Advertisement

ವಿವೋ ವಿ 20 ಪ್ರೊ ಸೆಲ್ಫೀ ಕ್ಯಾಮೆರಾ, ಸ್ಲಿಮ್‌ ಡಿಸೈನ್‌!

06:23 PM Mar 31, 2021 | Team Udayavani |

ಆನ್‌ಲೈನ್‌ ಹೊರತುಪಡಿಸಿದಂತೆ ಆಫ್ಲೈನ್‌ ಸ್ಟೋರ್‌ಗಳಲ್ಲಿ ಅಂದರೆ ಮೊಬೈಲ್‌ ಫೋನ್‌ ಅಂಗಡಿಗಳಲ್ಲಿ ಮಾರಾಟವಾಗುವಬ್ರಾಂಡ್‌ಗಳಲ್ಲಿ ವಿವೋ, ಒಪ್ಪೊ ಹೆಸರು ಜನರಿಗೆ ಚಿರಪರಿಚಿತ.ವಿವೋ ಮೊಬೈಲ್‌ಗ‌ಳು ಕ್ಯಾಮೆರಾ ಮತ್ತು ಉತ್ತಮ ವಿನ್ಯಾಸಕ್ಕೆ ಜನಪ್ರಿಯವಾಗಿವೆ.

Advertisement

ಈ ವರ್ಷದ ಅಂತ್ಯದೊಳಗೆ ಭಾರತದಲ್ಲಿ 5ಜಿ ನೆಟ್‌ವರ್ಕ್‌ ಸೌಲಭ್ಯ ಜಾರಿಗೆ ಬರುವ ಸಾಧ್ಯತೆಯಿದೆ. ಹೀಗಾಗಿ ಮೊಬೈಲ್‌ ಫೋನ್‌ ಕೊಳ್ಳುವವರು 5ಜಿ ನೆಟ್‌ವರ್ಕ್‌ ಇರುವ ಫೋನನ್ನೇಕೊಳ್ಳೋಣ ಎಂದುಕೊಳ್ಳುತ್ತಾರೆ. 5ಜಿ, ಸ್ಲಿಮ್‌ಡಿಸೈನ್‌, ಉತ್ತಮ ‌ವಾದ ಪ್ರಾಥಮಿಕ ಮತ್ತುಮುಂಬದಿ ಕ್ಯಾಮೆರಾ ಹೊಂದಿರುವ ಒಂದುಫೋನ್‌, ವಿವೋ ವಿ20 ಪ್ರೊ. ಇದರ ದರ ಅಮೆಜಾನ್‌. ಇನ್‌ ಹಾಗೂ ಫ್ಲಿಪ್‌ ಕಾರ್ಟ್ ನಲ್ಲಿ 29,990 ರೂ. ಇದೆ.

ವಿನ್ಯಾಸ, ಆಕಾರ: ಕೆಲವು ಫೋನ್‌ಗಳು ತೂಕವಾಗಿರುತ್ತವೆ ಮತ್ತು ಕೈಯಲ್ಲಿಹಿಡಿಯಲು ಕಷ್ಟ ಅನಿಸುವಷ್ಟು ದಪ್ಪವಾಗಿರುತ್ತವೆ. ಅಂಥವು ಅನೇಕ ಗ್ರಾಹಕರಿಗೆಇಷ್ಟವಾಗುವುದಿಲ್ಲ. ಆದರೆ, ವಿವೋ ವಿ20ಪ್ರೊ. 7.49 ಮಿ.ಮೀ. ಮಂದವಿದ್ದು 170 ಗ್ರಾಂ ತೂಕವಿದೆ. ಕೈಯಲ್ಲಿ ಹಿಡಿದ ತಕ್ಷಣ ಅದರ ಹಗುರತೆ, ತೆಳುವಾಗಿರುವಿಕೆಗಮನಕ್ಕೆ ಬರುತ್ತದೆ. ಮೊಬೈಲ್‌ ನ ಫ್ರೇಮ್ ಲೋಹದ್ದಾಗಿದ್ದು,ಹಿಂಬದಿ ಗ್ಲಾಸ್‌ನಿಂದ ಮಾಡಲಾಗಿದೆ. ಹಿಂಬದಿ ಗಾಜು ಎರಡುಬಣ್ಣಗಳ ಶೇಡ್‌ಗಳನ್ನು ಹೊಂದಿದ್ದು, ನೋಡಲು ಆಕರ್ಷಕವಾಗಿ ಕಾಣುತ್ತದೆ.

ಪರದೆ: 6.44 ಇಂಚಿನ, ಅಮೋಲೆಡ್‌ ಎಫ್ಎಚ್‌ಡಿ ಫ್ಲಸ್‌ ಪರದೆ ಹೊಂದಿದೆ. 2400 X 1080 ಪಿಕ್ಸಲ್‌ ರೆಸ್ಯೂಲೇಷನ್‌ಹೊಂದಿದೆ. ಹೀಗಾಗಿ ಚಿತ್ರಗಳು, ವಿಡಿಯೋಗಳು ಬಹಳ ರಿಚ್‌ಆಗಿ ಕಾಣುತ್ತವೆ. ಅಲ್ಲದೇ ಮೊಬೈಲ್‌ನ ಪರದೆ ನೋಡುತ್ತಿದ್ದರೆಹೆಚ್ಚಿನ ಬೆಲೆಯ ಫೋನ್‌ ಅನುಭವ ನೀಡುತ್ತದೆ. ಸ್ನ್ಯಾಪ್‌ಡ್ರಾಗನ್‌ 765

ಪ್ರೊಸೆಸರ್‌: ಇದರಲ್ಲಿರುವುದು 7ಎನ್‌ಎಂ ಕ್ವಾಲ್‌ಕಾಂ ಸ್ನ್ಯಾಪ್‌ ಡ್ರಾಗನ್‌ 765ಜಿ ಪ್ರೊಸೆಸರ್‌. ಇದು 5ಜಿ ನೆಟ್‌ವರ್ಕ್‌ ಬೆಂಬಲಿಸುತ್ತದೆ. ಅಂಡ್ರಾಯ್ಡ್ 11 ಗೆ ಫ‌ನ್ ‌ಟಚ್‌ ಕಾರ್ಯಾಚರಣೆಯ ಬೆಂಬಲವಿದೆ. ಈ ಪ್ರೊಸೆಸರ್‌ ಮಧ್ಯಮ ವರ್ಗದಲ್ಲಿ ಉನ್ನತವಾದ ಪ್ರೊಸೆಸರ್‌ ಆಗಿದ್ದು, ವೇಗವಾಗಿಕಾರ್ಯಾಚರಿಸುತ್ತದೆ. ಬಳಕೆಯಲ್ಲಿ ಯಾವುದೇ ಅಡಚಣೆಕಾಣಲಿಲ್ಲ. 128 ಆಂತರಿಕ ಸಂಗ್ರಹ ಹಾಗೂ 8 ಜಿಬಿ ರ್ಯಾಮ್‌ ಸವಲತ್ತು ನೀಡಲಾಗಿದೆ.

Advertisement

ಕ್ಯಾಮೆರಾ: ಹಿಂಬದಿಯಲ್ಲಿ 64 ಮೆಗಾಪಿಕ್ಸಲ್, 8 ಮೆ.ಪಿ. ಮತ್ತು 2 ಮೆ.ಪಿ. ಲೆನ್ಸ್ ಗಳನ್ನು ಒಳಗೊಂಡ ಕ್ಯಾಮೆರಾ ಇದೆ. ಮಂದ ಬೆಳಕಿನಲ್ಲೂ ಉತ್ತಮ ಫ‌ಲಿತಾಂಶ ನೀಡುತ್ತದೆ. ವಸ್ತುವಿನ ಸಣ್ಣ ವಿವರಗಳು ಚೆನ್ನಾಗಿ ಮೂಡಿ ಬರುತ್ತದೆ. ಸೂಕ್ಷ್ಮ ವಸ್ತುವಿನ ಮೇಲೆ ಕೇವಲ 2.5 ಸೆಂ.ಮೀ. ಹತ್ತಿರದಲ್ಲಿ ಕ್ಯಾಮೆರಾ ಹಿಡಿದರೂ ಅದರ ಫೋಟೋ ಚೆನ್ನಾಗಿ ಬರುತ್ತದೆ. ಸೆಲ್ಫಿಗೆ ಎರಡು ಕ್ಯಾಮೆರಾ ನೀಡಲಾಗಿದೆ. ಒಂದು ಲೆನ್ಸ್  44 ಮೆಗಾಪಿಕ್ಸಲ್‌ ಇದ್ದರೆ,ಇನ್ನೊಂದು 8 ಮೆ.ಪಿ. ಸೂಪರ್‌ ವೈಡ್‌ ಆಂಗಲ್‌ ಕ್ಯಾಮೆರಾ ನೀಡಲಾಗಿದೆ.

ಇದರಿಂದ ಸೆಲ್ಫಿಯಲ್ಲೇ ಗ್ರೂಪ್‌ ಫೋಟೋ ವನ್ನು ಸುಲಭವಾಗಿ ಹತ್ತಿರದಲ್ಲೇ ತೆಗೆಯ ಬಹುದು. ಅಲ್ಲದೇ ಸ್ಲೋ ಮೋಷನ್‌ ಸೆಲ್ಫಿ ವಿಡಿಯೋ ಕೂಡ ಮಾಡಬಹುದು. ಅಲ್ಲದೇ ಸೆಲ್ಫಿ ವಿಡಿಯೋವನ್ನು 4ಕೆರೆಸೂಲೇಶನ್‌ ನಲ್ಲಿ ತೆಗೆಯಬಹುದು. ಹೀಗಾಗಿ ಇದು ಸೆಲ್ಫಿ ಪ್ರಿಯರಿಗಾಗಿ ರೂಪಿಸಿರುವ ಕ್ಯಾಮೆರಾ ಎಂದೇ ಹೇಳಬಹುದು.

ಬ್ಯಾಟರಿ: ಇದರಲ್ಲಿ 4000 ಎಂಎಎಚ್‌ ಬ್ಯಾಟರಿ ಇದೆ. ಒಮ್ಮೆಚಾರ್ಜ್‌ಒಂ ಮಾಡಿದರೆ ಒಂದು ದಿನ ಪೂರ್ತಿ ಬಾಳಿಕೆ ಬರುತ್ತದೆ. ಇದಕ್ಕೆ 33 ವ್ಯಾಟ್‌ ವೇಗದ ಚಾರ್ಜ್‌ರ್‌ನೀಡಲಾಗಿದೆ. ಯುಎಸ್‌ಬಿ ಟೈಪ್‌ ಸಿ ಪೋರ್ಟ್‌ ನೀಡಲಾಗಿದೆ. ಶೇ. 65ರಷ್ಟು ಬ್ಯಾಟರಿ 30 ನಿಮಿಷದಲ್ಲಿ ಚಾರ್ಜ್‌ ಆಗುತ್ತದೆ.

 

ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next