ಮಾಸ್ಕೋ: “ಉಕ್ರೇನ್ ವಿರುದ್ಧದ ಯುದ್ಧವನ್ನು ಶೀಘ್ರವೇ ಮುಕ್ತಾಯಗೊಳಿಸಬೇಕು ಎಂಬ ಇರಾದೆಯಲ್ಲಿದ್ದೇನೆ. ಅದಕ್ಕಾಗಿ ನಾವು ಕೆಲಸ ಮಾಡುತ್ತಿದ್ದೇವೆ’
– ಹೀಗೆಂದು ಹೇಳಿದ್ದು ಬೇರೆ ಯಾರೂ ಅಲ್ಲ. 300 ದಿನಗಳ ಹಿಂದೆ ಉಕ್ರೇನ್ ವಿರುದ್ಧ ತಕರಾರು ತೆಗೆದು ದಾಳಿ ಆರಂಭಿಸಿ ದ್ದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅಮೆರಿಕಕ್ಕೆ ದಿಢೀರ್ ಪ್ರವಾಸ ಕೈಗೊಂಡಿರುವಂತೆಯೇ ಈ ಹೇಳಿಕೆ ಹೊರಬಿದ್ದಿದೆ.
ಮಾಸ್ಕೋದಲ್ಲಿ ಮಾತನಾಡಿದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ರಷ್ಯಾ ಯುದ್ಧವನ್ನು ಮುಕ್ತಾಯ ಮಾಡು ವುದರ ಬಗ್ಗೆ ಆಸಕ್ತಿ ಹೊಂದಿದ್ದರೂ ಅಮೆರಿಕ ಅದಕ್ಕೆ ಅನುವು ಮಾಡಿಕೊಡುತ್ತಿಲ್ಲ. ನಮ್ಮ ದೇಶವನ್ನು ದುರ್ಬಲಗೊಳಿಸಲು ಮುಂದಾಗಿದೆ ಎಂದು ದೂರಿದ್ದಾರೆ.
“ಶೀಘ್ರವೇ ಕದನ ಮುಕ್ತಾಯಗೊಳಿಸಬೇಕು ಎಂಬ ಉದ್ದೇಶ ಹೊಂದಿ ದ್ದೇವೆ. ಅದಕ್ಕಾಗಿ ನಾವು ಕೆಲಸ ಮಾಡು ತ್ತಿದ್ದೇವೆ. ಮಾತುಕತೆಯ ಮೂಲಕ ಹೇಗಾ ದರೂ ಮಾಡಿ ಬಿಕ್ಕಟ್ಟು ಶಮನ ಮಾಡ ಬೇಕು ಎಂಬ ಹಂಬ ಲದಿಂದ ಇದ್ದೇವೆ’ ಎಂದು ಪುತಿನ್ ಹೇಳಿಕೊಂಡಿದ್ದಾರೆ.
ಇದೇ ವೇಳೆ, ರಷ್ಯಾ ಸೇನಾ ಮುಖ್ಯಸ್ಥ ಪ್ರತಿಕ್ರಿಯೆ ನೀಡಿ, ಸದ್ಯ ಉಕ್ರೇನ್‌ನಲ್ಲಿ ದಾಳಿ ಮುಂದುವರಿದಿದೆ. ಆ ದೇಶದ ಪಶ್ಚಿಮ ಭಾಗದ ಡಾನೆಸ್ಕ್ನಲ್ಲಿ ಪ್ರದೇ ಶಗಳನ್ನು ವಶ ಪಡಿ ಸುವತ್ತ ಮುಂದುವರಿದಿದ್ದೇವೆ ಎಂದರು.
ಇನ್ನೊಂದೆಡೆ ರಷ್ಯಾದ ವಾಂಗರ್ ಗ್ರೂಪ್‌ಗೆ ಶಸ್ತ್ರಾಸ್ತ್ರ ಪೂರೈಕೆ ಮಾಡಿಲ್ಲ ಎಂದು ಉತ್ತರ ಕೊರಿಯಾ ಹೇಳಿಕೊಂಡಿದೆ.
ಯುದ್ಧ ನಿಲ್ಲಿಸಲು ಬಯಸುತ್ತೇವೆ ಎಂಬ ಹೇಳಿಕೆಯನ್ನು ಪುತಿನ್ ನೀಡಿದ ಬಳಿಕವೂ ಉಕ್ರೇನ್ ಮೇಲಿನ ದಾಳಿ ಮುಂದುವರಿದಿದೆ. ಶುಕ್ರವಾರ ಪೂರ್ವ ಮತ್ತು ದಕ್ಷಿಣ ಉಕ್ರೇನ್ ಮೇಲೆ ರಾಕೆಟ್, ಮೋರ್ಟಾರ್ ಹಾಗೂ ವೈಮಾನಿಕ ದಾಳಿಯನ್ನು ರಷ್ಯಾ ನಡೆಸಿದೆ.