ವಾಷಿಂಗ್ಟನ್: ಟೈಮ್ ನಿಯತಕಾಲಿಕೆಯು 2022ನೇ ಸಾಲಿನ ವಿಶ್ವದ 100 ಪ್ರಭಾವಿಗಳ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ.
ವಿಶೇಷವೆಂದರೆ ಈ ಪಟ್ಟಿಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಇಬ್ಬರೂ ಸ್ಥಾನ ಪಡೆದುಕೊಂಡಿದ್ದಾರೆ.
ಕಳೆದ ಮೂರು ತಿಂಗಳಿಂದ ರಷ್ಯಾ -ಉಕ್ರೇನ್ ನಡುವೆ ಸತತ ಯುದ್ಧ ನಡೆಯುತ್ತಿರುವಾಗಲೇ ಈ ಇಬ್ಬರೂ ನಾಯಕರ ಹೆಸರು ಪಟ್ಟಿಯಲ್ಲಿರುವುದು ಚರ್ಚೆಗೆ ಕಾರಣವಾಗಿದೆ. ಇವರನ್ನು ಹೊರತುಪಡಿಸಿ ಪಟ್ಟಿಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೇರಿ ಅನೇಕರಿದ್ದಾರೆ.
ಭಾರತದ ಮೂವರಿಗೆ ಸ್ಥಾನ:
ಪ್ರಭಾವಿಗಳ ಪಟ್ಟಿಯಲ್ಲಿ ಭಾರತದ ಉದ್ಯಮಿ ಗೌತಮ್ ಅದಾನಿ, ಸುಪ್ರೀಂ ಕೋರ್ಟ್ ವಕೀಲೆ ಕರುಣಾ ನಂದಿ, ಕಾಶ್ಮೀರಿ ಮಾನವ ಹಕ್ಕುಗಳ ಹೋರಾಟಗಾರ ಖುರ್ರಮ್ ಪರ್ವೇಜ್ ಕೂಡ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಆರು ವಿಭಾಗಗಳಿರುವ ಪಟ್ಟಿಯಲ್ಲಿ ಗೌತಮ್ ಅದಾನಿ ಟೈಟಾನ್ಸ್ ವಿಭಾಗದಲ್ಲಿದ್ದರೆ, ಕರುಣಾ ಮತ್ತು ಖುರ್ರಮ್ ನಾಯಕರ ವಿಭಾಗದಲ್ಲಿ ಕಾಣಿಸಿಕೊಂಡಿದ್ದಾರೆ.