Advertisement

ಪ್ರಧಾನಿ ಮೋದಿಯನ್ನು ‘ದೇಶಭಕ್ತ’ ಎಂದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್

10:06 AM Oct 28, 2022 | Team Udayavani |

ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಗುರುವಾರ ಚಿಂತಕರ ಚಾವಡಿಯಾದ ವಾಲ್ಡೈ ಕ್ಲಬ್‌ ನಲ್ಲಿ ನಡೆಸಿದ ತಮ್ಮ ವಾರ್ಷಿಕ ಭಾಷಣದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಸ್ವತಂತ್ರ ವಿದೇಶಾಂಗ ನೀತಿಯನ್ನು ಶ್ಲಾಘಿಸಿದರು. ಮೋದಿ ಅವರು ದೇಶಭಕ್ತ ಎಂದು ಕರೆದ ಪುಟಿನ್, ಭಾರತದಲ್ಲಿ ಮೋದಿ ನಾಯಕತ್ವದಲ್ಲಿ ಸಾಕಷ್ಟು ಕೆಲಸ ಮಾಡಲಾಗಿದೆ ಎಂದು ಹೇಳಿದರು.

Advertisement

“ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸ ಮಾಡಲಾಗಿದೆ. ಅವರು ತಮ್ಮ ದೇಶದ ‘ದೇಶಭಕ್ತ’ರಾಗಿದ್ದಾರೆ. ಅವರ `ಮೇಕ್ ಇನ್ ಇಂಡಿಯಾ’ ಕಲ್ಪನೆಯು ಆರ್ಥಿಕ ಮತ್ತು ನೈತಿಕತೆ ಎರಡಕ್ಕೂ ಸಂಬಂಧಿಸಿದೆ. ಭವಿಷ್ಯವು ಭಾರತಕ್ಕೆ ಸೇರಿದ್ದು”ಎಂದು ಪುಟಿನ್ ಹೇಳಿದರು.

ರಾಯಿಟರ್ಸ್ ಅನುವಾದದ ಪ್ರಕಾರ ಕ್ರೆಮ್ಲಿನ್ ವಾಲ್ಡೈ ಡಿಸ್ಕಷನ್ ಕ್ಲಬ್‌ ನಲ್ಲಿ ಮಾತನಾಡುತ್ತಾ,” ಬ್ರಿಟೀಷ್ ವಸಾಹತು ಪ್ರದೇಶದಿಂದ ಆಧುನಿಕ ರಾಷ್ಟ್ರವಾಗುವತ್ತ ಭಾರತದ ಅಭಿವೃದ್ಧಿಯು ಮಹತ್ತರವಾದದ್ದು” ಎಂದು ಕರೆದ ರಷ್ಯಾದ ಅಧ್ಯಕ್ಷರು, ಸುಮಾರು 1.5 ಶತಕೋಟಿ ಜನರು ಮತ್ತು ಅಭಿವೃದ್ಧಿ ಕೆಲಸಗಳು ಭಾರತದ ಬಗ್ಗೆ ಪ್ರತಿಯೊಬ್ಬರು ಗೌರವ ಮತ್ತು ಮೆಚ್ಚುಗೆ ಸೂಚಿಸಲು ಕಾರಣವಾಗುತ್ತವೆ’’ ಎಂದು ಹೇಳಿದರು.

ಇದನ್ನೂ ಓದಿ:ತೆರೆಗೆ ಬಂತು ನಮ್ಮ ಹೆಮ್ಮೆಯ ‘ಗಂಧದ ಗುಡಿ’: ಡ್ರೀಮ್ ಪ್ರಾಜೆಕ್ಟ್ ಅಶ್ವಿನಿ ಪುನೀತ್ ಮನದ ಮಾತು

ಭಾರತ ಮತ್ತು ರಷ್ಯಾದ ನಡುವೆ ಒಂದು ವಿಶೇಷ ಸಂಬಂಧವಿದೆ ಎಂದರು. “ನಮ್ಮ ನಡುವೆ ಹಲವು ದಶಕಗಳ ನಿಕಟ ಮಿತ್ರ ಸಂಬಂಧದ ತಳಹದಿಯಿದೆ. ನಾವು ಎಂದಿಗೂ ಯಾವುದೇ ಕಷ್ಟಕರವಾದ ಸಮಸ್ಯೆಗಳನ್ನು ಎದುರಿಸಲಿಲ್ಲ. ನಾವು ಪರಸ್ಪರರ ಬೆಂಬಲಕ್ಕೆ ನಿಂತಿದ್ದೇವೆ. ಈಗಲೂ ಅದು ಮುಂದುವರಿದಿದೆ, ಭವಿಷ್ಯದಲ್ಲಿಯೂ ಇರುತ್ತದೆ ಎಂದು ನನಗೆ ಖಾತ್ರಿಯಿದೆ” ಎಂದು ಪುಟಿನ್ ತಮ್ಮ ಭಾಷಣದಲ್ಲಿ ಹೇಳಿದರು.

Advertisement

ಕೃಷಿಗಾಗಿ ರಸಗೊಬ್ಬರ ಸರಬರಾಜನ್ನು ಹೆಚ್ಚಿಸುವಂತೆ ಮೋದಿ ಕೇಳಿದ್ದರು. ನಾವು 7.6ರಷ್ಟು ಪಟ್ಟು ಹೆಚ್ಚು ಸರಬರಾಜು ಹೆಚ್ಚಿಸಿದ್ದೇವೆ. ಕೃಷಿಯಲ್ಲಿ ವ್ಯಾಪಾರ ಸುಮಾರು ದ್ವಿಗುಣಗೊಂಡಿದೆ ಎಂದು ವ್ಲಾಡಿಮಿರ್ ಪುಟಿನ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next