನಮ್ಮಲ್ಲಿ 28 ಸಂಸದರ ಕ್ಷೇತ್ರಗಳಿದ್ದು. ತಾರತಮ್ಯ ಹೋಗಲಾಡಿಸಲು ಮೈತ್ರಿ ಅಭ್ಯರ್ಥಿ ವಿಜಯಶಂಕರ್‌ರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ಮಲತಾಯಿ ಧೋರಣೆ ತೋರುತ್ತಿದ್ದು, ಕನ್ನಡಿಗರು ಮೈತ್ರಿ ಪಕ್ಷಗಳ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಸ್ವಾಭಿಮಾನ ಪ್ರದರ್ಶಿಸಬೇಕೆಂದರು.

ಕೇಂದ್ರ ಸರ್ಕಾರ ಉದ್ಯೋಗ ಭರವಸೆ ಈಡೇರಿಸುವಲ್ಲಿ ವಿಫ‌ಲವಾಗಿದೆ. ರಾಜ್ಯಕ್ಕೆ ಉದ್ಯೋಗ ಖಾತರಿ ಯೋಜನೆಯಡಿ ಅನುದಾನ, ಜಿಎಸ್‌ಟಿ ಬಾಬ್ತು ಹಣ ನೀಡಿಲ್ಲ, ಸಾಲ ಮನ್ನಾವನ್ನು ಲಘುವಾಗಿ ಪರಿಗಣಿಸಿದ್ದಾರೆ.

ಕೊಡಗಿನ ಸಂತ್ರಸ್ಥರಿಗೆ ನ್ಯಾಯಯುತ ಪರಿಹಾರ ನೀಡಿಲ್ಲ, ಶಿಕ್ಷಣ, ಆರೋಗ್ಯ, ನೀರಾವರಿ ಯೋಜನೆ ಸೇರಿದಂತೆ ಯಾವೊಂದು ಕ್ಷೇತ್ರಗಳಿಗೆ ಆದ್ಯತೆ ನೀಡಿಲ್ಲ. ಎಲ್ಲದಕ್ಕೂ ನಿಬಂಧನೆ ಹೇರಿ ಅನ್ಯಾಯ ಮಾಡಿದೆ. ಇಷ್ಟೆಲ್ಲಾ ಅನ್ಯಾಯವಾದರೂ ರಾಜ್ಯದ ಬಿಜೆಪಿ ಸಂಸದರು ಪ್ರಶ್ನಿಸಲಿಲ್ಲ ಎಂದು ದೂರಿದರು.

Advertisement

ಕರ್ನಾಟಕದಲ್ಲಿ ಬಲಿಷ್ಠ ಆಡಳಿವಿದೆ. ಮೈತ್ರಿ ಸರ್ಕಾರದಲ್ಲಿ ಅತ್ಯುತ್ತಮ ಕಾರ್ಯಗಳು ನಡೆಯುತ್ತಿವೆ. ಮೈಸೂರು ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಮೈತ್ರಿ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ ಎಂದರು. ತಾಲೂಕು ಜೆಡಿಎಸ್‌ ಅಧ್ಯಕ್ಷ ಮಹದೇವೇಗೌಡ, ನಗರ ಅಧ್ಯಕ್ಷ ಮಹಮದ್‌ಫೀರ್‌, ನಗರಸಭೆ ಮಾಜಿ ಅಧ್ಯಕ್ಷರಾದ ಮಹದೇವ್‌, ಶಿವಕುಮಾರ್‌, ಮುಖಂಡರಾದ ಅಣ್ಣಯ್ಯನಾಯಕ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next