Advertisement

ವೊಡಾಫೋನ್‌, ಐಡಿಯಾ ಪ್ರಿಪೇಯ್ಡ್ ಗ್ರಾಹಕರಿಗೆ ಧ್ವನಿ ಆಧಾರಿತ ರೀಚಾರ್ಜ್‌ ವ್ಯವಸ್ಥೆ

04:16 PM May 14, 2020 | sudhir |

ಮಣಿಪಾಲ: ಮೊದಲೆಲ್ಲ ರಿಚಾರ್ಜ್‌ ಮಾಡಲು ಹೋದಾಗ ರಿಚಾರ್ಜ್‌ ಮಾಡೋ ಹುಡುಗ ಮೊಬೈಲ್‌ ಕೈಗೆ ಕೊಟ್ಟು ಫೋನ್‌ ನಂಬರ್‌ ಹಾಕಿ ಎನ್ನುತ್ತಾನೆ. ನಾವು ನಂಬರ್‌ ನಮೂದಿಸಿದ ಬಳಿಕ ಮೊಬೈಲ್‌ಗೆ ರಿಚಾರ್ಜ್‌ ಆಗುತ್ತದೆ. ಈಗ ಹಾಗಿಲ್ಲ. ಇನ್ನೊಬ್ಬರ ವಸ್ತುಗಳನ್ನು ಮುಟ್ಟುವುದಕ್ಕೂ ಹಿಂದೆ ಮುಂದೆ ನೊxಬೇಕು. ಮುಟ್ಟಿದರೆ ಸ್ಯಾನಿಟೈಸರ್‌ ಬಳಸಿ ಕೈ ತೊಳೆದುಕೊಳ್ಳಬೇಕು. ಇಂಥ ಸಂದಿಗ್ಧ ದಿನದಲ್ಲಿ ವೊಡಾಫೋನ್‌ ಮತ್ತು ಐಡಿಯಾ ಪ್ರಿಪೇಯ್ಡ್ ಗ್ರಾಹಕರಿಗೆ ಧ್ವನಿ ಆಧಾರಿತ ರೀಚಾರ್ಜ್‌ ಆಯ್ಕೆಯನ್ನು ಪರಿಚಯಿಸುತ್ತಿದೆ. ವೊಡಾಫೋನ್‌ ಮತ್ತು ಐಡಿಯಾ ಕಂಪೆನಿಗಳು ಅಪ್ಲಿಕೇಶನ್‌ಗಳ ಮೂಲಕ ಪ್ರಿಪೇಯ್ಡ್ ಬಳಕೆದಾರರಿಗೆ ರೀಚಾರ್ಜ್‌ ಆಯ್ಕೆಯನ್ನು ನೀಡುತ್ತಿದ್ದರೂ, ಅನೇಕ ಗ್ರಾಹಕರು ತಮ್ಮ ಪ್ರಿಪೇಯ್ಡ್ ಮೊಬೈಲ್‌ ಸಂಖ್ಯೆಯನ್ನು ರೀಚಾರ್ಜ್‌ ಮಾಡಲು ಚಿಲ್ಲರೆ ವ್ಯಾಪಾರಿಗಳನ್ನು ಅವಲಂಬಿಸಿದ್ದಾರೆ. ಇದರಿಂದ ಕೋವಿಡ್ ವೈರಸ್‌ ಹರಡುವ ಸಾಧ್ಯತೆ ಇರುವುದರಿಂದ ಅದಕ್ಕಾಗಿ ಧ್ವನಿ ಆಧಾರಿತ ರೀಚಾರ್ಜ್‌ ಆಯ್ಕೆಯನ್ನು ಒದಗಿಸಿದೆ. ಧ್ವನಿ ಆಧಾರಿತ ರೀಚಾರ್ಜ್‌ ವ್ಯವಸ್ಥೆಯು ಸ್ಮಾರ್ಟ್‌ ಕನೆಕ್ಟ್ ಅಪ್ಲಿಕೇಶನ್‌ ಮೂಲಕ ಕಾರ್ಯನಿರ್ವಹಿಸುತ್ತದೆ.

Advertisement

ಧ್ವನಿ ಆಧಾರಿತ ಸಂಪರ್ಕವಿಲ್ಲದ ರೀಚಾರ್ಜ್‌ ಆಯ್ಕೆಯು ಹೇಗೆ ಕಾರ್ಯನಿರ್ವಹಿಸುತ್ತದೆ?
ಗ್ರಾಹಕರು ವೊಡಾಫೋನ್‌ ಐಡಿಯಾದ ಸ್ಮಾರ್ಟ್‌ ಕನೆಕ್ಟ್ ಚಿಲ್ಲರೆ ವ್ಯಾಪಾರಿ ಅಪ್ಲಿಕೇಶನ್‌ನಲ್ಲಿ ಗೂಗಲ್‌ ಧ್ವನಿಯ ಮೂಲಕ ಮೊಬೈಲ್‌ ಸಂಖ್ಯೆಯನ್ನು ನ‌ಮೂದಿಬಹುದು. ಈಗಾಗಲೇ ಗೂಗಲ್‌ ಸರ್ಚ್‌ನಲ್ಲಿ ಧ್ವನಿ ಆಧಾರಿತವಾಗಿ ಬಂದಿದ್ದರೂ ರಿಚಾರ್ಜ್‌ ವ್ಯವಸ್ಥೆ ಇಲ್ಲಿ ಇರಲಿಲ್ಲ. ಹೀಗಾಗಿ ಇಂಥದ್ದೊಂದು ವ್ಯವಸ್ಥೆ ಕೋವಿಡ್ ವಿರುದ್ಧ ಪ್ರಯೋಜನಕಾರಿಯಾಗಿದೆ ಎನ್ನಬಹುದು.
ಅಪ್ಲಿಕೇಶನ್‌ನಲ್ಲಿ ಧ್ವನಿಯನ್ನು ಹತ್ತು ಅಡಿಗಳ ಅಂತರದಿಂದಲೂ ಸೆರೆಹಿಡಿಯಲು ಸಾಧ್ಯವಾಗುತ್ತದೆ ಎಂದು ಈ ಕಂಪೆನಿ ಹೇಳಿಕೊಂಡಿದೆ.

ಸದ್ಯ ಇಂಗ್ಲಿಷ್‌ ಮತ್ತು ಹಿಂದಿ ಮಾತ್ರ
ಹೆಚ್ಚುವರಿಯಾಗಿ, ಧ್ವನಿ ಆಧಾರಿತ ರೀಚಾರ್ಜ್‌ ವೈಶಿಷ್ಟ್ಯವು ಇಂಗ್ಲಿಷ್‌ ಮತ್ತು ಹಿಂದಿ ಭಾಷೆಗಳಲ್ಲಿ ಲಭ್ಯವಿದೆೆ. ಹಂತ ಹಂತವಾಗಿ ಹೆಚ್ಚಿನ ಭಾಷೆಗಳನ್ನು ಅಳವಡಿಸಲಾಗುವುದೆಂದು ಕಂಪೆನಿ ತಿಳಿಸಿದೆ. ದೇಶಾದ್ಯಂತ ಕಿತ್ತಳೆ ಮತ್ತು ಹಸಿರು ವಲಯಗಳಲ್ಲಿನ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಸಾಮಾಜಿಕ ದೂರ ಪ್ರೋಟೋಕಾಲ್‌ ಅನ್ನು ಮೊದಲಾಗಿ ಅನುಷ್ಠಾನಗೊಳಿಸುತ್ತಿದೆ ಎಂದು ವೊಡಾಫೋನ್‌, ಐಡಿಯಾ ಹೇಳಿಕೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next