ಮುಂಬಯಿ: ಭಾರತದ ಪ್ರಮುಖ ಟೆಲಿಕಾಂ ಆಪರೇಟರ್ ಆಗಿರುವ ವಿಐ (ವೊಡಾಫೋನ್-ಐಡಿಯಾ) ಭಾರತದ ಯುವಕರಿಗೆ ಉದ್ಯೋಗವನ್ನು ಹುಡುಕಲು, ಹೆಚ್ಚು ಉದ್ಯೋಗಾರ್ಹತೆ ಗಳಿಸಿಕೊಳ್ಳಲು ಮತ್ತು ಸರ್ಕಾರಿ ಉದ್ಯೋಗಗಳಿಗೆ ಸಿದ್ಧರಾಗಲು ಸಹಾಯ ಮಾಡಲು ಹಲವು ಕೊಡುಗೆಗಳನ್ನು ಘೋಷಿಸಿದೆ.
ತನ್ನ ಗ್ರಾಹಕರ ಉತ್ತಮ ನಾಳೆಗಾಗಿ, ವಿಐ ಜಾಬ್ಸ್ ಅಂಡ್ ಎಜ್ಯುಕೇಶನ್, ಭಾರತದ ಅತಿದೊಡ್ಡ ಉದ್ಯೋಗ ಹುಡುಕಾಟ ವೇದಿಕೆಯಾದ ’ಅಪ್ನಾ’, ಪ್ರಮುಖ ಇಂಗ್ಲಿಷ್ ಕಲಿಕೆಯ ವೇದಿಕೆ ’ಎಂ ಗುರು’ ಮತ್ತು ಸರ್ಕಾರಿ ಉದ್ಯೋಗ ಪರೀಕ್ಷೆಯ ತಯಾರಿಯಲ್ಲಿ ಪರಿಣತಿ ಹೊಂದಿರುವ ’ಪರೀಕ್ಷಾ’ ವೇದಿಕೆಯನ್ನು ಪರಿಚಯಿಸಿದೆ.
ಇದನ್ನೂ ಓದಿ:ಫ್ಲಿಪ್ ಕಾರ್ಟ್ ನಿಂದ ಕರಕುಶಲಕರ್ಮಿಗಳಿಗಾಗಿ ಸಮರ್ಥ್ ಮಾರಾಟ ಮೇಳ
ಪ್ರಾಥಮಿಕವಾಗಿ ಭಾರತದಲ್ಲಿ ಹೆಚ್ಚಿನ ಪ್ರಿಪೇಯ್‌ಡ್ ಬಳಕೆದಾರರನ್ನು ಗುರಿಯಾಗಿರಿಸಿಕೊಂಡಿತುವ ವಿಐ ಆ್ಯಪ್‌ನಲ್ಲಿನ ವಿ ಜಾಬ್‌ಸ್ & ಎಜ್ಯುಕೇಶನ್, ಯುವಕರಿಗೆ ಉದ್ಯೋಗಗಳನ್ನು ಹುಡುಕಲು, ಮಾತನಾಡುವ ಇಂಗ್ಲಿಷ್ ಕೌಶಲ್ಯಗಳನ್ನು ಸುಧಾರಿಸಲು ಮತ್ತು ಸರ್ಕಾರದ ಪರೀಕ್ಷೆಗಳಲ್ಲಿ ಉತ್ಕೃಷ್ಟತೆಯನ್ನು ಸಾಧಿಸಲು ಈ ಸೇವೆ ಪರಿಚಯಿಸಿದೆ.
ಈ ವಿಶಿಷ್ಟ ಮೌಲ್ಯವರ್ಧಿತ ಸೇವೆ ಕುರಿತು ಪ್ರತಿಕ್ರಿಯಿಸಿದ, ವೊಡಾಫೋನ್ ಐಡಿಯಾ ಲಿಮಿಟೆಡ್‌ನ ಸಿಎಂಓ, ಅವನೀಶ್ ಖೋಸ್ಲಾ, ಈ ದೇಶದ ಯುವಕರ ಪ್ರಮುಖ ಆಕಾಂಕ್ಷೆಯು ಉತ್ತಮ ಉದ್ಯೋಗವನ್ನು ಪಡೆಯುವುದು ಮತ್ತು ಹೆಚ್ಚು ಉದ್ಯೋಗಾರ್ಹತೆ ಗಳಿಸಿಕೊಳ್ಳುವುದಾಗಿದೆ. ಇಂದಿನ ಯುವಕರಿಗೆ ಡಿಜಿಟಲ್ ಕೌಶಲ್ಯ ಮತ್ತು ಮಾತನಾಡುವ ಇಂಗ್ಲಿಷ್‌ನಲ್ಲಿ ನಿರರ್ಗಳತೆಯ ಪ್ರಸ್ತುತವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಈ ಅಪ್ಲಿಕೇಷನ್‍ಗಳನ್ನು ರೂಪಿಸಲಾಗಿದೆ ಎಂದರು.