ಚೆನ್ನೈ: ಖ್ಯಾತ ಕರ್ನಾಟಕ ಸಂಗೀತಗಾರ್ತಿ ಬಾಂಬೆ ಜಯಶ್ರೀ ರಾಮನಾಥ್ ಅವರು ಬ್ರಿಟನ್ ಪ್ರವಾಸದ ವೇಳೆ ಆರೋಗ್ಯ ಸಮಸ್ಯೆ ಅನುಭವಿಸಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ಶುಕ್ರವಾರ ತಿಳಿಸಿದ್ದಾರೆ.
ಹೆಸರಾಂತ ಗಾಯಕಿಯ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಪೋಸ್ಟ್ ಮಾಡಲಾದ ಹೇಳಿಕೆಯ ಪ್ರಕಾರ, ಸಂಗೀತ ಕಾರ್ಯಕ್ರಮಕ್ಕಾಗಿ ಯುಕೆಯಲ್ಲಿರುವ ಜಯಶ್ರೀ ರಾಮನಾಥ್ ಅವರು ರಾಷ್ಟ್ರೀಯ ಆರೋಗ್ಯ ಸೇವೆಯಿಂದ (ಎನ್‌ಎಚ್‌ಎಸ್) “ಸಕಾಲಿಕ ವೈದ್ಯಕೀಯ ಚಿಕಿತ್ಸೆ ಪಡೆದರು ಮತ್ತು ಪ್ರಸ್ತುತ ಸ್ಥಿರವಾಗಿದ್ದಾರೆ.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರೂ, ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶಿತರಾಗಿದ್ದ ಜಯಶ್ರೀ, ಸಂಗೀತ ಕಾರ್ಯಕ್ರಮಕ್ಕೆಂದು ಬ್ರಿಟನ್ ಗೆ ತೆರಳಿದ್ದರು.
ಪದ್ಮಶ್ರೀ ಪುರಸ್ಕೃತ ಗಾಯಕಿಯ ಕುಟುಂಬವು ಗೌಪ್ಯತೆಯನ್ನು ಕೋರಿತ್ತು, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಸಾರವಾಗುವ ಸಂದೇಶಗಳನ್ನು ನಿರ್ಲಕ್ಷಿಸುವಂತೆ ಅವರ ಅಭಿಮಾನಿಗಳನ್ನು ಒತ್ತಾಯಮಾಡಿದೆ.
58 ರ ಹರೆಯದ ಜಯಶ್ರೀ ರಾಮನಾಥ್ ಅವರು ಅಪಧಮನಿಯ ಗೋಡೆಯ ಶಸ್ತ್ರಚಿಕಿತ್ಸಾ ವಿಧಾನಕ್ಕೆ ಒಳಗಾಗಿದ್ದಾರೆ ಎಂದು ಅವರ ಕುಟುಂಬದ ಹತ್ತಿರದ ಮೂಲಗಳು ತಿಳಿಸಿವೆ.
ಜಯಶ್ರೀ ರಾಮನಾಥ್ ಅವರು ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಬಹು ಭಾಷೆಗಳಲ್ಲಿ ಹಾಡುಗಳ ಮೂಲಕ ಪ್ರಖ್ಯಾತರಾಗಿದ್ದಾರೆ.