ಪುಣೆ, ಜ. 2: ಬಂಟರ ಸಂಘ ಪಿಂಪ್ರಿ ಚಿಂಚ್ವಾಡ್ ಇದರ ವಾರ್ಷಿಕ ಕ್ರೀಡಾಕೂಟವು ಡಿ. 22ರಂದು ಮದನ್ ಲಾಲ್ ಡಿಂಗ್ರಾ ಮೈದಾನ, ನಿಗ್ಡಿ ಇಲ್ಲಿ ಸಂಘದ ಅಧ್ಯಕ್ಷ ವಿಜಯ್ ಎಸ್. ಶೆಟ್ಟಿ ಬೋರ್ಕಟ್ಟೆ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದು ಈ ಸಂದರ್ಭ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ ಅಕ್ಷತ್ ಶೆಟ್ಟಿ ನೇತೃತ್ವದ ಎರ್ಮಾಳ್ ಬಂಟ್ಸ್ ತಂಡವು ವಿನ್ನರ್ ಪ್ರಶಸ್ತಿಯನ್ನು ಜಯಿಸಿತು.
ಪ್ರಸನ್ನ ಶೆಟ್ಟಿ ನೇತೃತ್ವದ ಕರಾಡಿ ಪ್ಯಾಂಥರ್ಸ್ ತಂಡ ರನ್ನರ್ ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಕಳೆದ 11 ವರ್ಷಗಳಿಂದ ನಿರಂತರವಾಗಿ ಎರ್ಮಾಳ್ ಬಂಟ್ಸ್ ತಂಡ ಇಲ್ಲಿ ಜಯವನ್ನು ದಾಖಲಿಸಿರುವುದು ವಿಶೇಷತೆಯಾಗಿದೆ. ಪುಣೆಯ ಹವ್ಯಾಸಿ ವಾಲಿಬಾಲ್ ಆಟಗಾರ ಅಕ್ಷತ್ ಶೆಟ್ಟಿಯವರು ವಾಲಿಬಾಲ್ ಅಕ್ಷತ್ ಎಂದೇ ಕರೆಯಲ್ಪಡುತ್ತಿದ್ದು ಪುಣೆಯಲ್ಲಿ ನಡೆಯುವ ವಿವಿಧ ಸಂಘ ಸಂಸ್ಥೆಗಳ ಕ್ರೀಡಾಕೂಟದಲ್ಲಿ ತನ್ನ ಉತ್ಸಾಹಿ ಆಟಗಾರರ ತಂಡದೊಂದಿಗೆ ಸಕ್ರಿಯರಾಗಿ ಪಾಲ್ಗೊಳ್ಳುವ ಹವ್ಯಾಸವನ್ನು ಬೆಳೆಸಿಕೊಂಡಿದ್ದು ಅನ್ಯ ಆಟಗಾರರಿಗೆ ಸ್ಫೂರ್ತಿ ತುಂಬುತ್ತಿದ್ದಾರೆ.
ಸಂಘದ ಅಧ್ಯಕ್ಷ ವಿಜಯ್ ಎಸ್. ಶೆಟ್ಟಿ, ಮಾಜಿ ಅಧ್ಯಕ್ಷರಾದ ವಿಶ್ವನಾಥ ಡಿ. ಶೆಟ್ಟಿ, ಎರ್ಮಾಳ್ ವಿಶ್ವನಾಥ ಶೆಟ್ಟಿ ಕೆ., ಪದ್ಮನಾಭ ಶೆಟ್ಟಿ, ಎರ್ಮಾಳ್ ಸೀತಾರಾಮ ಶೆಟ್ಟಿ, ಮಹೇಶ್ ಹೆಗ್ಡೆ ಕಟ್ಟಿಂಗೇರಿಮನೆ, ಮಾಜಿ ನಗರಸೇವಕ ಜಗದೀಶ್ ಶೆಟ್ಟಿ, ಪ್ರಸಾದ್ ಶೆಟ್ಟಿ, ಉಲ್ಲಾಸ್ ಶೆಟ್ಟಿ, ಸಂಘದ ಉಪಾಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಕೋಶಾಧಿಕಾರಿ ಸುಧಾಕರ ಶೆಟ್ಟಿ ಪೆಲತ್ತೂರು, ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ದಿನೇಶ್ ಶೆಟ್ಟಿ ಉಜಿರೆ, ಶಿಕ್ಷಣ ಮತ್ತು ಸಮಾಜಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ವಿಶ್ವನಾಥ ಕೆ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಪ್ರಿಯಾ ಜೆ. ಶೆಟ್ಟಿ ಉಪಸ್ಥಿತರಿದ್ದರು, ತಂಡವನ್ನು ಅಭಿನಂದಿಸಿದರು.
-ಚಿತ್ರ-ವರದಿ: ಕಿರಣ್ ಬಿ. ರೈ ಕರ್ನೂರು