Advertisement
ಕಾರ್ಯಕ್ರಮದ ಆಯ್ದ ಭಾಗ ಇಲ್ಲಿದೆ..
Related Articles
Advertisement
ವಾಯ್ಸ್ ಓವರ್ ಇಂಡಸ್ಟ್ರಿಯಲ್ಲಿ ಉತ್ತಮ ಅವಕಾಶಗಳಿವೆ. ಇಲ್ಲಿ 100 ರೂಪಾಯಿಂದ 10 ಸಾವಿರದವರೆಗೂ ಬಹುಬೇಗನೇ ದುಡಿಯಬಹುದು. ಇಲ್ಲಿ ದುಡ್ಡು ಮಾಡಬಹದು. ಅದು ನಿಮ್ಮನ್ನು ನೀವು ಹೇಗೆ ಜನರಿಗೆ ಕನೆಕ್ಟ್ ಆಗ್ತೀರಿ ಅನ್ನೋದರ ಮೇಲೆ ನಿರ್ಧರಿತವಾಗುತ್ತದೆ. ನಿಮ್ಮೊಳಗಿನ ಪ್ರತಿಭೆಯನ್ನು ಹೇಗೆ ಹೊರ ತರುತ್ತಿರಿ ಅನ್ನೋದು ಮುಖ್ಯ. ನಿರಂತರ ಪರಿಶ್ರಮದಿಂದ ಇದು ಸಾದ್ಯ ಎನ್ನುತ್ತಾರೆ ಪ್ರದೀಪ್.
ವಾಯ್ಸ್ ಓವರ್ ನಲ್ಲಿ ಬರುವ ಏರಿಳಿತಗಳ ಸವಾಲಗಳನ್ನು ಹೇಗೆ ಸ್ವೀಕರಿಸಿದ್ದೀರಿ?
ನನ್ನ ಪ್ರಕಾರ ಯಾವುದೋ ಒಂದು ಕಾರ್ತಕ್ರಮಕ್ಕೆ ವಾಯ್ಸ್ ಓವರ್ ನೀಡುವಾಗ. ನಮ್ಮನ್ನು ನಾವು ಒಬ್ಬ ನಟನಂತೆ ಪಳಗಿಸಿಕೊಳ್ಳಬೇಕು. ಹೇಗೆ ಒಬ್ಬ ನಟ ಕಥೆಯ ಪರಿಸ್ಥಿತಿಗೆ ಅನುಗುಣವಾಗಿ ತನ್ನ ಮಾತು,ಭಾವನೆ, ವರ್ತನೆಯನ್ನು ಹೊಂದಿಸಿಕೊಂಡು ನಟಿಸುತ್ತಾನೋ, ಹಾಗೆಯೇ ವಾಯ್ಸ್ ಓವರ್ ನಲ್ಲಿ ಕೂಡ ಆಯಾ ಕಾರ್ಯಕ್ರಮದ ಥೀಮ್ ಅನ್ನು ನಾವು ನಮ್ಮ ಧ್ವನಿಯನ್ನೇ ನಟನೆಯ ಹಾಗೆ ಬಳಸಿಕೊಳ್ಳಬೇಕು.
ಸಾಧನೆಗೆ ಊರಿಂದ ಹೊರಗೆ ಹೋಗುವುದು ಮುಖ್ಯವೂ ಅಥವಾ ಹೊರಗೆ ?
ನಾನು ಮನೆಯಿಂದ 19 ವರ್ಷ ಮನೆಯ ಹೊರಗೆ ಇದ್ದೆ. ಇದರಲ್ಲಿ 12 ವರ್ಷ ಬೆಂಗಳೂರಿನಲ್ಲಿ ಇದ್ದೆ. ಈ ಸಮಯದಲ್ಲಿ ನನ್ನ ಪ್ರತಿಭೆಯನ್ನು ತೋರಿಸಿಕೊಳ್ಳಲು ಸಿನಿಮಾದಲ್ಲಿ ನಟಿಸುವ ಅವಕಾಶ, ಧಾರಾವಾಹಿನಲ್ಲಿ ಅಭಿನಯ, ನಿರೂಪಣೆ ಹಾದಿಯಲ್ಲಿ ನಡೆಯುವ ಅವಕಾಶಗಳು ಸಿಕ್ಕಿತ್ತು. ಈಗ ಅದೆಲ್ಲಾವನ್ನೂ ಪಡೆದು, ಅದೇ ಉತ್ಸಾಹ,ಹುಮ್ಮಸ್ಸಿನಿಂದ ಮನೆಯಿಂದನೇ ಕಳೆದ 4 ವರ್ಷದಿಂದ ಊರಿನಲ್ಲಿದ್ದೇನೆ. ಈಗಿನ ಸಿಟಿಗಳು ಹಿಂದೆ ಹಳ್ಳಿ ಆಗಿತ್ತು. ಈಗ ಡೆವೆಲಪ್ ಆಗಿವೆ. ತಂತ್ರಜ್ಞಾನ ಬೆಳೆದಿರುವುದರಿಂದ. ನಮ್ಮನ್ನು ನಾವು ಒಂದು ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಸಹಾಯವಾಗುತ್ತದೆ. ಅದಕ್ಕೆ ಊರಾಗಲಿ ಅಥವಾ ಸಿಟಿಯಾಗಲಿ ಯಾವ ಸ್ಥಳವೂ ಸೂಕ್ತ.