Advertisement

ಕೌಡಿಚ್ಚಾರ್‌: ಕಿಂಡಿ ಅಣೆಕಟ್ಟು ಸ್ವಚ್ಛತೆ

02:55 AM Jul 05, 2018 | Karthik A |

ಕಾವು: ಕೇಂದ್ರ ಸರಕಾರದ ಸ್ವಚ್ಛ ಭಾರತ್‌ ಸಮ್ಮರ್‌ ಇಂಟರ್ನ್ಶಿಪ್‌ ಅಭಿಯಾನದಡಿ ಮಂಗಳೂರು ನೆಹರೂ ಯುವ ಕೇಂದ್ರದ ಸಹಯೋಗದಲ್ಲಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಾವು ನನ್ಯ ತುಡರ್‌ ಯುವಕ ಮಂಡಲದ ವತಿಯಿಂದ ಕಿಂಡಿ ಅಣೆಕಟ್ಟು ಸ್ವಚ್ಛತಾ ಕಾರ್ಯ ನಡೆಯಿತು. ಕೌಡಿಚ್ಚಾರ್‌ ಸೇತುವೆ ಬಳಿ ಇರುವ ಕಿಂಡಿ ಅಣೆಕಟ್ಟು, ಹೊಳೆಯ ಇಕ್ಕೆಲಗಳಲ್ಲಿ ಕಿಂಡಿ ಅಣೆಕಟ್ಟಿನ ಪಿಲ್ಲರ್‌ ನ ಮಧ್ಯದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಮರದ ತುಂಡು, ಕಸ ಕಡ್ಡಿ, ಪ್ಲಾಸ್ಟಿಕ್‌, ತ್ಯಾಜ್ಯಗಳನ್ನು ತೆರವುಗೊಳಿಸಲಾಯಿತು. ಹೊಳೆಯ ನೀರು ಕಿಂಡಿ ಅಣೆಕಟ್ಟಿನ ಮೂಲಕ ಸರಾಗವಾಗಿ ಹರಿಯುವಂತೆ ಮಾಡಿ ಮಣ್ಣಿನ ಸವಕಳಿ ಆಗದಂತೆ ತಡೆಯಲಾಯಿತು.

Advertisement

ಸ್ವಚ್ಛತಾ ಕಾರ್ಯದಲ್ಲಿ ಯುವಕ ಮಂಡಲದ ಅಧ್ಯಕ್ಷ ಗಂಗಾಧರ ನಾಯ್ಕ, ಪ್ರಧಾನ ಕಾರ್ಯದರ್ಶಿ ನವೀನ ನನ್ಯಪಟ್ಟಾಜೆ, ಉಪಾಧ್ಯಕ್ಷ ಜಗದೀಶ ಆಚಾರಿಮೂಲೆ, ಜತೆಕಾರ್ಯದರ್ಶಿ ಶ್ರೀಕಾಂತ್‌ ಗೌಡ, ಸಾಂಸ್ಕೃತಿಕ ಕಾರ್ಯದರ್ಶಿ ಸಂದೇಶ್‌ ಚಾಕೋಟೆ, ಕೋಶಾಧಿಕಾರಿ ಸತೀಶ ಮದ್ಲ, ಕ್ರೀಡಾ ಕಾರ್ಯದರ್ಶಿ ರಾಘವ ಬಿ., ಸ್ವಚ್ಛತಾ ಸಮಿತಿ ಉಸ್ತುವಾರಿಗಳಾದ ಧನಂಜಯ ನಾಯ್ಕ ಕುಂಞಿಕುಮೇರು, ಸಂಕಪ್ಪ ಪೂಜಾರಿ ಚಾಕೋಟೆ, ಶ್ರೀಕುಮಾರ್‌ ಬಲ್ಯಾಯ, ಸದಸ್ಯರಾದ ಕಾರ್ತಿಕ್‌ ನನ್ಯಪಟ್ಟಾಜೆ, ಭವಿತ್‌ ರೈ, ಹರ್ಷ ಎ.ಆರ್‌., ದಿನೇಶ್‌ ಮದ್ಲ, ಪುರುಷೋತ್ತಮ ಆಚಾರ್ಯ ನನ್ಯ, ಸುರೇಶ ಮದ್ಲ, ತಿರುಮಲೇಶ್‌, ರಾಘವ ಪಿ.ಎಸ್‌., ಯತೀಶ್‌ ಮದ್ಲ, ಲಿಂಗಪ್ಪ ನಾಯ್ಕ ನನ್ಯ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next