Advertisement

ಮತ ಎಣಿಕೆ ಸಜ್ಜು: ಇಂದು ಮಧ್ಯಾಹ್ನಕ್ಕೆ ಫ‌ಲಿತಾಂಶ

01:58 PM May 15, 2018 | |

ಮೈಸೂರು: ವಿಧಾನಸಭಾ ಚುನಾವಣೆಯ ಮತ ಎಣಿಕೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಪೈಕಿ ಹುಣಸೂರು ರಸ್ತೆಯಲ್ಲಿರುವ ಮಹಾರಾಣಿ ವಾಣಿಜ್ಯ ಕಾಲೇಜು ನೂತನ ಕಟ್ಟಡದಲ್ಲಿ 7 ವಿಧಾನಸಭಾ ಕ್ಷೇತ್ರಗಳು, ಕೂರ್ಗಳ್ಳಿಯಲ್ಲಿರುವ ಎನ್‌ಐಇ ಕಾಲೇಜಿನಲ್ಲಿ ನಾಲ್ಕು ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಡೆಯಲಿದೆ.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಿರುವ ಚಾಮುಂಡೇಶ್ವರಿ ಕ್ಷೇತ್ರ ಸೇರಿದಂತೆ ಕೆ.ಆರ್‌.ನಗರ, ಹುಣಸೂರು, ಎಚ್‌.ಡಿ.ಕೋಟೆ, ನಂಜನಗೂಡು, ತಿ.ನರಸೀಪುರ, ನರಸಿಂಹರಾಜ ಕ್ಷೇತ್ರಗಳ ಮತ ಎಣಿಕೆ ಹುಣಸೂರು ರಸ್ತೆಯ ಮಹಾರಾಣಿ ವಾಣಿಜ್ಯ ಕಾಲೇಜು ನೂತನ ಕಟ್ಟಡದಲ್ಲಿ ನಡೆದರೆ, ಪಿರಿಯಾಪಟ್ಟಣ, ಕೃಷ್ಣರಾಜ, ವರುಣಾ ಹಾಗೂ ಚಾಮರಾಜ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಕೂರ್ಗಳ್ಳಿಯ ಎನ್‌ಐಇ ಕಾಲೇಜಿನಲ್ಲಿ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ತಿಳಿಸಿದ್ದಾರೆ.

ಎಣಿಕೆಗೆ 598 ಸಿಬ್ಬಂದಿ ಬಳಕೆ: ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭವಾಗಲಿದ್ದು, ಮೊದಲಿಗೆ ಅಂಚೆ ಮತಪತ್ರಗಳ ಎಣಿಕೆ ಪೂರ್ಣಗೊಳಿಸಿ, ಮತಯಂತ್ರಗಳಲ್ಲಿನ ಮತ ಎಣಿಕೆ ನಡೆಸಲಾಗುವುದು. ಜಿಲ್ಲೆಯ 2860 ಮತಗಟ್ಟೆಗಳ ಮತ ಎಣಿಕೆಗೆ 187 ಎಣಿಕೆ ಮೇಲ್ವಿಚಾರಕರು, 187 ಎಣಿಕೆ ಸಹಾಯಕರು, 224 ಮೈಕ್ರೋ ಅಬ್ಸರ್‌ವರ್ ಸೇರಿದಂತೆ ಎಣಿಕೆ ಕಾರ್ಯಕ್ಕೆ ಒಟ್ಟು 598 ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತಿದೆ.

ಕ್ಷೇತ್ರವಾರು ವಿವರ: ಪಿರಿಯಾಪಟ್ಟಣ ಕ್ಷೇತ್ರದ 230 ಮತಗಟ್ಟೆಗಳಲ್ಲಿನ ಮತ ಎಣಿಕೆಗೆ 17 ಎಣಿಕೆ ಮೇಲ್ವಿಚಾರಕರು, 17 ಎಣಿಕೆ ಸಹಾಯಕರು, 22 ಮೈಕ್ರೋ ಅಬ್ಸರ್‌ವರ್ ಸೇರಿದಂತೆ ಎಣಿಕೆ ಕಾರ್ಯಕ್ಕೆ ಒಟ್ಟು 56 ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತಿದೆ. ಕೆ.ಆರ್‌.ನಗರ ಕ್ಷೇತ್ರದ 252 ಮತಗಟ್ಟೆಗಳ ಮತಗಳ ಎಣಿಕೆಗೆ 17 ಎಣಿಕೆ ಮೇಲ್ವಿಚಾರಕರು,

17 ಎಣಿಕೆ ಸಹಾಯಕರು, 22 ಮೈಕ್ರೋ ಅಬ್ಸರ್‌ವರ್ ಸೇರಿದಂತೆ ಎಣಿಕೆ ಕಾರ್ಯಕ್ಕೆ ಒಟ್ಟು 56 ಸಿಬ್ಬಂದಿ. ಹುಣಸೂರು ಕ್ಷೇತ್ರದ 272 ಮತಗಟ್ಟೆಗಳ ಮತ ಎಣಿಕೆಗೆ 17 ಎಣಿಕೆ ಮೇಲ್ವಿಚಾರಕರು, 17 ಎಣಿಕೆ ಸಹಾಯಕರು, 19 ಮೈಕ್ರೋ ಅಬ್ಸರ್‌ವರ್ ಸೇರಿದಂತೆ ಎಣಿಕೆ ಕಾರ್ಯಕ್ಕೆ ಒಟ್ಟು 53 ಸಿಬ್ಬಂದಿ. ಎಚ್‌.ಡಿ.ಕೋಟೆ ಕ್ಷೇತ್ರದ 277 ಮತಗಟ್ಟೆಗಳ ಮತ ಎಣಿಕೆಗೆ 17 ಎಣಿಕೆ ಮೇಲ್ವಿಚಾರಕರು,

Advertisement

17 ಎಣಿಕೆ ಸಹಾಯಕರು, 22 ಮೈಕ್ರೋ ಅಬ್ಸರ್‌ವರ್ ಸೇರಿದಂತೆ ಎಣಿಕೆ ಕಾರ್ಯಕ್ಕೆ ಒಟ್ಟು 56 ಸಿಬ್ಬಂದಿ. ನಂಜನಗೂಡು ಕ್ಷೇತ್ರದ 247 ಮತಗಟ್ಟೆಗಳ ಮತ ಎಣಿಕೆಗೆ 17 ಎಣಿಕೆ ಮೇಲ್ವಿಚಾರಕರು, 17 ಎಣಿಕೆ ಸಹಾಯಕರು, 19 ಮೈಕ್ರೋ ಅಬ್ಸರ್‌ವರ್ ಸೇರಿದಂತೆ ಎಣಿಕೆ ಕಾರ್ಯಕ್ಕೆ ಒಟ್ಟು 53 ಸಿಬ್ಬಂದಿ.

ಚಾಮುಂಡೇಶ್ವರಿ ಕ್ಷೇತ್ರದ 335 ಮತಗಟ್ಟೆಗಳ ಮತ ಎಣಿಕೆಗೆ 17 ಎಣಿಕೆ ಮೇಲ್ವಿಚಾರಕರು, 17 ಎಣಿಕೆ ಸಹಾಯಕರು, 19ಮೈಕ್ರೋ ಅಬ್ಸರ್‌ವರ್ ಸೇರಿದಂತೆ ಎಣಿಕೆ ಕಾರ್ಯಕ್ಕೆ ಒಟ್ಟು 53 ಸಿಬ್ಬಂದಿ. ಕೃಷ್ಣರಾಜ ಕ್ಷೇತ್ರದ 253 ಮತಗಟ್ಟೆಗಳ ಮತ ಎಣಿಕೆಗೆ 17 ಎಣಿಕೆ ಮೇಲ್ವಿಚಾರಕರು, 17 ಎಣಿಕೆ ಸಹಾಯಕರು, 22 ಮೈಕ್ರೋ ಅಬ್ಸರ್‌ವರ್ ಸೇರಿದಂತೆ ಎಣಿಕೆ ಕಾರ್ಯಕ್ಕೆ ಒಟ್ಟು 56 ಸಿಬ್ಬಂದಿ.

ಚಾಮರಾಜ ಕ್ಷೇತ್ರದ 239 ಮತಗಟ್ಟೆಗಳ ಮತ ಎಣಿಕೆಗೆ 17 ಎಣಿಕೆ ಮೇಲ್ವಿಚಾರಕರು, 17 ಎಣಿಕೆ ಸಹಾಯಕರು, 22 ಮೈಕ್ರೋ ಅಬ್ಸರ್‌ವರ್ ಸೇರಿದಂತೆ ಎಣಿಕೆ ಕಾರ್ಯಕ್ಕೆ ಒಟ್ಟು 56ಸಿಬ್ಬಂದಿ. ನರಸಿಂಹರಾಜ ಕ್ಷೇತ್ರದ 273 ಮತಗಟ್ಟೆಗಳ ಮತ ಎಣಿಕೆಗೆ  17 ಎಣಿಕೆ ಮೇಲ್ವಿಚಾರಕರು, 17 ಎಣಿಕೆ ಸಹಾಯಕರು, 19 ಮೈಕ್ರೋ ಅಬ್ಸರ್‌ವರ್ ಸೇರಿದಂತೆ ಎಣಿಕೆ ಕಾರ್ಯಕ್ಕೆ ಒಟ್ಟು 53 ಸಿಬ್ಬಂದಿ.

ವರುಣಾ ಕ್ಷೇತ್ರದ 260 ಮತಗಟ್ಟೆಗಳ ಮತ ಎಣಿಕೆಗೆ 17 ಎಣಿಕೆ ಮೇಲ್ವಿಚಾರಕರು, 17 ಎಣಿಕೆ ಸಹಾಯಕರು, 19 ಮೈಕ್ರೋ ಅಬ್ಸರ್‌ವರ್ ಸೇರಿದಂತೆ ಎಣಿಕೆ ಕಾರ್ಯಕ್ಕೆ ಒಟ್ಟು 53 ಸಿಬ್ಬಂದಿ. ತಿ.ನರಸೀಪುರ ಕ್ಷೇತ್ರದ 222 ಮತಗಟ್ಟೆಗಳ ಮತ ಎಣಿಕೆಗೆ 17 ಎಣಿಕೆ ಮೇಲ್ವಿಚಾರಕರು, 17 ಎಣಿಕೆ ಸಹಾಯಕರು, 19ಮೈಕ್ರೋ ಅಬ್ಸರ್‌ವರ್ ಸೇರಿದಂತೆ ಎಣಿಕೆ ಕಾರ್ಯಕ್ಕೆ ಒಟ್ಟು 53 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ ತಲಾ 14 ಟೇಬಲ್‌ಗ‌ಳನ್ನು ಬಳಸಿಕೊಳ್ಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next