Advertisement

ಸ್ವಪ್ರೇರಣೆಯಿಂದ ಸೀಲ್‌ಡೌನ್‌ ಶುರು

03:16 PM May 19, 2021 | Team Udayavani |

ಬೈಲಹೊಂಗಲ: ತಾಲೂಕಿನ ವಕ್ಕುಂದ ಗ್ರಾಮದಲ್ಲಿ ಕೊರೊನಾ ಹೆಚ್ಚುತ್ತಿರುವುದರಿಂದ ಮಂಗಳವಾರ ದಿಂದ ಒಂದು ವಾರ ಸಂಪೂರ್ಣ ಸೀಲ್‌ ಡೌನ್‌ ಮಾಡಲಾಗುವುದು ಎಂದು ಪಿಡಿಓ ವಿಜಯಲಕ್ಷ್ಮಿ ಆನಿಗೋಳ ಹೇಳಿದರು.

Advertisement

ಅವರು ಗ್ರಾಮದಲ್ಲಿ ನಡೆದ ಕೋವಿಡ್‌ ನಿಯಂತ್ರಣ ಗ್ರಾಮಸಭೆಯಲ್ಲಿ ಮಾತನಾಡಿ, ಗ್ರಾಪಂ ಈಗಾಗಲೇ ಅಗತ್ಯ ಕ್ರಮಗಳನ್ನು ಪಾಲಿಸುತ್ತಿದೆ. ಕೋವಿಡ್‌ ನಿಯಂತ್ರಣಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಗ್ರಾಮಸ್ಥರು ಸಂಪೂರ್ಣ ಸಹಕಾರ ನೀಡಿ ಗ್ರಾಮವನ್ನು ಕೊರೊನಾ ಮುಕ್ತವನ್ನಾಗಿ ಮಾಡಲು ಸಹಕರಿಸಬೇಕು ಎಂದರು.

ಪಿಎಸಐ ಈರಪ್ಪ ರಿತ್ತಿ ಮಾತನಾಡಿ, ಗ್ರಾಮದಲ್ಲಿ 17 ಜನ ಸೋಂಕಿತರು ಇರುವುದರಿಂದ ಗ್ರಾಮಸ್ಥರ ರಕ್ಷಣಾತ್ಮಕ ಉದ್ದೇಶದಿಂದ ಸಾರ್ವಜನಿಕರು ಇದಕ್ಕೆ ಸ್ಪಂದಿಸಿ ಸಹಕಾರ ನೀಡಬೇಕು ಎಂದರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಗ್ರಾಮದಲ್ಲಿ ಹೋಂ ಕ್ವಾರಂಟೆ„ನ್‌ ಆಗುವುದು ಸಾಧ್ಯವಿಲ್ಲ. ಗ್ರಾಮದಲ್ಲಿ ಚಿಕ್ಕ ಚಿಕ್ಕ ಮನೆಗಳು ಇರುವುದರಿಂದ ಪ್ರತ್ಯೇಕ ಕೊಠಡಿಗಳ ಸೌಲಭ್ಯ ಅತಿ ವಿರಳ. ಹಾಗಾಗಿ ಗ್ರಾಮದಲ್ಲಿ ಎರಡು ಹಾಸ್ಟೆಲ್‌ಗ‌ಳಿದ್ದು, ಅವುಗಳಲ್ಲಿ ಒಂದನ್ನು ಈ ಪ್ರಕ್ರಿಯೆಗೆ ಬಳಸಿಕೊಳ್ಳಲು ಹೇಳಿದರು.

ಗ್ರಾ.ಪಂ ಅಧ್ಯಕ್ಷೆ ಸವಿತಾ ಹೂವಿನ, ಸಿ.ಕೆ. ಮೆಕ್ಕೆದ, ಬಸನಗೌಡ ಪೊಲೀಸಪಾಟೀಲ, ಪರ್ವತಗೌಡ ಪಾಟೀಲ, ಗಜದಂಡ ಸುತಗಟ್ಟಿ, ರಾಮನಗೌಡ ಪಾಟೀಲ, ಅಶೋಕ ಭದ್ರಶೆಟ್ಟಿ, ನಾಗನಗೌಡ ಸಂಕಪ್ಪನವರ, ಸಂತೋಷ ಹಡಪದ, ಈರಣಗೌಡ ಶೀಲವಂತರ, ಶಂಕರ ಢವಳೆ ಮಲ್ಲಪ್ಪ ಢವಳೆ, ಅಂಗಡಿಗಳ ಮಾಲೀಕರು, ಗ್ರಾಪಂ ಸದಸ್ಯರು, ಅಂಗನವಾಡಿ-, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next